ಪತ್ರಿಕೋದ್ಯಮ ಕವಲುದಾರಿಯಲ್ಲಿದೆ. ಕೃತಕ ಬುದ್ಧಿಮತ್ತೆ ( ಎಐ) ಬಂದ ಬಳಿಕ ಸಿಬ್ಬಂದಿ ತೆಗೆದು ಹಾಕುವುದು ಮಾಧ್ಯಮ ರಂಗಕ್ಕೂ ಬಂದಿದೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಮುದ್ರಣ, ದೃಶ್ಯ ಮಾಧ್ಯಮಕ್ಕೆ ತನ್ನದೆಯಾದ ಸವಾಲುಗಳಿವೆ. ಈಗಿನ ಹೊಸಬರು ಆರಂಭದಲ್ಲೇ ದೊಡ್ಡ ಹುದ್ದೆ, ಹೆಸರು, ಜನಪ್ರಿಯತೆ ಮತ್ತು ವೇತನ ಸಿಗಬೇಕೆಂದು ಆಸೆ ಇಟ್ಟುಕೊಂಡು ಬರುತ್ತಿದ್ದಾರೆ.ಆದರೆ,ಪತ್ರಿಕೋದ್ಯಮದ ಸವಾಲುಗಳನ್ನು ಹೊಸಬರು ಸ್ವೀಕರಿಸಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಅವಕಾಶವನ್ನು ಅವರು ಬಳಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ರಂಗನಾಥ ಭಾರದ್ವಾಜ್ ಸಲಹೆ ನೀಡಿದರು.