ದಫನ್​ಗೊಂಡ ಅಲಾಹೀ ದೇವರು

ಕಕ್ಕೇರಾ ಪಟ್ಟಣದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ ವೇಳೆ ಭಾಗವಹಿಸಿದ್ದ ಭಕ್ತರು.
ಕಕ್ಕೇರಾ ಪಟ್ಟಣದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ ವೇಳೆ ಭಾಗವಹಿಸಿದ್ದ ಭಕ್ತರು.
Published on
ಕಕ್ಕೇರಾ: ಪಟ್ಟಣದಲ್ಲಿ ಮೊಹರಂ ಹಬ್ಬ ಆಚರಣೆಯ ಕಡೇ ದಿನವಾದ ಶುಕ್ರವಾರ ಅಸಂಖ್ಯಾತ ಭಕ್ತರ ಮಧ್ಯೆ ಸಡಗರ ಮತ್ತು ಸಂಭ್ರಮದೊಂದಿಗೆ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಹೀ ದೇವರುಗಳು ಯಮನೂರಪ್ಪ ದೇವರ ಸನ್ನಿದಾನದಲ್ಲಿ ದಫನ್​ಗೊಂಡವು.
ಪಟ್ಟಣದ ಸರ್ಕಾರಿ ಮಸೀದಿ, ಶ್ಯಾನೇರ ಮಸೀದಿ, ಕಿಲ್ಲೇದರ ಮಸೀದಿ ಹಾಗೂ ರಾವುತರ ಮಸೀದಿಗಳಿಂದ ಒಟ್ಟು ಹನ್ನೊಂದು ಅಲಾಹೀ ದೇವರುಗಳು ಕಳೆದ ಬುಧವಾರ ಪ್ರತಿಷ್ಠಾಪಿಸಲಾಗಿತ್ತು. ಪಟ್ಟಣದ ಸರ್ವಧಮೀರ್ಯರು ಅಲಾಹೀ ದೇವರುಗಳಿಗೆ ಇಷ್ಠಾರ್ಥ ಸಿದ್ಧಿಗಾಗಿ ಛತ್ರಿ ಹಾಗೂ ಪಾತೇಗಳನ್ನು ನೀಡುವ ಮತ್ತು ಹೂ&ಹಣ್ಣು, ಕೆಂಪುಸಕ್ಕರೆ ಸಮರ್ಪಿಸುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆದರು.
ಗುರುವಾರ ಕತಲ್​ ರಾತ್ರಿಯಂದು ಎಲ್ಲ ಮಸೀದಿಗಳ ಮುಂದಿರುವ ಅಗ್ನಿಕುಂಡದ ಮುಂದೆ ವಿವಿಧ ಗ್ರಾಮಗಳ ಹೆಜ್ಜೆ ತಂಡದ ಯುವಕರು ಹಲಗೆ ವಾದ್ಯದೊಂದಿಗೆ ಕುಣಿದು ಕುಪ್ಪಳಿಸಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಅಳ್ಳಳ್ಳಿ ಬುಕ್ಕರು, ಧುಲ್ಲೋ..ಧುಲ್ಲೋ ಎಂದು ಚಿಕ್ಕಮಕ್ಕಳನ್ನು ಎತ್ತಿಕೊಂಡು ಅಲಾಹೀ ದೇವರ ಮುಂದೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಶುಕ್ರವಾರ ಸಂಜೆ 4.30ಗಂಟೆಗೆ ವಾದ್ಯಮೇಳದೊಂದಿಗೆ ಮಸೀದಿಗಳಿಂದ ಹೊರಬಂದ ಅಲಾಹೀ ದೇವರು ಹಳೇ ಬಜಾರ್​, ಅಗಸಿ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತಗಳ ಮೂಲಕ ಯಮೂನರಪ್ಪನ ದೇವಸ್ಥಾನದಲ್ಲಿ 7.20ರ ಸುಮಾರಿಗೆ ದಫನ್​ವಾಗುವ ಮೂಲಕ ಮೊಹರಮ್​ ಆಚರಣೆಗೆ ತೆರೆ ಕಂಡಿತು. ಈ ವೇಳೆ ಮಸೀದಿಗಳ ಪೂಜಾರಿಗಳು, ಪಟ್ಟಣದ ಪ್ರಮುಖರು ಹಾಗೂ ಸಂ&ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರು ವಿವಿಧ ಸಂಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಪಿಎಸ್​ಐ ರಾಜಶೇಖರ ರಾಠೋಡ್​, ಎಎಸ್​ಐ ಮಹೇಶಪ್ಪ, ಮುಖ್ಯಪೇದೆ ಬೀರಪ್ಪ ಪೊಲೀಸ್​ ಬಂದೋಬಸ್ತ್​ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net