ತಂತ್ರಜ್ಞಾನ ಸ್ಪರ್ಧೆಯಲ್ಲಿ ಜಿಐಟಿ ಸಾಧನೆ

ಜೈಪುರದಲ್ಲಿ ಈಚೆಗೆ ಜರುಗಿದ ಎಎಸ್​ಎಂಇ ಇಎಫ್​ಎಕ್ಸ್​&2026 ಸ್ಪರ್ಧೆಯಲ್ಲಿ ಬಹುಮನ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ರಾಮ ಭಂಡಾರಿ, ಆರ್​.ಎಸ್​.ಮುತಾಲಿಕ, ಉದಯ ಕಾಲಕುಂದ್ರಿಕರ, ರಾಜೇಂದ್ರ ಬೆಳಗಾಂವಕರ, ಎಸ್​.ವಿ.ಗಣಾಚಾರಿ ಇತರರಿದ್ದಾರೆ.
ಜೈಪುರದಲ್ಲಿ ಈಚೆಗೆ ಜರುಗಿದ ಎಎಸ್​ಎಂಇ ಇಎಫ್​ಎಕ್ಸ್​&2026 ಸ್ಪರ್ಧೆಯಲ್ಲಿ ಬಹುಮನ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ರಾಮ ಭಂಡಾರಿ, ಆರ್​.ಎಸ್​.ಮುತಾಲಿಕ, ಉದಯ ಕಾಲಕುಂದ್ರಿಕರ, ರಾಜೇಂದ್ರ ಬೆಳಗಾಂವಕರ, ಎಸ್​.ವಿ.ಗಣಾಚಾರಿ ಇತರರಿದ್ದಾರೆ.
Published on
ಬೆಳಗಾವಿ: ಕೆಎಲ್​ಎಸ್​ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ (ಜಿಐಟಿ) ಯಾಂತ್ರಿಕ ವಿಭಾಗದ ಎಎಸ್​ಎಂಇ ವಿದ್ಯಾರ್ಥಿ ತಂಡ ಜೈಪುರದಲ್ಲಿ ಈಚೆಗೆ ಜರುಗಿದ ಎಎಸ್​ಎಂಇ ಇಎಫ್​ಎಕ್ಸ್​&2026 ಸ್ಪರ್ಧೆಯಲ್ಲಿ ಪಾಲ್ಗೊಂಡು ವಿವಿಧ ಬಹುಮಾನ ಗೆದ್ದುಕೊಂಡಿದೆ.
ಐಐಟಿ, ಎನ್​ಐಟಿಯಂತಹ ಪ್ರಮುಖ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ, ಜಿಐಟಿ ತಂಡ 3,000 ಅಮೆರಿಕನ್​ ಡಾಲರ್​ ಮೌಲ್ಯದ ಬಹುಮಾನ ಗಳಿಸಿದೆ. ತಂಡದಲ್ಲಿ ಯಾಂತ್ರಿಕ, ಎಲೆಕ್ಟ್ರಾನಿಕ್ಸ್​, ಏರೋನಾಟಿಕಲ್​, ಕಂಪ್ಯೂಟರ್​ ಸೈನ್ಸ್​ ಮತ್ತು ಎಲೆಕ್ಟ್ರಿಕಲ್​ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂಬಿಕಾ ಕುಲಕರ್ಣಿ ಮತ್ತು ಸ್ನೇಹಾ ಗೊರಲ್​ ಗೇರ್​ ಅಫ್​ ೇಮ್​ದಲ್ಲಿ ಪ್ರಥಮ (20,000ರೂ.), ಒಟ್ಟು 13 ತಂಡಗಳು ಭಾಗವಹಿಸಿದ್ದ ಟೀಮ್​
ಐಬಾಲರ್ಸ್​&ಸ್ಟ್ಟೂಡೆಂಟ್​ ಡಿಸೈನ್​ ಸ್ಫರ್ಧೆಯಲ್ಲಿ ಪ್ರಥಮ (1,000 ಡಾರಲ್​), ಟೀಮ ರಿಸೈಕಲಾಪ್ಸ್​ ದ್ವೀತಿಯ ಬಹುಮಾನ (500 ಡಾಲರ್​), 14 ತಂಡ ಭಾಗವಹಿಸಿದ್ದ ಟೀಮ್​ ಗ್ರೌಡಾನ್​ದಲ್ಲಿ ಪ್ರಥಮ ಬಹುಮಾನ (1,000 ಡಾಲರ್​), ಟೀಮ್​ ಅಡ್ಯಾಕ್ಸ್​ದಲ್ಲಿ ದ್ವೀತಿಯ ಬಹುಮಾನ (500 ಡಾಲರ್​) ಬಹುಮಾನ ಗೆದ್ದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಸದಸ್ಯರಾದ ರಾಮ ಭಂಡಾರಿ, ಆರ್​.ಎಸ್​.ಮುತಾಲಿಕ, ಉದಯ ಕಾಲಕುಂದ್ರಿಕರ, ಎಸ್​.ವಿ.ಗಣಾಚಾರಿ ಹಾಗೂ ಫ್ಯಾಕಲ್ಟಿ ಸಂಯೋಜಕ ಹರ್ಷಿತ ಕೆ. ಇತರರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net