ನೇಪಾಳ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿರುವ ಭಾರತೀಯರೆಲ್ಲರಿಗೂ ಪರಿಹಾರ ನೀಡಬೇಕು. ಸದ್ಯ ಇನ್ನೂ ಯಾರ್ಯಾರು ಅಲ್ಲಿ ಸಿಲುಕಿಕೊಂಡಿದ್ದಾರೊ ಅವರ ನೆರವಿಗೆ ಕೂಡಲೇ ದೌಡಾಯಿಸಬೇಕು. ಈ ನಿಟ್ಟಿನಲ್ಲಿ ನೇಪಾಳ ಸರ್ಕಾರಕ್ಕೆ ಭಾರತದಿಂದ ಅಗತ್ಯ ಸಹಾಯ ನೆರವು ನೀಡುವಂತಾಗಬೇಕು. ಭಾರತ ಸರ್ಕಾರ, ನೇಪಾಳ ಸರ್ಕಾರ, ಅಲ್ಲಿನ ಜನ ಎಲ್ಲರೂ ಸೇರಿಕೊಂಡು ಒಂದಾಗಿ ನೆರವಿನ ಕೆಲಸಗಳಿಗೆ ಕೈಜೋಡಿಸಬೇಕಾಗಿದೆ. ನೇಪಾಳ ಘಟನೆ ಆಗಬಾರದಾಗಿತ್ತು. ನಿಸರ್ಗದ ನಿಯಮದ ಮುಂದೆ ಯಾರೂ ಏನು ಮಾಡಲಿಕ್ಕೆ ಆಗಲ್ಲ. ಈಗ ಪರಿಸ್ಥಿತಿಯನ್ನು ಎದುರಿಸಲು ಮುಂದಾಗಬೇಕಾಗಿದೆ ಎಂದು ತಿಳಿಸಿದರು.