ಪ್ರದರ್ಶನದಲ್ಲಿ ರಾಜ್ಯದ ಹೆಮ್ಮೆಯ ಹಳ್ಳಿಕಾರ್, ಕಿಲಾರಿ, ಅಮೃತ ಮಹಲ್ ಮಿಕ್ಸೃ್ ಹೊಂಗುಲ, ಮಲೆನಾಡ ಗಿಡ್ಡ, ಕೃಷ್ಣಾ ತೀರದ ಕಂಗನೂರ್ ಹಾಗೂ ಸೀಮೆ ಹಸು ಸೇರಿದಂತೆ ಹತ್ತಾರು ತಳಿಗಳು ನೋಡುಗರ ಗಮನ ಸೆಳೆದವು. ಈ ಪ್ರದರ್ಶನಕ್ಕಾಗಿ ವಿಶೇಷವಾಗಿ ತಮಿಳುನಾಡಿನಿಂದ ಒಂದು ಜತೆ ದಷ್ಟಪುಷ್ಟ ಎತ್ತುಗಳನ್ನು ಕರೆತರಲಾಗಿದ್ದು, ಅವುಗಳು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದವು. ವಿಜಯನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು ಜೋಡಿ ಎತ್ತುಗಳು ಪಾಲ್ಗೊಂಡಿದ್ದವು. ಒಂದು ಜೋಡಿ ಎತ್ತಿನ ಬೆಲೆ ಕನಿಷ್ಠ ಒಂದು ಲಕ್ಷ ರೂ.ನಿಂದ ಎಂಟು ಲಕ್ಷ ರೂ. ವರೆಗೂ ಇರುವುದು ವಿಶೇಷವಾಗಿತ್ತು.