ರಾಜ್ಯದ 7 ಜಿಲ್ಲೆಗಳಲ್ಲಿ ತಾಪಮಾನ ಕುಸಿತ-cold

ಚಳಿ
ಚಳಿ
Published on
ಬೆಂಗಳೂರು: ರಾಜ್ಯದ 7 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇನ್ನಷ್ಟು ಕುಸಿತವಾಗಿದೆ. ಕನಿಷ್ಠ ತಾಪಮಾನದಲ್ಲಿ ರಾಜ್ಯದ ಇತರ ಜಿಲ್ಲೆಗಳಗಿಂತ ಬೀದರ್‌ನಲ್ಲಿ 7.4 ಡಿ.ಸೆ.ಶುಕ್ರವಾರ ದಾಖಲಾಗಿದೆ.
ಬೆಳಗಾವಿ 8.2, ವಿಜಯಪುರ 8.4, ಧಾರವಾಡ 8.5, ರಾಯಚೂರು 9,ಹಾಸನ 9.6 ಮತ್ತು ಗದಗ 9.8 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 6-8 ಡಿ.ಸೆ. ಇಳಿಮುಖವಾಗಿದೆ. ತಾಪಮಾನ ಕುಸಿತದಿಂದ ರಾಜ್ಯದ ಹಲವೆಡೆ ಮತ್ತಷ್ಟು ಥಂಡಿ ವಾತಾವರಣ ನಿರ್ಮಾಣವಾಗುತ್ತಿದೆ. ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು, ಕಾರವಾರ ಮತ್ತು ಚಿತ್ರದುರ್ಗದಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣಾಂಶ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಚಳಿ ತೀವ್ರತೆ ಜಾಸ್ತಿಯಾಗುತ್ತಿದೆ. ರಾತ್ರಿ ಮತ್ತು ಮುಂಜಾನೆ ವೇಳೆ ಇಬ್ಬನಿ ಸುರಿದು ಮಂಜುಮಯ ವಾತಾವರಣ ಉಂಟಾಗುತ್ತಿದೆ. ಮುಂಜಾನೆ ಮಂಜುವಿನಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ಸವಾರರು ಪರದಾಡಿದಿರು. ಮಧ್ಯಾಹ್ನ ವೇಳೆ ತಂಪಾದ ಗಾಳಿ ಬೀಸುತ್ತಿರುವುದರಿಂದ ಚಳಿ ಅನುಭವವಾಗುತ್ತಿದೆ. ಶೀತ ರಕ್ಷಣೆಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹುತೇಕ ಜನರು ಬೆಚ್ಚನೆ ಉಡುಪು ಧರಿಸಿ ಓಡಾಡುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net