S Janaki: 'ಸ್ವರ ಸರಸ್ವತಿ', ಭಾರತೀಯ ಸಂಗೀತ ಲೋಕದ 'ಗಾನ ಕೋಗಿಲೆ', ಎಲ್ಲ ವಯಸ್ಸಿನ ಧ್ವನಿಗಳಲ್ಲಿಯೂ ಹಾಡಿದ ದಿಗ್ಗಜ ಗಾಯಕಿ ಎಸ್. ಜಾನಕಿ ಅಮ್ಮನವರ ಇನ್ನಿಲ್ಲ ಎಂಬ ಸುದ್ದಿಯಿಂದ ಇಡೀ ದೇಶದ ಸಂಗೀತ ಸಾಮ್ರಾಜ್ಯದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಂತಾಗಿದೆ. ದಶಕಗಳ ಕಾಲ ತಮ್ಮ ಕಂಚಿನ ಕಂಠದಿಂದ ಕೋಟ್ಯಂತರ ಹೃದಯಗಳನ್ನು ತಣಿಸಿ, ತಮ್ಮ ಹೆಬ್ಬಯಕೆಯಂತೆ ಕೊನೆಯ ಕ್ಷಣಗಳಲ್ಲಿ ಮೈಸೂರಿನಲ್ಲಿ ಕೊನೆಯುಸಿರೆಳೆದ ಮಹಾನ್ ಗಾಯಕಿಯ ಅಗಲಿಕೆಗೆ ಭಾರತೀಯ ಚಿತ್ರರಂಗ, ಸ್ವರ ಲೋಕ, ಹಲವು ಕ್ಷೇತ್ರಗಳ ಗಣ್ಯರು ಮತ್ತು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.