ಪ್ರಶ್ನಿಸುವ ಕುತೂಹಲ ತಣಿಯಬಾರದು ಡಿಸಿ ಆನಂದ ಕಿವಿಮಾತು

ವಿಜಯವಾಣಿ ಆಯೋಜಿಸಿರುವ ವಿದ್ಯೋತ್ಸವದಲ್ಲಿ
ವಿಜಯವಾಣಿ ಆಯೋಜಿಸಿರುವ ವಿದ್ಯೋತ್ಸವದಲ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಆನಂದ ಕಿವಿಮಾತು
ವಿಜಯಪುರ :‌ ಜೀವನದಲ್ಲಿ ಸಾಧಕರಾಗಲು ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳಬೇಕು. ಪ್ರಶ್ನಿಸುವ ಕುತೂಹಲ ಯಾವುದೇ ಕಾರಣಕ್ಕೂ ತಣಿಯಬಾರದು ಎಂದು ಜಿಲ್ಲಾಧಿಕಾರಿ ಆನಂದ .ಕೆ ಕಿವಿಮಾತು ಹೇಳಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ವಿಜಯವಾಣಿ ಆಯೋಜಿಸಿರುವ ವಿದ್ಯೋತ್ಸವದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿ, ಮನವರಿಕೆಯಾಗುವವರೆಗೂ ಪ್ರಶ್ನಿಸಬೇಕು.ಆಸಕ್ತಿ ಮತ್ತು ಕುತೂಹಲ ಸದಾ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಸದಾ ಹೊಸದನ್ನು ಕಲಿಯುವಿಕೆಯಲ್ಲಿ ತೊಡಗಿಸಿಕೊಂಡಿರಬೇಕು.ಕಲಿಕೆ ನಿರಂತರವಾಗಿದ್ದರೆ ಬದುಕು ಚಿನ್ನ ಪುಟಕ್ಕಿಟ್ಟಂತೆ ಆಗಲಿದೆ ಎಂದು ಹೇಳಿದರು.
ಹಿಂದೆ ಕಲಿಸುವ ಶಿಕ್ಣಕರ ಕೊರತೆ ಇತ್ತು. ಈಗ ಸಾಕಷ್ಟು ಮಾಹಿತಿ ಸಿಗುತ್ತಿದೆ. ಒಳ್ಳೆಯದನ್ನು ಹೆಕ್ಕಿ ತೆಗೆದು ಸಂಗ್ರಹಿಸಿಕೊಂಡು ಹೊಸದು ಕಲಿಯಬೇಕು. ಕಲಿತಿದ್ದನ್ನು ವಿಶ್ಲೇಷಣೆ ಮಾಡಿ ಅಪ್ ಡೇಟ್ ಆಗಬೇಕು ಎಂದು ತಿಳಿಸಿದರು.
ಮಾಹಿತಿ ಸಂಗ್ರಹಿಸುವ ಭರದಲ್ಲಿ ಇಂಟರ್ನೆಟ್ ಗೆ ಮಾನಸಿಕವಾಗಿ ಅಂಟಿಕೊಳ್ಳಬಾರದು, ಸೈಬರ್ ಸೆಕ್ಯೂರಿಟಿ ಕಡೆಗೆ ಗಮನ ನೀಡಬೇಕು ಎಂದು ಹೇಳಿದರು.
ಶಿಕ್ಷಣದಿಂದ ಸಾಕಷ್ಟು ಬದಲಾವಣೆ ತರಲು ಸಾಧ್ಯ. ಇತ್ತೀಚೆಗೆ ಮಕ್ಕಳಲ್ಲಿ ಒತ್ತಡ ಕಂಡು ಬರುತ್ತಿದೆ. ಪರೀಕ್ಷೆ ಸಮಯದಲ್ಲಿ ಮಕ್ಕಳು ಒತ್ತಡ ಮುಕ್ತರಾಗಿರಬೇಕು ಎಂದು ತಿಳಿಸಿದರು.
ಕಲಿಕೆಯಲ್ಲಿ ಸಾಧಕರಾಗಲು ಯೋಜನೆ ರೂಪಿಸಿ ಎಂದು ಡಿಸಿ ಆನಂದ ಸಲಹೆ ನೀಡಿದರು.

ನಿರಂತರ ಪ್ರಯತ್ನ ಗುರಿ ತಲುಪುವ ಅಸ್ತ್ರ

ಜೀವನದಲ್ಲಿ ಇಟ್ಡುಕೊಂಡಿರುವ ಗುರಿಯನ್ನು ತಲುಪಲು ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮಪಡಬೇಕು ಎಂದು ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ತಿಳಿಸಿದರು.
ವಿದ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ವೇದಿಕೆ ಕಲ್ಪಿಸುವುದರ ಜತೆಗೆ ವಿಷಯ ಪರಿಣಿತರಿಂದ ಉಪನ್ಯಾಸ ಕೊಡಿಸುವ ಮೂಲಕ ವೈಜ್ಞಾನಿಕ ಮನೋಭಾವನೆ ಬೆಳೆಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಯುವ ಸಮೂಹ ಶಿಸ್ತು ಮೈಗೂಡಿಸಿಕೊಂಡು ಒಳ್ಳೆಯ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಸಾಧಕರಾಗಬೇಕು ಎಂದು ಕರೆ ನೀಡಿದರು.
ಗುರಿಯೊಂದಿಗೆ ಮುನ್ನುಗ್ಗಬೇಕು. ಗುರಿ ಇಟ್ಡುಕೊಂಡರೆ ಸಾಲದು ಅದನ್ನು‌ ಕೈಗೂಡಿಸಿಕೊಳ್ಳುವ ಛಲ ಸಹ ಬೆಳೆಸಿಕೊಂಡು ಪ್ರಯತ್ನ ಮಾಡಿದರೆ ಯಶಸ್ಸು ಕಾಣಲು ಸಾಧ್ಯ ಎಂದು ರಿಷಿ ಆನಂದ‌ ನುಡಿದರು.
"

ವಿಜಯವಾಣಿ ನಾಡಿನ ಜನರ‌ ಪ್ರೀತಿಯ ದಿನಪತ್ರಿಕೆಯಾಗಿದೆ. ವಿದ್ಯೋತ್ಸವ ಕಾರ್ಯಕ್ರಮ ಮಾದರಿಯಾಗಿ ಆಯೊಜಿಸುವ‌ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶೈಕ್ಷಣಿಕ ಸಮಗ್ರ ಮಾಹಿತಿ ಒಂದೇ ಸೂರಿನಡಿ ಸಿಗುವಂತೆ ಮಾಡಿದೆ.-

ಆನಂದ ಕೆಜಿಲ್ಲಾಧಿಕಾರಿ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net