ಆಳಂದ ತಾಲೂಕಿನ ಮಟಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಜಗದೀಶ ಕೋರೆ, ದತ್ತ ಪಾಂಡ್ರೆ, ವಿಜಯಲ$್ಮ ಬಿರಾದಾರ, ಬಿಇಒ ಅಣ್ಣಪ್ಪ ಹಾದಿಮನಿ ಇತರರಿದ್ದರು.
ಆಳಂದ: ವಿದ್ಯಾರ್ಥಿ ಮತ್ತು ಶಿಕರ ನಡುವಿನ ಸಂಬಂಧ ಶಾಲೆ ಮತ್ತು ಕಲಿಕೆಗೆ ಮಾತ್ರ ಸೀಮಿತವಾಗಿರದೆ ಶಾಶ್ವತವಾಗಿರಲಿದೆ ಎಂದು ಸುರಪುರ ಪ್ರೌಢಶಾಲೆ ಮುಖ್ಯ ಶಿಕರ ಅಬ್ದುಲ್ ಬಾಷಾ ಹೇಳಿದರು.
ಮಟಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2002, 2003 ಮತ್ತು 2004ನೇ ಶೈಣಿಕ ವರ್ಷದ ವಿದ್ಯಾರ್ಥಿಗಳಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 20 ವರ್ಷದ ಹಿಂದೆ ಕಲಿತ ಮಕ್ಕಳು ಇಂದು ಇಂಥ ಗೌರವ ಸನ್ಮಾನ ಮಾಡಿದ್ದು ಖುಷಿ ತಂದಿದೆ ಎಂದರು.
ಅಧ್ಯತೆ ವಹಿಸಿದ್ದ ೇತ್ರ ಶಿಣಾಧಿಕಾರಿ ಅಣ್ಣಪ್ಪ ಹಾದಿಮನಿ ಮಾತನಾಡಿ, ಉತ್ತಮ ಶಿಕರು ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆ ಮತ್ತು ಯಶಸ್ಸು ಕಂಡು ಪಡೆಯುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲ್ಲ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ ಶ್ರೀಮಂತ ಜಿಡ್ಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಗೆ ಒಳಗಾಗುತ್ತಿರುವುದರಿಂದ ಸಂಸ್ಕಾರ, ಸೌಜನ್ಯ ಮತ್ತು ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಕಲಿಯುವ ಮಕ್ಕಳಲ್ಲಿ ಶ್ರದ್ಧೆ, ವಿನಯ ಮತ್ತು ಆಸಕ್ತಿ ಇದ್ದರೆ ಮಾತ್ರ ಶಿಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬಲ್ಲರು ಎಂದರು.
ಶಿಕರಾದ ಅಸ್ಲಂ ಖಾನ್, ಸಿದ್ರಾಮಪ್ಪ ಕಲಶೆಟ್ಟಿ, ಸಂಜಯ ಪಾಟೀಲ್, ಸಂಗೀತಾ ಚಿಂಚೂರೆ, ನಿಂಗಪ್ಪ, ಹಳೆಯ ವಿದ್ಯಾರ್ಥಿಗಳಾದ ಪ್ರಶಾಂತ ಬಿರಾದಾರ, ಜಗದೀಶ ಕೋರೆ, ದತ್ತಾ ಪಾಂಡ್ರೆ, ಸಿದ್ದರಾಮ ಶಿರೂರೆ, ಅರ್ಚನಾ ಕೋರೆ, ವಿಜಯಲ$್ಮ ಬಿರಾದಾರ ಮಾತನಾಡಿ, ತಮ್ಮ ಶಾಲಾ ದಿನಗಳ ಬಗ್ಗೆ ಮೆಲುಕು ಹಾಕಿದರು.
ಹಳೆಯ ವಿದ್ಯಾರ್ಥಿಗಳು ಪುಷ್ಪವೃಷ್ಟಿಗೈದು ಗುರುಗಳನ್ನು ವೇದಿಕೆಗೆ ಕರೆತಂದು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಹಲವರು ಅಚ್ಚುಮೆಚ್ಚಿನ ಶಿಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರೆ, ಕೆಲವರು ಆಶೀರ್ವಾದ ಪಡೆದು ಧನ್ಯತೆ ಮೆರೆದರು.
ವಿಕಾಸ ಬಿರಾದಾರ ಸ್ವಾಗತಿಸಿದರು. ಅಂಜನಕುಮಾರ ವಂದಿಸಿದರು. ಹಣಮಂತ ಪಾತ್ರೆ ನಿರೂಪಣೆ ಮಾಡಿದರು. ಕಲಾವಿದ ಶಿವಶರಣಪ್ಪ ಪೂಜಾರಿ ಮತ್ತು ಅಶೋಕ ಆಳಂದ ಅವರ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು.