ಅಜ್ಞಾನ ಹೋಗಲಾಡಿಸುವ ಗುರು ಮಾರ್ಗ

ಭೂತಪುರದಲ್ಲಿ ಬುಧವಾರ ಗುರುಪೂರ್ಣಿಮೆ ನಿಮಿತ್ತ ಶ್ರೀ ಚಿಕ್ಕ ಶಿವಲಿಂಗೇಶ್ವರ ಸ್ವಾಮೀಜಿಯವರ ತುಲಾಭಾರ ನಡೆಯಿತು. ಗುಣವಂತರಾವ ಮಾಲಿಪಾಟೀಲ್​, ಶರಣಬಸಪ್ಪ ಮಾಲಿಪಾಟೀಲ್​, ಬಸವತರಾವ ಮಾಲಿಪಾಟೀಲ್​, ವಿಶಾಲ್​ ಪಾಟೀಲ್​ ಇತರರಿದ್ದರು.
ಭೂತಪುರದಲ್ಲಿ ಬುಧವಾರ ಗುರುಪೂರ್ಣಿಮೆ ನಿಮಿತ್ತ ಶ್ರೀ ಚಿಕ್ಕ ಶಿವಲಿಂಗೇಶ್ವರ ಸ್ವಾಮೀಜಿಯವರ ತುಲಾಭಾರ ನಡೆಯಿತು. ಗುಣವಂತರಾವ ಮಾಲಿಪಾಟೀಲ್​, ಶರಣಬಸಪ್ಪ ಮಾಲಿಪಾಟೀಲ್​, ಬಸವತರಾವ ಮಾಲಿಪಾಟೀಲ್​, ವಿಶಾಲ್​ ಪಾಟೀಲ್​ ಇತರರಿದ್ದರು.
Published on
ಚಿಂಚೋಳಿ: ಜೀವನದಲ್ಲಿ ಗುರು ತೋರುವ ಮಾರ್ಗ ಬೆಳಕಿನಂತಿದ್ದು, ಅಜ್ಞಾನ ಹೋಗಲಾಡಿಸಿ ಸುಜ್ಞಾನದತ್ತ ಕೊಂಡೊಯ್ಯುತ್ತದೆ. ಸನ್ಮಾರ್ಗದಲ್ಲಿ ನಡೆಯಲು ಗುರುವಿನ ಅನುಗ್ರಹ ಅತ್ಯಗತ್ಯ ಎಂದು ಶ್ರೀ ಚಿಕ್ಕ ಶಿವಲಿಂಗೇಶ್ವರ ದೇವರು ನುಡಿದರು. ಭೂತಪುರದ ಶ್ರೀ ಜೋಡಲಿಂಗೇಶ್ವರ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪಾದುಕಾ ಪೂಜೆ ಮತ್ತು ತುಲಾಭಾರ ಸೇವೆಯಲ್ಲಿ ಅವರು ಆಶೀರ್ವಚನ ನೀಡಿದರು. ಪ್ರಮುಖರಾದ ಗುಣವಂತರಾವ ಮಾಲಿಪಾಟೀಲ್​, ಶರಣಬಸಪ್ಪ ಮಾಲಿಪಾಟೀಲ್​, ಬಸವಂತರಾವ ಮಾಲಿಪಾಟೀಲ್​, ವಿಶಾಲ್​ ಪಾಟೀಲ್​, ವೀರಭ್ರಪ್ಪ ಮಾಲಿಪಾಟೀಲ್​, ಜಗದೇವಯ್ಯ ಕುಡಂಬಲ, ಬಸವರಾಜ ಬಿರಾದಾರ, ಸಂತೋಷ ಬಿರಾದಾರ, ಸಿದ್ದಪ್ಪ ಬಿರಾದಾರ, ಬಸವಂತರಾವ ಗದ್ದಿ, ಈಶ್ವರಪ್ಪ ಬಿರಾದಾರ, ಶರಣಪ್ಪ ಭಾಗೋಡಿ, ಶಿವಾನಂದ ಮಠಪತಿ, ಅಂಬಿಕಾ ತೇಗಲತಿಪ್ಪಿ ಇತರರಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net