ಗಮನಸೆಳೆದ ಭುಲಾಯಿ ಹಾಡು

ಹುಲಸೂರಿನ ಕನ್ನಾಡೆ ಬಡಾವಣೆಯಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬದ ನಿಮಿತ್ತ ಸುಮಂಗಲಿಯರು ಭುಲಾಯಿ ಹಾಡುಗಳಿಗೆ ಹೆಜ್ಜೆ ಹಾಕಿದರು.
ಹುಲಸೂರಿನ ಕನ್ನಾಡೆ ಬಡಾವಣೆಯಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬದ ನಿಮಿತ್ತ ಸುಮಂಗಲಿಯರು ಭುಲಾಯಿ ಹಾಡುಗಳಿಗೆ ಹೆಜ್ಜೆ ಹಾಕಿದರು.
Published on
ಹುಲಸೂರು: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ತ ಸೋಮವಾರ ಬೆಳಗ್ಗೆಯಿಂದ ಸುಮಂಗಲಿಯರು, ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ವಿವಿಧ ದೇವಾಲಯದಲ್ಲಿರುವ ನಾಗದೇವತೆಗಳಿಗೆ ಹಾಲೆರೆದರು. ಸಂಜೆ ವಿವಿಧ ಬಡಾವಣೆಯಲ್ಲಿ ಮಹಿಳೆಯರು ಭುಲಾಯಿ ಹಾಗೂ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದರೆ, ಯುವತಿಯರು ಜೋಕಾಲಿ ಆಡಿ ಸಂಭ್ರಮಿಸಿದರು. ಪಟ್ಟಣದ ಕನ್ನಾಡೆ ಬಡಾವಣೆ, ಗಣೇಶ ನಗರ, ಇಂದಿರಾ ನಗರ, ಧಬಾಲೆಗಲ್ಲಿ, ನರಸಿಂಹ ಮಂದಿರದ ಬಡಾವಣೆಗಳಲ್ಲಿ ಭುಲಾಯಿ ಹಾಕಿ ಸಂಭ್ರಮಿಸಿದರು. ಶಾಂತಾಬಾಯಿ ರಾಸುರೆ, ಶಕುಂತಲಾ ಮಠಪತಿ, ರತ್ನಮ್ಮ ನಂಜವಾಡೆ, ಸರಸ್ವತಿ ಧರ್ಮಣೆ, ಶಿಲ್ಪಾ ಧರ್ಮಣೆ, ಲಕ್ಷಿ$್ಮಪತ್ರಿ, ತನುಜಾ ನಂಜವಾಡೆ, ಪವಿತ್ರಾ ಗೋರಟೆ, ಸುಜಾತಾ, ಮಾಯಾ ಧರ್ಮಣೆ, ಗಿರಿಜಾ ರಾಸೂರೆ, ಬೇಬಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net