ರೋಗಿಗಳ ಜತೆ ಖುಷಿಯಿಂದ ಮಾತಾಡಿ

ಸೇಡಂ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಶುಕ್ರವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಡಿಎಚ್​ಒ ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಎ.ಎಸ್​.ರುದ್ರವಾಡಿ, ಡಾ.ನಾಗರಾಜ ಮನ್ನೆ, ಡಾ.ಶಂಕ್ರಪ್ಪ ಮೈಲಾರಿ ಇದ್ದರು.
ಸೇಡಂ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಶುಕ್ರವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಡಿಎಚ್​ಒ ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಎ.ಎಸ್​.ರುದ್ರವಾಡಿ, ಡಾ.ನಾಗರಾಜ ಮನ್ನೆ, ಡಾ.ಶಂಕ್ರಪ್ಪ ಮೈಲಾರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಸಲಹೆ
  • ಸೇಡಂ ಆಸ್ಪತ್ರೆಗೆ ದಿಢೀರ್​ ಭೇಟಿ
ಸೇಡಂ: ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡ ಜನರು ಆಗಮಿಸುತ್ತಾರೆ. ಅವರೊಂದಿಗೆ ಖುಷಿಯಿಂದ ಮಾತನಾಡಿ ಚಿಕಿತ್ಸೆ ನೀಡಿದರೆ ರೋಗ ಶೀಘ್ರ ಗುಣವಾಗಲಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಹೇಳಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ದಿಢೀರ್​ ಭೇಟಿ ನೀಡಿದ ಅವರು, ಚೆನ್ನಾಗಿ ಚಿಕಿತ್ಸೆ ನೀಡುತ್ತಾರೆ ಎಂಬ ನಂಬಿಕೆ ರೋಗಿಗಳು ನಿಮ್ಮ ಮೇಲೆ ಇಟ್ಟಿರುತ್ತಾರೆ. ಅಂತಲೇ ಸೌಜನ್ಯದಿಂದ ವರ್ತಿಸಿ ಚಿಕಿತ್ಸೆ ನೀಡಿದರೆ ಚೇತರಿಸಿಕೊಂಡ ಬಳಿಕ ಸದಾ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಸಿಬ್ಬಂದಿಗೆ ತಿಳಿಹೇಳಿದರು.
100 ಹಾಸಿಗೆ ಆಸ್ಪತ್ರೆ ಇದೀಗ 150 ಹಾಸಿಗೆಗೆ ಮೇಲ್ದರ್ಜೆಗೇರಿದೆ. ಮೇಲ್ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ವಿಷಯ ಅರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಆಸ್ಪತ್ರೆಯಲ್ಲಿನ ಸ್ವಚ್ಛತೆ ವೀಕ್ಷಿಸಿ ದೈನಂದಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.
11 ವೆಂಟಿಲೇಟರ್​ಗಳಲ್ಲಿ ಎರಡ್ಮೂರು ಮಾತ್ರ ಬಳಕೆಯಲ್ಲಿದ್ದು, ಉಳಿದವುಗಳು ಅನುಪಯುಕ್ತವಾಗಿವೆ. ಹೀಗಾದರೆ ಹೇಗೆ ಎಂದು ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆ ಅವರನ್ನು ಪ್ರಶ್ನಿಸಿದಾಗ, ಅವು ಬಳಕೆಗೆ ಯೋಗ್ಯವಾಗಿಲ್ಲ ಎಂದು ತಿಳಿಸಿದರು. ಬೇಗ ಸರಿಪಡಿಸಿ ಇಲ್ಲವೇ ಹೊಸದಾಗಿ ಖರೀದಿಸುವ ಯೋಜನೆ ಸಿದ್ಧಪಡಿಸಿ ಎಂದರು.
ಹೆರಿಗೆ ಮತ್ತು ಶಸಚಿಕಿತ್ಸೆ ಪ್ರಮಾಣ ತಾಲೂಕು ಆಸ್ಪತ್ರೆಯಲ್ಲಿ ಇಳಿಕೆ ಆಗುತ್ತಿರುವುದು ಗಮನಕ್ಕಿದ್ದು, ಮುನ್ನೆಚ್ಚರಿಕೆ ವಹಿಸಬೇಕು. ಬೇಡಿಕೆಗೆ ತಕ್ಕಂತೆ ಔಷಧ ಮತ್ತು ಮಾತ್ರೆಗಳು ಪೂರೈಕೆಯಾಗುತ್ತಿಲ್ಲ. ಹೀಗಾಗಿ ರೋಗಿಗಳಿಗೆ ಇರುವ ಔಷಧಗಳನ್ನೇ ನೀಡಲಾಗುತ್ತಿದ್ದು, ಹೆಚ್ಚಿಗೆ ಔಷಧ ಪೂರೈಕೆಯ ಅಗತ್ಯವಿದೆ ಎಂದು ಡಾ.ಮನ್ನೆ ಗಮನಕ್ಕೆ ತಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಶಂಕ್ರಪ್ಪ ಮೈಲಾರಿ, ಶರಣಬಸಪ್ಪ ಗಣಜಲಖೇಡ, ಡಾ.ಎ.ಎಸ್​. ರುದ್ರವಾಡಿ, ಡಾ.ಸಿದ್ದು ಪಾಟೀಲ್​, ಡಾ.ವಿವೇಕಾನಂದರೆಡ್ಡಿ, ಡಾ.ರಾಜಕುಮಾರ ಬಾಳಿ, ತಾಂತ್ರಿಕ ಶಾಖೆಯ ಸೋಮಶೇಖರ ಪೂಜಾರಿ, ಕರಬಸ್ಸಪ್ಪ ಪಸರಗಿ, ಟಿಎಚ್​ಒ ಡಾ.ಸಂಜೀವಕುಮಾರ ಪಾಟೀಲ್​, ಕಂಟೆಪ್ಪ, ಜಗನ್ನಾಥ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net