100 ಕೋಟಿ ಸಂಭಾವನೆ ನಿರಾಕರಿಸಿದ ಯಶ್​? ದೀಪಾವಳಿಗೆ 'ರಾಮಾಯಣ' ರಿಲೀಸ್​; ಸಿನಿಮಾ ಡಿಸ್ಟ್ರಿಬ್ಯೂಶನ್​ ಮೇಲೆ ಕಣ್ಣಿಟ್ಟಿರುವ ರಾಕಿಂಗ್​ ಸ್ಟಾರ್​? Rocking Star Yash

ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್
Published on
ಮುಂಬೈ: ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನಪ್ಸ್​​ ಸಿನಿಮಾ ನಂತರ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​​ ನಿತೇಶ್​ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ರಾವಣನ ಪಾತ್ರಕ್ಕಾಗಿ ಯಶ್​​ಗೆ ಸುಮಾರು 100 ಕೋಟಿ ಸಂಭಾವನೆ ನೀಡಲಾಗಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೀಗ, ಯಶ್​ ಈ ನೂರು ಕೋಟಿ ಸಂಭಾವನೆಯನ್ನು ತ್ಯಜಿಸಲು ಮುಂದಾಗಿದ್ದಾರೆಂಬ ವರದಿ ಕೇಳಿಬರುತ್ತಿದೆ.

ಸಂಭಾವನೆ ಬದಲು ಡಿಸ್ಟ್ರಿಬ್ಯೂಶನ್​!

ನಿತೇಶ್​ ತಿವಾರಿ ನಿರ್ದೇಶನ ಹಾಗೂ ನಮಿತ್​ ಮಲೋತ್ರಾ ನಿರ್ಮಾಣದಲ್ಲಿ ಮೂಡಿಬರಲಿರುವ ರಾಮಾಯಣ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ನೂರು ಕೋಟಿ ನೀಡಲು ಸಿನಿತಂಡ ಒಪ್ಪಿಕೊಂಡಿದ್ದರೆ, ಯಶ್​ ದಕ್ಷಿಣ ಭಾರತದ ಡಿಸ್ಟ್ರಿಬ್ಯೂಶನ್​ ಹಕ್ಕನ್ನು ತಮಗೆ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಇದರ ಬದಲಿಗೆ ಸಂಭಾವನೆ ತ್ಯಾಗಕ್ಕೆ ನಟ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ರಾಮಾಯಣ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗ ನವೆಂಬರ್​ 6, 2026 ರಂದು ಬಿಡುಗಡೆಯಾದರೆ, ಮುಂದಿನ ಭಾಗ 2027 ರ ದೀಪಾವಳಿಗೆ ತೆರೆಕಾಣಲಿದೆ. ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಳಿಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಯಶ್​ ದಕ್ಷಿಣ ಭಾರತದಲ್ಲಿ ಸಿನಿಮಾದ ಡಿಸ್ಟ್ರಿಬ್ಯೂಶನ್​ ಜವಾಬ್ದಾರಿ ಕೇಳಿದ್ದಾರೆಂದು ಹೇಳಲಾಗುತ್ತಿದೆ.

ಅಧಿಕೃತ ಹೇಳಿಕೆ ಬಂದಿಲ್ಲ!

ಆದರೆ, ಈ ದಕ್ಷಿಣ ಭಾರತದ ಡಿಸ್ಟ್ರಿಬ್ಯೂಶನ್​ ಹಕ್ಕನ್ನು ತಾವು ಪಡೆದ ಬಗ್ಗೆ ನಟ ಯಶ್​ ಆಗಲೀ, ಯಶ್​ಗೆ ಸಿನಿಮಾದ ಡಿಸ್ಟ್ರಿಬ್ಯೂಶನ್​ ಹಕ್ಕನ್ನು ನೀಡಿದ್ದಾಗಿ ನಿರ್ಮಾಪಕರಾಗಲಿ ಈ ವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಇದನ್ನೊಂದು ಅಧಿಕೃತ ಮಾಹಿತಿ ಎನ್ನುವುದಕ್ಕಿಂತ ವದಂತಿ ಎಂದೇ ಪರಿಗಣಿಸುವುದು ಸೂಕ್ತವಾಗಿರುತ್ತದೆ. 

ದೀಪಾವಳಿಗೆ 'ರಾಮಾಯಣ'!

ನಮಿತ್​ ಮಲೋತ್ರಾ ನಿರ್ಮಾಣದ, ಮನೋಜ್​ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ರಾಮಾಯಣ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗಲಿ ಎಂದು ಸಿನಿ ತಂಡ ಈಗಾಗಲೇ ತಿಳಿಸಿದೆ. 2026 ರ ದೀಪಾವಳಿಗೆ ಸಿನಿಮಾದ ಮೊದಲ ಭಾಗ ತೆರೆಕಂಡರೆ, 2027 ರ ದೀಪಾವಳಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ. 
ಈ ಸಿನಿಮಾದಲ್ಲಿ ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ಕಾಣಿಸಿಕೊಂಡರೆ, ರಾವಣನಾಗಿ ಯಶ್​, ಸೀತೆಯಾಗಿ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್​ ಮಿಂಚಲಿದ್ದಾರೆ. ಇವರು ಜೊತೆ ಪ್ರತಿಯೊಂದು ಪಾತ್ರದಲ್ಲಿ ಖ್ಯಾತನಾಮರೇ ಅಭಿನಯಿಸಲಿದ್ದು, ಈ ಸಿನಿಮಾದ ಬಜೆಟ್​ ಸುಮಾರು 4,000 ಕೋಟಿ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net