ಕಾಲುವೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಿ

ಅಫಜಲಪುರ ತಾಲೂಕಿನ ಬಳ್ಳುಂಡಗಿ ಬಳಿ ಜಾಕವೆಲ್​ ಮೂಲಕ ಕಾಲುವೆಗಳಿಗೆ ನೀರೆತ್ತುವ ಮೋಟಾರ್​ಗಳಿಗೆ ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಚಾಲನೆ ನೀಡಿದರು. ಪ್ರಕಾಶ ಜಮಾದಾರ, ಮಂಜುನಾಥ ಅಂಜುಟಗಿ, ಚಂದ್ರಶೇಖರ ಕರಜಗಿ, ಶಿವಾನಂದ ಗಾಡಿಸಾಹುಕಾರ ಇದ್ದರು.
ಅಫಜಲಪುರ ತಾಲೂಕಿನ ಬಳ್ಳುಂಡಗಿ ಬಳಿ ಜಾಕವೆಲ್​ ಮೂಲಕ ಕಾಲುವೆಗಳಿಗೆ ನೀರೆತ್ತುವ ಮೋಟಾರ್​ಗಳಿಗೆ ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಚಾಲನೆ ನೀಡಿದರು. ಪ್ರಕಾಶ ಜಮಾದಾರ, ಮಂಜುನಾಥ ಅಂಜುಟಗಿ, ಚಂದ್ರಶೇಖರ ಕರಜಗಿ, ಶಿವಾನಂದ ಗಾಡಿಸಾಹುಕಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಸೂಚನೆ
  • ಬಳ್ಳುಂಡಗಿಯಲ್ಲಿ ನೀರೆತ್ತುವ ಕಾರ್ಯಕ್ಕೆ ಚಾಲನೆ
ಅಫಜಲಪುರ: ಪ್ರಸ್ತುತ ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಬಳ್ಳುಂಡಗಿ ಹಾಗೂ ಅಳ್ಳಗಿ (ಬಿ) ಬಲ ಹಾಗೂ ಎಡ ದಂಡೆಗಳ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಕೆಎನ್​ಎನ್​ಎಲ್​ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಸೂಚನೆ ನೀಡಿದರು.
ಬಳ್ಳುಂಡಗಿ ಹತ್ತಿರವಿರುವ ಜಾಕವೆಲ್​ ಮೂಲಕ ಕಾಲುವೆಗಳಿಗೆ ನೀರು ಎತ್ತುವ ಮೋಟಾರ್​ಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಬಳ್ಳುಂಡಗಿ ಜಾಕವೆಲ್​ ವ್ಯಾಪ್ತಿಗೆ 63 ಕಿಮೀ ಕಾಲುವೆಯಿದ್ದು, 16,721 ಹೆಕ್ಟೇರ್​ ಹಾಗೂ ಅಳ್ಳಗಿ (ಬಿ) ಜಾಕವೆಲ್​ ಕಾಲುವೆಗಳ ಮೂಲಕ 7,500 ಹೆಕ್ಟೇರ್​ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗುತ್ತದೆ. ರೈತರು ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಎನ್​ಎನ್​ಎಲ್​ ಎಇಇ ಸಂತೋಷ ಪಾಟೀಲ್​ ಮಾತನಾಡಿ, ಬಳ್ಳುಂಡಗಿ ಜಾಕವೆಲ್​ ಮೂಲಕ ಅಫಜಲಪುರ, ಶಿರವಾಳ, ಸೊನ್ನ, ಆನೂರ, ಬಿಲ್ವಾಡ, ಮಾತೋಳಿ, ಮಲಾಬಾದ್​, ಅತನೂರ, ಸಿಧನೂರ, ಬೊಗನಳ್ಳಿ, ತ್ತರಗಾ, ಬಟಗೇರಾ ಸೇರಿ ಇತರ ಗ್ರಾಮದ ರೈತರಿಗೆ ಅನುಕೂಲವಾಗಲಿದೆ. ನಿತ್ಯ 1000 ಎಚ್​ಪಿ ಸಾಮರ್ಥ್ಯದ ಮೂರು ಮೋಟಾರ್​ಗಳ ಮೂಲಕ 210 ಕ್ಯೂಸೆಕ್​ ನೀರು ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಎಪಿಎಂಸಿ ಅಧ್ಯ ಮಂಜುನಾಥ ಅಂಜುಟಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಪ್ರಕಾಶ ಜಮಾದಾರ, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರ ಅಧ್ಯ ಚಂದ್ರಶೇಖರ ಕರಜಗಿ, ಪ್ರಮುಖರಾದ ಶಿವಾನಂದ ಗಾಡಿಸಾಹುಕಾರ, ಶಿವಕುಮಾರ ಸ್ವಾಮಿ, ಗುರು ಪಾಣೆಗಾಂವ್​, ಸಾಯಬಣ್ಣ, ಶ್ರೀಮಂತ ಬಿರಾದಾರ, ಚಂದ್ರಾಮ ಬಳಗುಂಡಿ, ರಮೇಶ ಪಾಟೀಲ್​, ಬಸವರಾಜ ಜಮಾದಾರ, ಮಲ್ಲು ಸಾಂಪೂರ, ಸಂಗನಗೌಡ ಪಾಟೀಲ್​, ಮುರುಂದ್ರ ಮಸಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net