ಪರೀಾ ಪೂರ್ವಸಿದ್ಧತೆ ನೋಡಲ್ ಅಧಿಕಾರಿ ಎಂ.ಬಿ.ಪಾಟೀಲ "ಓದುವ ಮನೆ'ಗೆ ಚಾಲನೆ ನೀಡಿ ಮಾತನಾಡಿ, ಪರೀೆ ಮುಗಿಯುವವರೆಗೆ ವಿದ್ಯಾರ್ಥಿಗಳು ಪ್ರತಿದಿನ ಒಬ್ಬ ಶಿಕರ ಮೇಲ್ವಿಚಾರಣೆಯಲ್ಲಿ ಸಂಜೆ 7 ರಿಂದ ನಿರಂತರ ಅಧ್ಯಯನದಲ್ಲಿ ತೊಡಗಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ರಾತ್ರಿ 12ರ ನಂತರ ಗ್ರಂಥಾಲಯದಲ್ಲೇ ವಿಶ್ರಾಂತಿ ಪಡೆಯಬಹುದಾಗಿದ್ದು, ಬೆಳಗಿನ ಜಾವ ಮತ್ತೆ ಅಧ್ಯಯನ ಮಾಡಬಹುದಾಗಿದೆ. ಎಸ್ಡಿಎಂಸಿ ವತಿಯಿಂದ ವಿದ್ಯಾರ್ಥಿಗಳಿಗೆ ಚಹಾ, ಬಿಸ್ಕಿಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8ರಿಂದ ಶಿಕಿಯೊಬ್ಬರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿನಿಯರ ಅಧ್ಯಯನ ನಡೆಯುತ್ತದೆ ಎಂದು ವಿವರಿಸಿದರು.