ಜಿಎಸ್​ಟಿ ಗ್ರಾಹಕರಿಗೆ ತೆರಿಗೆ ದರ ಕಡಿಮೆ

ಕಲಬುರಗಿ ಸಿಯುಕೆನಲ್ಲಿ ಜಿಎಸ್​ಟಿ ಪ್ರಯೋಜನ ಕುರಿತು ಸೋಮವಾರ ಆಯೋಜಿಸಿದ್ದ ಸಮ್ಮೇಳನಕ್ಕೆ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಚಾಲನೆ ನೀಡಿದರು. ಸಾಯಿಪ್ರಸಾದ್​, ಡಾ.ಪಾಂಡುರಂಗ ಪತ್ತಿ, ಡಾ.ಬಸವರಾಜ, ಡಾ.ಸುಮಾ ಸ್ಕೇರಿಯಾ ಇದ್ದರು.
ಕಲಬುರಗಿ ಸಿಯುಕೆನಲ್ಲಿ ಜಿಎಸ್​ಟಿ ಪ್ರಯೋಜನ ಕುರಿತು ಸೋಮವಾರ ಆಯೋಜಿಸಿದ್ದ ಸಮ್ಮೇಳನಕ್ಕೆ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಚಾಲನೆ ನೀಡಿದರು. ಸಾಯಿಪ್ರಸಾದ್​, ಡಾ.ಪಾಂಡುರಂಗ ಪತ್ತಿ, ಡಾ.ಬಸವರಾಜ, ಡಾ.ಸುಮಾ ಸ್ಕೇರಿಯಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಐಎನ್​ಡಿಟಿ ಮಾಜಿ ನಿರ್ದೇಶಕ ಸಾಹಿಪ್ರಸಾದ್​ ಹೇಳಿಕೆ
  • ಸಿಯುಕೆನಲ್ಲಿ ಸರಕು&ಸೇವಾ ತೆರಿಗೆ ಸಮ್ಮೇಳನ
ಕಲಬುರಗಿ: ಜಿಎಸ್​ಟಿ ಸರ್ಕಾರಕ್ಕೆ ಆದಾಯ ಹೆಚ್ಚಿಸಿ ವ್ಯಾಪಾರ ಸಂಸ್ಥೆಗಳಿಗೆ ವ್ಯವಹಾರ ಸುಲಭತೆ ಸುಧಾರಿಸುವುದರ ಜತೆ ಗ್ರಾಹಕರಿಗೆ ತೆರಿಗೆ ಕಮ್ಮಿ ಮಾಡುವ ಮೂಲಕ ಸಹಾಯ ಮಾಡಿದೆ ಎಂದು ಕೇಂದ್ರ ಸರ್ಕಾರದ ಐಎನ್​ಡಿಟಿ ಮತ್ತು ಸಿಇಎ ಮಾಜಿ ನಿರ್ದೇಶಕ ಸಿಎಚ್​ವಿ ಸಾಯಿ ಪ್ರಸಾದ್​ ಹೇಳಿದರು.
ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ (ಸಿಎಂಡಿಆರ್​) ಸಹಯೋಗದಡಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಆರ್ಥಿಕ ಅಧ್ಯಯನ ಮತ್ತು ಯೋಜನೆ, ವಾಣಿಜ್ಯ ವಿಭಾಗ ಸೋಮವಾರ ಆಯೋಜಿಸಿದ್ದ ಜಿಎಸ್​ಟಿ: ಜನ, ವ್ಯವಹಾರ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ಮತ್ತು ವಿಕಸಿತ ಭಾರತ&2047ರತ್ತ ಭಾರತದ ಪ್ರಯಾಣ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಜಿಎಸ್​ಟಿ ಕ್ಯಾಸ್ಕೇಡಿಂಗ್​ ಕಡಿಮೆ ಮಾಡಿರುವುದು ಬೆಲೆಗಳಲ್ಲಿ ಒಟ್ಟಾರೆ ಕಡಿತಕ್ಕೆ ಕಾರಣವಾಗಿದೆ. ಇದು ಒಂದೇ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಿದೆ. ಸಣ್ಣ ತೆರಿಗೆದಾರರಿಗೆ ಪ್ರಯೋಜನ ನೀಡಿದೆ. ಮಾನವರಹಿತ ಎಲೆಕ್ಟ್ರಾನಿಕ್​ ತೆರಿಗೆ ವ್ಯವಸ್ಥೆ ಪರಿಚಯಿಸಿದ್ದಲ್ಲದೆ ದೇಶೀಯ ಕೈಗಾರಿಕೆಗಳನ್ನು ರಸಿದೆ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಮಾತನಾಡಿ, ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ ಸ್ಥಾಪಿಸುವ ಉದ್ದೇಶದಿಂದ 2017ರಿಂದ ಕೇಂದ್ರ ಮತ್ತು ರಾಜ್ಯಗಳ 23 ಪರೋಕ್ಷ ತೆರಿಗೆ ಒಗ್ಗೂಡಿಸಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರಲಾಗಿದೆ ಎಂದರು.
ಸ್ಕೂಲ್​ ಆಫ್​ ಬಿಜಿನೆಸ್​ ಸ್ಟಡಿಸ್​ ಡೀನ್​ ಪ್ರೊ.ಪಾಂಡುರಂಗ ಪತ್ತಿ ಮಾತನಾಡಿ, ತೆರಿಗೆ ವ್ಯವಸ್ಥೆ ವ್ಯವಹಾರ ಪರಿಸರದ ಮೇಲೆ ನೇರ ಪ್ರಭಾವ ಬೀರುತ್ತದೆ. ಜಿಎಸ್​ಟಿ ಸುಧಾರಣೆಗಳು ಕಾರ್ಯಾಚರಣೆ ದಕ್ಷತೆ ಸುಧಾರಣೆ, ವಹಿವಾಟು ವೆಚ್ಚ ಕಡಿಮೆ ಮತ್ತು ಸ್ಪರ್ಧಾತ್ಮಕತೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಬೆಲೆ ಕಡಿಮೆ ಮತ್ತು ಬೇಡಿಕೆ ಹೆಚ್ಚಿಸಲು, ಎಂಎಸ್​ಎಂಇ ಬೆಂಬಲಿಸಲು, ಜೀವನ ಸುಲಭತೆ ಹೆಚ್ಚಿಸಲು, ತೆರಿಗೆ ನೆಲೆ ವಿಸ್ತರಿಸಲು, ಉತ್ಪಾದನೆ ಬೆಂಬಲಿಸಲು, ಆದಾಯದ ಬೆಳವಣಿಗೆ ಉತ್ತೇಜಿಸಲು, ಆರ್ಥಿಕ ವೇಗ ಉಳಿಸಿಕೊಳ್ಳಲು ಮತ್ತು ಸಾಮಾಜಿಕ ರಕ್ಷಣೆ ಬಲಪಡಿಸಲು ಸುಧಾರಣೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ನಿರ್ದೇಶಕ ಡಾ.ಬಸವರಾಜ ಎಂ.ಎಸ್​. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ವಿಶ್ವದ 160ಕ್ಕೂ ಹೆಚ್ಚು ದೇಶಗಳು ಜಿಎಸ್​ಟಿ ಜಾರಿಗೆ ತಂದಿವೆ. 1950ರಲ್ಲಿ ಜಾರಿಗೆ ತಂದ ಮೊದಲ ದೇಶ ಫ್ರಾನ್ಸ್​. ಭಾರತ ರಾಜ್ಯಗಳ ಒಕ್ಕೂಟವಾಗಿದ್ದರಿಂದ ತೆರಿಗೆ ಅಧಿಕಾರದ ಬಗ್ಗೆ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗಿತ್ತು. ಆದ್ದರಿಂದ ಜಿಎಸ್​ಟಿ ಜಾರಿಗೆ ತರಲು ಹತ್ತು ವರ್ಷ ಬೇಕಾಯಿತು ಎಂದು ಹೇಳಿದರು.
ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ ಪ್ರತಿನಿಧಿ ಡಾ.ಸಿದ್ದು ಹೊನಗೋಡಿಮಠ ಮತ್ತು ಸಿಯುಕೆ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥೆ ಡಾ.ಸುಮಾ ಸ್ಕೇರಿಯಾ ಮಾತನಾಡಿದರು.
ಡಾ.ಗಣಪತಿ ಸಿನ್ನೂರ್​, ಡಾ.ಎಂ. ಜೊಹೇರ್​, ಡಾ.ಎಸ್​. ಲಿಂಗಮೂರ್ತಿ, ಡಾ.ಶಿವಕುಮಾರ ಬೆಳ್ಳಿ, ಡಾ.ಸುಜಾತ ಎಸ್​.ಕೆ., ಡಾ.ಜಿ. ಮಹೇಂದ್ರ, ಡಾ.ಶೈಲಜಾ ಕೊನೇಕ್​ ಇತರರಿದ್ದರು.
"

ತೆರಿಗೆ ಭಾರ ಕಡಿಮೆ, ಕೊಳ್ಳುವ ಶಕ್ತಿ ಹೆಚ್ಚಳ, ಕುಟುಂಬಗಳ ಅನುಭೋಗ ವೆಚ್ಚ ವೃದ್ಧಿ, ಸರಪಳಿ ಪರಿಣಾಮ, ಉತ್ಪಾದನಾ ವೆಚ್ಚ ಇಳಿಕೆ ಮಾಡಿ ಉತ್ಪಾದನಾ ದಕ್ಷತೆ ಹೆಚ್ಚಿಸುವುದರ ಮೂಲಕ ವಿಕಸಿತ ಭಾರತ&2047ರ ಕನಸು ಸಾಧಿಸುವುದಾಗಿದೆ.

> ಪ್ರೊ.ಆರ್​.ಆರ್​.ಬಿರಾದಾರ್​

ಕುಲಸಚಿವ, ಸಿಯುಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net