ದೇವಸ್ಥಾನ, ಬೆಳ್ಳಿ ರಥ ಉದ್ಘಾಟನೆ ಏ.11ಕ್ಕೆ

 ನಾಲವಾರ ಬಳಿಯ ಸುಗೂರ (ಎನ್​) ಗ್ರಾಮದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿರುವುದರಿಂದ ತಹಸೀಲ್ದಾರ್​ ನಾಗಯ್ಯ ಹಿರೇಮಠ ಅವರು ಪೀಠಾಧೀಪತಿ ಶ್ರೀ ಹಿರಗಪ್ಪ ತಾತಾ ಅವರೊಂದಿಗೆ ಕಾರ್ಯಕ್ರಮದ ಸ್ಥಳ ಕುರಿತು ಚರ್ಚಿಸಿದರು.
ನಾಲವಾರ ಬಳಿಯ ಸುಗೂರ (ಎನ್​) ಗ್ರಾಮದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿರುವುದರಿಂದ ತಹಸೀಲ್ದಾರ್​ ನಾಗಯ್ಯ ಹಿರೇಮಠ ಅವರು ಪೀಠಾಧೀಪತಿ ಶ್ರೀ ಹಿರಗಪ್ಪ ತಾತಾ ಅವರೊಂದಿಗೆ ಕಾರ್ಯಕ್ರಮದ ಸ್ಥಳ ಕುರಿತು ಚರ್ಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸುಗೂರ (ಎನ್​) ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ
  • ಸ್ಥಳ ಪರಿಶೀಲಿಸಿದ ತಹಸೀಲ್ದಾರ್​
ನಾಲವಾರ: ಸುಗೂರ (ಎನ್​) ಗ್ರಾಮದ ಸ್ವಯಂಸಿದ್ಧ ಶ್ರೀ ಭೋಜಲಿಂಗೇಶ್ವರ ಮಠಕ್ಕೆ ಏ.11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದು, ತಹಸೀಲ್ದಾರ್​ ನಾಗಯ್ಯ ಹಿರೇಮಠ ಅವರು ಶುಕ್ರವಾರ ಸ್ಥಳ ಪರಿಶೀಲನೆ ಮಾಡಿದರು.
ಏ.11ರಂದು ನಡೆಯಲಿರುವ ದೇವಸ್ಥಾನದ ಲೋಕಾರ್ಪಣೆ, ನೂತನ ಕಲ್ಯಾಣ ಮಂಟಪ ಹಾಗೂ ಬೆಳ್ಳಿ ರಥ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆ ಶ್ರೀಮಠದ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಸ್ಥಳದ ಭದ್ರತೆ, ವಾಹನ ನಿಲುಗಡೆ, ರೂಪುರೇಷ ಕುರಿತು ಶ್ರೀ ಹಿರಗಪ್ಪ ತಾತಾ ಅವರೊಂದಿಗೆ ಚರ್ಚೆ ನಡೆಸಿದರು.
ವೇದಿಕೆ ಸಿದ್ಧತೆ, ಉಪಸ್ಥಿತರಿರುವ ಮಠಾಧೀಶರು, ರಾಜಕೀಯ ಗಣ್ಯರ ಕುರಿತು ಮಠದ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಲಾಯಿತು. ಮುಖ್ಯಮಂತ್ರಿ, ಗಣ್ಯರು, ಮಠಾಧಿಶರು ಹಾಗೂ ಭಕ್ತರಿಗೆ ಆಗಮಿಸಲು ಪ್ರತ್ಯೇಕ ಮಾರ್ಗ ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಲಾಯಿತು.
ವಿಎ ಹಜರತ್​, ರಾಮಲಿಂಗಯ್ಯ, ಮಹೇಶ ಪಾಟೀಲ್​, ಶರಣಗೌಡ ಬೆನಕನಳ್ಳಿ, ಭೀಮರೆಡ್ಡಿಗೌಡ ಕುರಾಳ, ವಿಶ್ವನಾಥ ರೆಡ್ಡಿ, ಮಲ್ಲಿಕಾರ್ಜುನ ಹಡಪದ, ಬಸವರಜ ಹಡಪದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net