ನಿಯಮಾವಯಂತೆ ಬೇಡಿಕೆ ಈಡೇರಿಕೆ ಅಸಾಧ್ಯ

,
,
Published on

ಪ್ರಮುಖ ಮುಖ್ಯಾಂಶಗಳು

  • ಧರಣಿ ಕೈಬಿಟ್ಟು ತಾಳ್ಮೆಯಿಂದ ಇರಿ
  • ಧರಣಿನಿರತ ಗುತ್ತಿಗೆ ನೌಕರರಿಗೆ ಗುಲ್ಬರ್ಗ ವಿವಿ ಆಡಳಿತ ಸ್ಪಷ್ಟನೆ
ಕಲಬುರಗಿ: ವೇತನ ನೇರ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ಕಾರ್ಯಸೌಧ ಎದುರು ಧರಣಿ ನಡೆಸುತ್ತಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ಇವರ ಬೇಡಿಕೆ ಈಡೇರಿಸುವುದು ಕಷ್ಟ ಸಾಧ್ಯ. ಹೀಗಾಗಿ ಟೆಂಡರ್​ ಪ್ರಕ್ರಿಯೆ ಜಾರಿಯಲ್ಲಿದ್ದು, ಏಜನ್ಸಿ ನೇಮಕ ಮಾಡುವವರೆಗೆ ತಾಳ್ಮೆಯಿಂದ ಇರಬೇಕು. ಧರಣಿ ಕೈ ಬಿಡಬೇಕು ಎಂದು ಗುಲ್ಬರ್ಗ ವಿವಿ ಕುಲಸಚಿವ ಪ್ರೊ.ರಮೇಶ ಲಂಡನ್​ಕರ್​ ಮನವಿ ಮಾಡಿದ್ದಾರೆ.
ಹೊರಗುತ್ತಿಗೆ ನೌಕರರಿಗೆ ನೇರವಾಗಿ ವಿಶ್ವವಿದ್ಯಾಲಯದಿಂದ ವೇತನ ಪಾವತಿಸಬೇಕು, ಕನಿಷ್ಟ ವೇತನ ದರದ ವ್ಯತ್ಯಾಸದ ಹಣ ಹಾಗೂ ದಂಡದ ಹಣ ಪಾವತಿಸಬೇಕು, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಟೆಂಡರ್​ ಪದ್ದತಿ ರದ್ದು ಪಡಿಸಬೇಕು ಎಂಬುದು ಇವರ ಬೇಡಿಕೆ. ಹೊರಗುತ್ತಿಗೆ ನೌಕರರಿಗೆ ಸರ್ಕಾರ ಅನುದಾನ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ಕರೆದಿರುವ ಟೆಂಡರ್​ ರದ್ದುಪಡಿಸಲು ಆಗ್ರಹಿಸುತ್ತಿದ್ದು ಇದು ಕಾನೂನು ಬಾಹಿರ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು ಭೀಕರ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದ್ದು ಬಾಕಿ ವೇತನ ಪಾವತಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ಕನಿಷ್ಠ ವೇತನ ಕಾಯ್ದೆ 1948ರ ಷೆಡ್ಯೂಲ್​ ಪ್ರಕಾರ ಅನುಸೂಚಿತವಲ್ಲದ ಉದ್ದಿಮೆಗಳಿಗೆ ನಿಗದಿತ ವೇತನ ಕೊಡಬೇಕಾಗುತ್ತದೆ. ಆದರೆ, ಕಾರ್ಮಿಕ ಇಲಾಖೆಯ ನಿರ್ದೇಶನದಂತೆ ಅನ್ವಯವಾಗದ ಹಾಗೂ ಅನ್ವಯವಾಗುವ ದರಕ್ಕಿಂತ ಹೆಚ್ಚಿನ ವೇತನ ದರ ನೀಡಲಾಗುತ್ತಿದೆ.
ರಾಜ್ಯ ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಆದೇಶ, ಸುತ್ತೋಲೆ, ನಿಬಂಧನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗಿದೆ. ಸಂದ ಬೇಡಿಕೆಗಳು ನಿಯಮ ಬಾಹಿರವಾಗಿರುವದರಿಂದ ಈಡೇರಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಧರಣಿ ಸತ್ಯಾಗ್ರಹ ಕೈಬಿಡದೆ ಮುಂದುವರಿಸಿದಲ್ಲಿ ಅದರಿಂದ ಏನಾದರೂ ಅನಾಹುತ ಅಥವಾ ಅಹಿತಕರ ಟನೆ ಉಂಟಾದಲ್ಲಿ ಸಂದ ಮನವಿ ಪತ್ರದಲ್ಲಿ ಸಹಿ ಮಾಡಿ ಸಲ್ಲಿಸಿದ ಎಲ್ಲಾ ಪದಾಧಿಕಾರಿಗಳು (ಪುರುಷ ಮತ್ತು ಮಹಿಳಾ) ನೇರ ಹೊಣೆಗಾರರಾಗುತ್ತಾರೆ ಮತ್ತು ವಿಶ್ವವಿದ್ಯಾಲಯವು ಹೊಣೆ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
"

ಪ್ರತಿ ತಿಂಗಳು ಈ ರೀತಿ ಕಾನೂನು ಬಾಹಿರ ಬೇಡಿಕೆ ಇಟ್ಟು ವಿಶ್ವವಿದ್ಯಾಲಯದಲ್ಲಿ ಅಶಿಸ್ತು, ಅಶಾಂತಿಯ ವಾತಾವರಣ ಉಂಟುಮಾಡಿ ಗುತ್ತಿಗೆ ನೌಕರರು ಶೈಕ್ಷಣಿಕ ಪರಿಸರ ಹಾಳು ಮಾಡುತ್ತಿದ್ದಾರೆ. ಈ ಹೊರಗುತ್ತಿಗೆ ನೌಕರರ ಸಂದ ಮುಖಂಡರನ್ನು ಕರೆಯಿಸಿ ಕುಲಪತಿಗಳು ಸಭೆ ನಡೆಸಿ ತಿಳಿ ಹೇಳಿದಾಗಲೂ ತಮ್ಮ ಹಠವಾದಿ ಧೋರಣೆ ಮುಂದುವರಿಸಿರುವುದು ತರವಲ್ಲ.

— ಪ್ರೊ.ರಮೇಶ ಲಂಡನಕರ್​, ಕುಲಸಚಿವ, ಗುಲ್ಬರ್ಗ ವಿವಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net