ಮಾಹಿತಿ ಪ್ರಕಾರ, ವಿಮಾನವು ಭಾನುವಾರ ಬೆಳಿಗ್ಗೆ 8.20ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIAB) ಲಂಡನ್ ಕಡೆಗೆ ತನ್ನ ಪಯಣ ಆರಂಭಿಸಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ಪೈಲಟ್‌ಗಳ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ವಿಮಾನದ ಸಿಬ್ಬಂದಿ, ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಮಾನವನ್ನು ವಾಪಸ್ ಬೆಂಗಳೂರು ಕಡೆಗೆ ತಿರುಗಿಸಲು ನಿರ್ಧರಿಸಿದ್ದಾರೆ.