ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ಹತ್ತುವ ಅವಕಾಶ ಮಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಮಲಾಪುರದ ಹಂಪಿ ಬೈ ಸ್ಕೈಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ
ಹೊಸಪೇಟೆ: ಹಂಪಿ ಉತ್ಸವದ ನಿಮಿತ್ತ ವಿಶ್ವ ಪಾರಂಪರಿಕ ತಾಣವನ್ನು ಹಾಗೂ ಸ್ಮಾರಕಗಳನ್ನು ಆಗಸದಿಂದ ನೋಡುವ ಸಲುವಾಗಿ ಆರಂಭಿಸಲಾಗಿರುವ ಹಂಪಿ ಬೈ ಸ್ಕೈ ಹೆಲಿಕಾಪ್ಟರ್ ಸೇವೆಗೆ ತಾಲೂಕಿನ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಗುರುವಾರ ಕಮಲಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು.
ಹೆಲಿಕಾಪ್ಟರ್ ಹಾರಟವನ್ನು ನೋಡಲು ಬಂದಿದ್ದ ಶಾಲಾ 25 ಮಕ್ಕಳಿಗೆ, 60 ಜನ ರೈತರಿಗೆ, 15 ಜನ ಪೌರಕರ್ಮಿಕರಿಗೆ ಹೆಲಿಕಾಪ್ಟರ್ ಹತ್ತುವ ಅವಕಾಶ ಕಲ್ಪಿಸಿದರು. ಶಾಲಾ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ ಅವರು ಹಾರಾಟ ನಡೆಸಿದರು.
ಹಂಪಿಯ ಸ್ಮಾರಕಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಪ್ರವಾಸಿಗರು ಅದನ್ನು ನಡೆದುಕೊಂಡು ಹೋಗಿ ನೋಡುವುದು ಸಾಮಾನ್ಯ. ಆಗಸದಿಂದ ಈ ಸ್ಮಾರಕಗಳನ್ನು ನೋಡುವ ಅನುಭವವೇ ವಿಭಿನ್ನ. ಹೀಗಾಗಿ ಹಂಪಿ ಉತ್ಸವದ ಸಮಯದಲ್ಲಿ ಆಸಕ್ತ ಪ್ರವಾಸಿಗರಿಗೆ ಹಾಗೂ ಸರ್ವಜನಿಕರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಲಾಗುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಕಮಲಾಪುರ, ವಿಜಯ ವಿಠಲ, ವಿರೂಪಾಕ್ಷ, ಅಂಜನಾದ್ರಿ ಬೆಟ್ಟ ನೋಡಿ ತುಂಬ ಖುಷಿಯಾಯಿತು. ಇದೊಂದು ಅತ್ಯುತ್ತಮ ಅನುಭವ’ ಎಂದು ಹೆಲಿಕಾಪ್ಟರ್ನಲ್ಲಿ ಹೋಗಿ ಬಂದ ಮಕ್ಕಳು ಪ್ರತಿಕ್ರಿಯಿಸಿದರು.
ಹುಡಾ ಅಧ್ಯಕ್ಷ ಎಚ್.ಎನ್.ಇಮಾಮ್ ನಿಯಾಜಿ, ಪ್ರವಾಸೋದ್ಯಮ ಇಲಾಖೆ ಡಿಡಿ ಪ್ರಭು ಲಿಂಗ ಎಸ್.ತಳಿಕೇರಿ, ಕಮಲಾಪುರ ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಹಂಪಿ ಸಿಪಿಐ ರಾಜೇಶ್ ಭಟಗರ್ಕಿ ಇತರರಿದ್ದರು.