ದೊಡ್ಡ ಆಘಾತ ಕಾದಿತ್ತು. ವಿಧಾನಸೌಧ ಆವರಣಕ್ಕೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿ ಒಳನುಗ್ಗಿ ಸರ್ಕಾರಿ ಅಧಿಕಾರಿ, ಸಾರ್ವಜನಿಕರನ್ನು ಒತ್ತಾಯಾಳು ಆಗಿ ಇಟ್ಟುಕೊಂಡಿದ್ದರು.
ವಿಷಯ ತಿಳಿದ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಕಮಾಂಡೋ ಮತ್ತು ರಾಜ್ಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿದು ಒತ್ತ್ತೆಯಾಳುಗಳನ್ನು ರಕ್ಷಣೆ ಮಾಡಿದರು.
ಭಯೋತ್ಪಾದಕರ ವಿಧ್ವಂಸಕ ಕೃತ್ಯಗಳು ನಡೆದಾಗ ತುರ್ತಾಗಿ ಕೈಗೊಳ್ಳಬೇಕಾದ ಭದ್ರತಾ ಕಾರ್ಯಾಚರಣೆ ಬಗ್ಗೆ ವಿಧಾನಸೌಧ ಆವರಣದಲ್ಲಿ ಎನ್‌ಎಸ್‌ಜಿ ಕಮಾಂಡೊ ಪಡೆ ಪೊಲೀಸರ ನೆರವಿಂದ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಕಲ್ಪಿತ ಪ್ರದರ್ಶನ ನಡೆಯಿತು.
ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಕಲ್ಪಿತ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಉಗ್ರರು ದಾಳಿ ನಡೆಸಿದಾಗ ಕೈಗೊಳ್ಳಬೇಕಾದ ಕ್ರಮಗಳು, ಸಿದ್ದತೆಗಳ ಬಗ್ಗೆ ಕಾರ್ಯವೈಖರಿ ಹಾಗೂ ಭದ್ರತಾ ತಪಾಸಣೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ತಾಲೀಮು ನಡೆಸಲಾಯಿತು.
ವಿಧಾನಸೌಧ ಆವರಣದಲ್ಲಿ ಬಾಂಬ್ ಸ್ಫೋಟಿಸಿ ನಾಲ್ವರು ಭಯೋತ್ಪಾದಕರು ಒಳನುಗ್ಗುವ ಸನ್ನಿವೇಶ ಸೃಷ್ಟಿಸಲಾಯಿತು. ಬಾಂಬ್ ಪತ್ತೆದಳ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳ, ಗರುಡ ಪಡೆ, ಕ್ಷಿಪ್ರ ಕಾರ್ಯಪಡೆಗಳು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದವು.
ಉಗ್ರರು ಒಳನುಗ್ಗುತ್ತಿದಂತೆ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿ, ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಎನ್‌ಎಸ್‌ಜಿ ಪಡೆ ಕಮಾಂಡೋಗಳು ಶಸಾಸಗಳನ್ನು ಹಿಡಿದು ಶಕ್ತಿಸೌಧವನ್ನು ಸುತ್ತುವರೆದರು.
ವಿಧಾನಸೌಧ ಪ್ರವೇಶಿಸುವ ಎಲ್ಲಾ ದ್ವಾರಗಳನ್ನು ಮುಚ್ಚಲಾಗಿತ್ತು. ಸೇನಾ ಹೆಲಿಕಾಪ್ಟರ್‌ನಿಂದ ವಿಧಾನಸೌಧ ಮೇಲೆ ಜಿಗಿದು ಒಳನುಗ್ಗಿ ಕಾರ್ಯಾಚರಣೆ ಕೈಗೊಂಡು ಒಳನುಸುಳಿದ್ದ ಉಗ್ರರನ್ನು ಸದೆಬಡಿದರು. ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಸಾರ್ವಜನಿಕರು ಕೈಯಲ್ಲಿ ಮೊಬೈಲ್ ಹಿಡಿದು ಎನ್‌ಎಸ್‌ಜಿ ಪಡೆಯ ಕಾರ್ಯಾಚರಣೆಯನ್ನು ಸೆರೆ ಹಿಡಿಯುತ್ತಿದ್ದ ದೃಶ್ಯಾವಳಿ ಕಂಡುಬಂತು.