ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಪ್ರೇರಣೆ

ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಹಾನಗಲ್​ ಕುಮಾರೇಶ್ವರ ಪ್ರಸಾದ ನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಸ್ವಾಮೀಜಿ, ಬಾಬು ಬೆಲ್ದಾಳ ಇತರರಿದ್ದರು.
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಹಾನಗಲ್​ ಕುಮಾರೇಶ್ವರ ಪ್ರಸಾದ ನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಸ್ವಾಮೀಜಿ, ಬಾಬು ಬೆಲ್ದಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಹಾಲಿಂಗ ಸ್ವಾಮೀಜಿ ನುಡಿ
  • ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಕಾರ್ಯಕ್ರಮ
ಭಾಲ್ಕಿ: ಬಡ ವಿದ್ಯಾರ್ಥಿಗಳ ಪ್ರತಿಭೆಗೆ ನೀಡುವ ಗೌರವ, ಪುರಸ್ಕಾರ ಇನ್ನುಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಶ್ರೀ ಮಹಾಲಿಂಗ ಸ್ವಾಮೀಜಿ ನುಡಿದರು.
ನಗರದ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ 499ನೇ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ವಿದ್ಯಾರ್ಥಿಗಳು ತಾಯಿ&ತಂದೆ ಕನಸು ನನಸು ಮಾಡಲು ಕಷ್ಟ ಪಡಬೇಕು. ಲಿಂಗೈಕ್ಯ ಶಂಕರೆಪ್ಪ ಕರಕಾಳೆ ಅವರ ಸ್ಮರಣಾರ್ಥವಾಗಿ ಈ ಪರಿವಾರದಿಂದ ಹಾನಗಲ್​ ಕುಮಾರೇಶ್ವರ ಪ್ರಸಾದ ನಿಲಯದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸಿರುವುದು ಶ್ಲಾನೀಯ ಎಂದು ಹೇಳಿದರು.
ಶ್ರೀ ಸಿದ್ಧಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಚಂದ್ರಕಾಂತ ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು. ತಾರಾಬಾಯಿ ಶಂಕರೆಪ್ಪ ಕರಕಾಳೆ ಪರಿವಾರದಿಂದ ಬಸವ ಗುರುವಿನ ಪೂಜೆ ನೆರವೇರಿತು. ರಮೇಶ ಕರಕಾಳೆ ಇತರರಿದ್ದರು. ಕು.ಸಿಂಧು, ಕು.ಅಮೂಲ್ಯ ಕರಕಾಳೆ ವಚನ ಗಾಯನ ನಡೆಸಿಕೊಟ್ಟರು. ಮುಖ್ಯಗುರು ಬಾಬು ಬೆಲ್ದಾಳ ಸ್ವಾಗತಿಸಿದರು. ದೀಪಕ ಠಮಕೆ, ಸಾ ದತ್ತು ಕರಕಾಳೆ ನಿರೂಪಣೆ ಮಾಡಿದರು.
ಸನ್ಮಾನ : ಅಮೃತ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದ ಚಂದ್ರಕಾಂತ ಪಾಟೀಲ, ಮಧುಕಾಂತ ಪಾಟೀಲ, ರಾಜಕುಮಾರ ಜಲ್ದೆ, ಶಿವಕುಮಾರ ಕಮಠಾಣೆ, ಸಂಗಮೇಶ ವಾಲೆ, ಸಂಜುಕುಮಾರ ಕರಕಾಳೆ, ಪ್ರಶಾಂತ ಕಾಕನಾಳೆ, ಲಿಂಗೇಶ, ನರಸಪ್ಪ, ಪ್ರಭು ಪಾಟೀಲ, ಶರಣಪ್ಪ ಆನಂದವಾಡಿ, ಮನೋಜ ಅಷ್ಟೂರೆ, ರಾಜಕುಮಾರ ಜಾಯಗಾಂವ, ಸಂಗಪ್ಪ ಸೊಲಪುರೆ, ಸೋಮನಾಥ ಪಾಟೀಲ್​ ಅವರನ್ನು ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net