ವೃತ್ತಿಪರ ಕಲಿಕೆಗೆ ಸಿಎಸ್​ಸಿ ಒಲಿಂಪಿಯಾಡ್​ ಪರೀಕ್ಷೆ ಸಹಕಾರಿ

ಬಸವಕಲ್ಯಾಣದ ಜೈ ಭವಾನಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಲಿಂಪಿಯಾಡ್​ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಉದ್ಘಾಟಿಸಿದರು. ಮುರುಳೀಧರ ಎಚ್​.ಎಲ್​., ರವೀಂದ್ರ ಇತರರಿದ್ದರು.
ಬಸವಕಲ್ಯಾಣದ ಜೈ ಭವಾನಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಲಿಂಪಿಯಾಡ್​ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಉದ್ಘಾಟಿಸಿದರು. ಮುರುಳೀಧರ ಎಚ್​.ಎಲ್​., ರವೀಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಅಭಿಮತ
  • ಕಲ್ಯಾಣದಲ್ಲಿ ಪ್ರಮಾಣಪತ್ರ ವಿತರಣೆ
ಬಸವಕಲ್ಯಾಣ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳು ಯಾವುದೇ ಒತ್ತಡವಿಲ್ಲದೆ ಎದುರಿಸುವಂತಾಗಲೂ ವೃತ್ತಿಪರ ಕಲಿಕೆ ಮತ್ತು ನಾಯಕತ್ವ ಸಂವಹನ ಕೌಶಲ ಅಗತ್ಯವಾಗಿದ್ದು, ಇದು ಬೆಳೆಸಿಕೊಳ್ಳಲು ಸಿಎಸ್​ಸಿ ಒಲಿಂಪಿ ಯಾಡ್​ ಪರೀಕ್ಷೆ ಸಹಕಾರಿಯಾಗಲಿದೆ ಎಂದು ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಹೇಳಿದರು.
ನಗರದ ತ್ರಿಪುರಾಂತ ಜೈ ಭವಾನಿ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್​ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಇತ್ತೀಚೆಗೆ ಆಯೋಜಿಸಿದ್ದ ಒಲಿಂಪಿಯಾಡ್​ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸಿಎಸ್​ಸಿ ಕಾರ್ಯಕ್ರ ಮವನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ರಾಷ್ಟ್ರ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಇದು ಅವಕಾಶ ಕಲ್ಪಿಸಲಿದೆ ಎಂದರು.
ಟ್ರಸ್ಟ್​ ಜಿಲ್ಲಾ ನಿರ್ದೇಶಕ ಮುರುಳೀಧರ ಎಚ್​.ಎಲ್​. ಮಾತನಾಡಿ, 2025-&26ನೇ ಸಾಲಿನಲ್ಲಿ ಸಿಎಸ್​ಸಿ ಒಲಿಂಪಿಯಾಡ್​ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಒಟ್ಟು 668 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದಾರೆ. ಹಿಂದಿ ವಿಷಯದಲ್ಲಿ ರಾಜ್ಯಮಟ್ಟಕ್ಕೆ ಪ್ರಥಮೇಶ ಪದ್ಮಾನಂದ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ತಾಲೂಕು ಯೋಜನಾಧಿಕಾರಿ ರವೀಂದ್ರ ಮಾತನಾಡಿದರು. ಕಂದಾಯ ನಿರೀಕ್ಷಕ ಅನೀಲಕುಮಾರ ಚಾಂದೆ, ನೋಡಲ್​ ಅಧಿಕಾರಿ ಬಸವರಾಜ, ಹಣಕಾಸು ಪ್ರಬಂಧಕ ಸಂತೋಷ, ಅನಿಲಕುಮಾರ ಇತರರು ಪಾಲ್ಗೊಂಡಿದ್ದರು.
"

ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಲ್ಲಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಎದುರಿಸು ವಂತಹ ಸಂದರ್ಭದಲ್ಲಿ ಗ್ರಾಮೀಣ ಮಟ್ಟದಲ್ಲಿಯೇ ಆನ್​ಲೈನ್​ ಮೂಲಕ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಗ್ರಾಮದಲ್ಲಿಯೇ ಭಾಗವಹಿಸುವಂತೆ ಮಾಡಿಕೊಟ್ಟಿದೆ.

— > ಡಾ.ದತ್ತಾತ್ರೇಯ ಗಾದಾ ತಹಸೀಲ್ದಾರ್​ ಬಸವಕಲ್ಯಾಣ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net