ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ

ಅಫಜಲಪುರ ತಾಲೂಕಿನ ಬಳ್ಳುಂಡಗಿ ಜಾಕವೆಲ್​ಗೆ ಕೆಎನ್ನೆನ್ನೆಲ್​ ಸಿಇ ವಿನಾಯಕ ಸುಗೂರ ಭೇಟಿ ನೀಡಿ ಪರಿಶೀಲಿಸಿದರು. ಇಇ ಶಿವಕುಮಾರ ಸ್ವಾಮಿ, ಎಇಇಗಳಾದ ಸಂತೋಷ ಸಜ್ಜನ್​, ಸಂತೋಷ ಪಾಟೀಲ್​ ಇದ್ದರು.
ಅಫಜಲಪುರ ತಾಲೂಕಿನ ಬಳ್ಳುಂಡಗಿ ಜಾಕವೆಲ್​ಗೆ ಕೆಎನ್ನೆನ್ನೆಲ್​ ಸಿಇ ವಿನಾಯಕ ಸುಗೂರ ಭೇಟಿ ನೀಡಿ ಪರಿಶೀಲಿಸಿದರು. ಇಇ ಶಿವಕುಮಾರ ಸ್ವಾಮಿ, ಎಇಇಗಳಾದ ಸಂತೋಷ ಸಜ್ಜನ್​, ಸಂತೋಷ ಪಾಟೀಲ್​ ಇದ್ದರು.
Published on
ಅಫಜಲಪುರ: ಭೀಮಾ ಏತ ನೀರಾವರಿ ಬಳ್ಳುಂಡಗಿ, ಅಳ್ಳಗಿ (ಬಿ) ಜಾಕವೆಲ್​ಗಳಿಂದ ಕಾಲುವೆಗಳ ಮೂಲಕ ಸರಾಗವಾಗಿ ನೀರು ಹರಿಯುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಕೆಎನ್​ಎನ್​ಎಲ್​ ಮುಖ್ಯ ಇಂಜಿನಿಯರ್​ ವಿನಾಯಕ ಸುಗೂರು ಸೂಚನೆ ನೀಡಿದರು. ಬಳ್ಳುಂಡಗಿ, ಅಳ್ಳಗಿ (ಬಿ), ಅಫಜಲಪುರ ಜಾಕವೆಲ್​ಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸದ್ಯ ಬರಗಾಲ ಇರುವುದರಿಂದ ರೈತರು ತೊಂದರೆಯಲ್ಲಿದ್ದು, ನೀರು ಪೋಲಾಗದಂತೆ ನಿರಂತರ ನಿಗಾವಹಿಸಬೇಕು. ಜಾಕವೆಲ್​ಗಳಿಗೆ ನಿರಂತರ ವಿದ್ಯುತ್​ ಸರಬರಾಜು ಆಗುವಂತೆ ಹಾಗೂ ಕಾಲಕಾಲಕ್ಕೆ ಮೋಟಾರ್​ ಕಾರ್ಯಮತೆ ಪರಿಶೀಲಿಸಬೇಕು. ಮುಖ್ಯ ಕಾಲುವೆಯಿಂದ ಉಪ ಕಾಲುವೆಗಳಿಗೆ ನೀರು ಸರಬರಾಜು ಆಗಬೇಕು ಎಂದು ಹೇಳಿದರು. ಇಇ ಶಿವಕುಮಾರ ಸ್ವಾಮಿ, ಎಇಇಗಳಾದ ಸಂತೋಷ ಸಜ್ಜನ್​, ಸಂತೋಷ ಪಾಟೀಲ್​, ಪ್ರಮುಖರಾದ ಸುಧೀರ ಸಂಗಾಣಿ, ಶ್ರೀಮಂತ ಬಿರಾದಾರ, ಸಿದ್ದು ದೇವರನಾವದಗಿ, ಅಬ್ಬಾಸ್​ಅಲಿ ನದಾಫ್​, ನಾಮದೇವ ಕಡಕೋಳ, ಅಶೋಕ ಬಗಲಿ, ಶಿವು ಪದಕಿ, ರಾಜಶೇಖರ ಪಾಟೀಲ್​, ಕಾಸೀಂಸಾಬ್​, ರವಿ ಜೆ. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net