ಸಂವಿಧಾನಾತ್ಮಕ ರಣೆಗಳಿದ್ದರೂ ಕಕ ಮೂಲಸೌಕರ್ಯ, ಶಿಣ, ಉದ್ಯೋಗಾವಕಾಶ ಮತ್ತು ಆಡಳಿತಾತ್ಮಕ ಪ್ರತಿನಿಧಿತ್ವದಲ್ಲಿ ಇನ್ನೂ ಹಿಂದುಳಿದಿದೆ. 371(ಜೆ) ಉದ್ದೇಶವೇ ಈ ಅಂತರ ಕಡಿಮೆ ಮಾಡಬಹುದಿತ್ತು. ಆದರೆ ಸರ್ಕಾರದ ನೇಮಕಾತಿ, ಬಡ್ತಿ ಮತ್ತು ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಅಸಮತೋಲನ ಸ್ಪಷ್ಟವಾಗಿ ಕಾಣಿಸುತ್ತಿದೆ. ಪ್ರದೇಶದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ೂಷಿಸುತ್ತಿದ್ದರೂ ಹಣವನ್ನು ಅರ್ಥಪೂರ್ಣವಾಗಿ ಬಳಸುವಲ್ಲಿ ನಮ್ಮ ನಾಯಕರು ವಿಫಲವಾಗಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.