ಕಲಬುರಗಿ ಜಿಲ್ಲೆಯಿಂದ ಹತ್ತು ಸಾವಿರ ಜನ

ಕಲಬುರಗಿ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿದರು. ಡಾ.ಉಮೇಶ ಜಾಧವ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್​, ಶಶೀಲ್​ ನಮೋಶಿ, ದತ್ತಾತ್ರೇಯ ಪಾಟೀಲ್​ ರೇವೂರ್​, ಅಮರನಾಥ ಪಾಟೀಲ್​, ಡಾ.ಅವಿನಾಶ ಜಾಧವ್​ ಇತರರಿದ್ದರು.
ಕಲಬುರಗಿ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿದರು. ಡಾ.ಉಮೇಶ ಜಾಧವ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್​, ಶಶೀಲ್​ ನಮೋಶಿ, ದತ್ತಾತ್ರೇಯ ಪಾಟೀಲ್​ ರೇವೂರ್​, ಅಮರನಾಥ ಪಾಟೀಲ್​, ಡಾ.ಅವಿನಾಶ ಜಾಧವ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಭಾಗೀಯ ಕೇಂದ್ರ ಕಲಬುರಗಿಯಲ್ಲೂ ಆಯೋಜನೆಗೆ ನಿರ್ಧಾರ
  • ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ
ಕಲಬುರಗಿ: ನಾಡು ಕಂಡ ಶ್ರೇಷ್ಠ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ರಾಜಕೀಯ ಜೀವನದ 50 ವರ್ಷಗಳ ಆಚರಣೆಯ ಅಭಿಮಾನೋತ್ಸವ ಕಲಬುರಗಿಯಲ್ಲೂ ಆಯೋಜಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.
ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಸವೋರ್ತೋಮುಖ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ಭಾಗದಲ್ಲೂ ಲಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಇಲ್ಲೂ ಅಭಿನಂದನಾ ಸಮಾರಂಭ ಆಯೋಜಿಸಲು ಮುಂದಾಗಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯ ಅಶೋಕ ಬಗಲಿ, ಮಾಜಿ ಸಂಸದ ಡಾ. ಉಮೇಶ ಜಾಧವ್​, ಶಾಸಕರಾದ ಬಸವರಾಜ ಮತ್ತಿಮಡು, ಶಶೀಲ್​ ನಮೋಶಿ, ಬಿ.ಜಿ.ಪಾಟೀಲ್​, ಡಾ.ಅವಿನಾಶ ಜಾಧವ್​, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್​ ರೇವೂರ್​, ಅಮರನಾಥ ಪಾಟೀಲ್​ ಜಂಟಿಯಾಗಿ ಹೇಳಿದರು.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಚಿತ್ರದುರ್ಗವು ಕರ್ನಾಟಕದ ಮಧ್ಯಭಾಗ ಎಂಬ ಕಾರಣಕ್ಕೆ ಅಲ್ಲಿ ಅಭಿಮಾನೋತ್ಸವ ಆಯೋಜಿಸಲಾಗಿದೆ. ಹಿರಿಯರಾದ ಗೋವಿಂದ ಕಾರಜೋಳ, ಡಾ. ಪ್ರಭಾಕರ ಕೋರೆ, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು, ಬಿ.ವೈ.ರಾವೇಂದ್ರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಈ ಸಮಿತಿ ಅಭಿಮಾನೋತ್ಸವ ಆಯೋಜಿಸಿದೆ. ನಂತರ ಕಕ ಭಾಗದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲೂ ಆಯೋಜಿಸಲಾಗುವುದು ಎಂದರು.
ರಾಜಕೀಯ ಜೀವನ 50 ವರ್ಷ ಪೂರೈಸಿದ ನಿಮಿತ್ತ ಮೇ.9ರಂದು ಚಿತ್ರದುರ್ಗದಲ್ಲಿ ನಡೆಯುವ ಬಿಎಸ್​ವೈ ಬೃಹತ್​ ಅಭಿಮಾನೋತ್ಸವಕ್ಕೆ ಕಲಬುರಗಿ ಜಿಲ್ಲೆಯಿಂದ ನೂರಾರು ಮಠಾಧೀಶರು ಹಾಗೂ 10 ಸಾವಿರ ಬಿಜೆಪಿ ಪದ ಮುಖಂಂಡರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿ ವಿಧಾನಸಭಾ ೇತ್ರದಿಂದ ಸಾವಿರ ಕಾರ್ಯಕರ್ತರು ಹಾಗೂ ಅಭಿಮಾನಿಗಳೆಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅಭಿಮಾನೋತ್ಸವ ಪಾತೀತವಾಗಿ ನಡೆಯುತ್ತಿದ್ದು, ನಾಡಿನ ಸಾವಿರಾರು ಮಠಾಧೀಶರು ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರದ ಗೃಹ ಸಚಿವ ಅಮಿತ ಶಾ, ಕೇಂದ್ರದ ಸಚಿವರು, ಮಾಜಿ ಸಿಎಂ ಸೇರಿ ಇತರ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಕಲ್ಯಾಣಕ್ಕೆ ಬಿಎಸ್​ವೈ ಅಪಾರ ಕೊಡುಗೆ
ಬಿಎಸ್​ವೈ ಮುಖ್ಯಮಂತ್ರಿಯಾಗಿದ್ದಾಗ ಕಕ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 43ಕ್ಕೂ ಅಧಿಕ ಬಾರಿ ಕಲಬುರಗಿಗೆ ಭೇಟಿ ನೀಡಿದ್ದೂ ಅಲ್ಲದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಮೂರು ಬಾರಿ ಸಚಿವ ಸಂಪುಟ ಸಭೆ ನಡೆಸಿರುವುದು, ರಸ್ತೆಗಳಿಗೆ ಅಭಿವೃದ್ಧಿಗೆ ಕಾಯಕಲ್ಪ, ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಅಡಿಗಲ್ಲು, ನೂತನ ಯಾದಗಿರಿ ಜಿಲ್ಲೆ ೂಷಣೆ, ಕಲಬುರಗಿ, ಬೀದರ್​, ಹಾಗೂ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ, ಯಾದಗಿರಿ ಜಿಲ್ಲೆ ರಚನ, ದಾಸ್ಯದ ಸಂಕೇತವಾಗಿದ್ದ ಹೈದರಾಬಾದ್​ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವ ಎಂಬುದಾಗಿ ಪರಿವರ್ತಿಸಿರುವುದೂ ಸೇರಿ ನೂರಾರು ಕೆಲಸ, ಕಾರ್ಯ ಮಾಡಿದ್ದಾರೆ ಎಂದು ಮುಖಂಡರು ವಿವರಿಸಿದರು.
ಪ್ರಮುಖರಾದ ಶರಣಪ್ಪ ತಳವಾರ, ಹರ್ಷಾನಂದ ಗುತ್ತೇದಾರ್​, ಅವ್ವಣ್ಣ ಮ್ಯಾಕೇರಿ, ಗಿರಿರಾಜ ಯಳಮೇಲಿ, ಲಿಂಗರಾಜ ಬಿರಾದಾರ್​, ಚಂದ್ರಶೇಖರ ಪರಸರೆಡ್ಡಿ, ಬಾಬುರಾವ ಹಾಗರಗುಂಡಗಿ ಇತರರಿದ್ದರು.
"

ಈ ನಾಡಿಗೆ, ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಾಜಿ ಸಿ.ಎಂ ಬಿ.ಎಸ್​.ಯಡಿಯೂರಪ್ಪ ಕೊಡುಗೆ ಅಪಾರ. ಹೀಗಾಗಿ ಚಿತ್ರದುರ್ಗದಲ್ಲಿ ಬೃಹತ್​ ಅಭಿಮಾನೋತ್ಸವ ಆಯೋಜಿಸಲಾಗಿದೆ. ನಮ್ಮ ಜಿಲ್ಲೆಯಿಂದಲೂ ಪಕ್ಷದ ವತಿಯಿಂದ ಸಾವಿರಾರು ಜನ ತೆರಳಲಿದ್ದಾರೆ. ಯಡಿಯೂರಪ್ಪನವರ ಸೇವೆ ರಾಜ್ಯಕ್ಕೆ ಇನ್ನೂ ಅಗತ್ಯವಿದೆ.

— ಬಿ.ಜಿ.ಪಾಟೀಲ್​, ವಿಧಾನ ಪರಿಷತ್​ ಸದಸ್ಯ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net