ಬ್ಯಾಂಕ್​, ಎಟಿಎಂ ಭದ್ರತೆಗೆ ಕ್ರಮ ಕೈಗೊಳ್ಳಿ

ಹುಮನಾಬಾದ್​ನಲ್ಲಿ ಸೋಮವಾರ ಡಿವೈಎಸ್​ಪಿ ಮಡೋಳಪ್ಪ ಪಿ.ಎಸ್​. ವಿವಿಧ ಬ್ಯಾಂಕ್​ ಮತ್ತು ಎಟಿಎಂ ಕೇಂದ್ರಗಳಿಗೆ ತೆರಳಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಪಿಎಸ್​ಐ ಸುರೇಶಕುಮಾರ ಇತರರಿದ್ದರು.
ಹುಮನಾಬಾದ್​ನಲ್ಲಿ ಸೋಮವಾರ ಡಿವೈಎಸ್​ಪಿ ಮಡೋಳಪ್ಪ ಪಿ.ಎಸ್​. ವಿವಿಧ ಬ್ಯಾಂಕ್​ ಮತ್ತು ಎಟಿಎಂ ಕೇಂದ್ರಗಳಿಗೆ ತೆರಳಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಪಿಎಸ್​ಐ ಸುರೇಶಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್​ಪಿ ಮಡೋಳಪ್ಪ ಪಿ.ಎಸ್​. ತಾಕೀತು
  • ಹುಮನಾಬಾದ್​ನಲ್ಲಿ ವ್ಯವಸ್ಥೆ ಪರಿಶೀಲನೆ
ಹುಮನಾಬಾದ್​: ಪಟ್ಟಣದಲ್ಲಿ ಸೋಮವಾರ ಡಿವೈಎಸ್​ಪಿ ಮಡೋಳಪ್ಪ ಪಿ.ಎಸ್​. ನೇತೃತ್ವದಲ್ಲಿ ಅಧಿಕಾರಿಗಳು ವಿವಿಧ ಬ್ಯಾಂಕ್​ ಮತ್ತು ಎಟಿಎಂ ಕೇಂದ್ರಗಳಿಗೆ ತೆರಳಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.
ಎಸ್​ಬಿಐ, ಕೆನರಾ ಇತರ ಬ್ಯಾಂಕ್​ಗಳಿಗೆ ಭೇಟಿ ನೀಡಿದ ಅವರು, ಇತ್ತೀಚೆಗೆ ಬ್ಯಾಂಕ್​ ವಂಚನೆ, ಕಳ್ಳತನ ಮತ್ತು ಸೈಬರ್​ ಅಪರಾಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸಮಗ್ರ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು. ಎಟಿಎಂ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ, ಸೈರನ್​ ಸಮರ್ಪಕ ಕಾರ್ಯನಿರ್ವಹಿಸುತ್ತಿದೆಯೇ? ಭದ್ರತಾ ಸಿಬ್ಬಂದಿ ನಿಯೋಜನೆ, ಅಗ್ನಿಶಾಮಕ ಉಪಕರಣಗಳ ಲಭ್ಯತೆ ಸೇರಿ ವಿವಿಧ ಅಂಶಗಳ ಕುರಿತು ಬ್ಯಾಂಕ್​ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಂಡರು.
ಸಾರ್ವಜನಿಕರ ಹಣದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಬಗ್ಗೆ ತಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸೈಬರ್​ ವಂಚನೆ ಕುರಿತು ಗ್ರಾಹಕರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ಕೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಪಿಎಸ್​ಐ ಸುರೇಶಕುಮಾರ ಚವ್ಹಾಣ್​, ವಿವಿಧ ಬ್ಯಾಂಕ್​ ವ್ಯವಸ್ಥಾಪಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net