ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಿ

ಹುಲಸೂರು ತಾಲೂಕಿನ ತೊಗಲೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಂಗಳವಾರ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ವಿಶೇಷ ತರಬೇತಿ ಶಿಬಿರ ತಾಪಂ ಇಒ ಮಹಾದೇವ ಜಮ್ಮು ಉದ್ಘಾಟಿಸಿದರು. ಗ್ರಾಪಂ ಅಧ್ಯೆ  ಲಕ್ಷಿ$್ಮಬಾಯಿ ಧಬಾಲೆ, ಉಪಾಧ್ಯ ಶೇಷಾರಾವ ರಾಜೋಳೆ, ಜ್ಯೋತಿ ಕಾವಡೆ ಇತರರಿದ್ದರು.
ಹುಲಸೂರು ತಾಲೂಕಿನ ತೊಗಲೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ವಿಶೇಷ ತರಬೇತಿ ಶಿಬಿರ ತಾಪಂ ಇಒ ಮಹಾದೇವ ಜಮ್ಮು ಉದ್ಘಾಟಿಸಿದರು. ಗ್ರಾಪಂ ಅಧ್ಯೆ ಲಕ್ಷಿ$್ಮಬಾಯಿ ಧಬಾಲೆ, ಉಪಾಧ್ಯ ಶೇಷಾರಾವ ರಾಜೋಳೆ, ಜ್ಯೋತಿ ಕಾವಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಒ ಮಹಾದೇವ ಜಮ್ಮು ಸಲಹೆ
  • ತೊಗಲೂರ ಸರ್ಕಾರಿ ಶಾಲೆಯಲ್ಲಿ ಚಾಲನೆ
ಹುಲಸೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಕಾಲಹರಣ ಮಾಡದೆ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ವಿಶೇಷ ಶಿಬಿರದ ತರಬೇತಿಯಲ್ಲಿ ಭಾಗವಹಿಸಿ ಅರ ಾನ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮಹದೇವ ಜಮ್ಮು ಹೇಳಿದರು.
ತಾಲೂಕಿನ ತೊಗಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮೀಣ ಭಾಗದ ಮಕ್ಕಳ ಬೇಸಿಗೆ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ರಜೆಯಲ್ಲಿ ಮಕ್ಕಳು ಮೊಬೈಲ್​ ಹಾಗೂ ಟಿವಿ ಹೆಚ್ಚು ಬಳಸುವುದು, ವಿವಿಧ ಚಟ ಮಾಡುವುದರ ಜತೆಗೆ ಈಜಾಡಲು ಕೆರೆ, ಬಾವಿ, ಕೃಷಿ ಹೊಂಡಗಳಿಗೆ ತೆರಳಿ ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಪ್ರಾರಂಭ ಮಾಡಿ ಬಿಸಿಯೂಟ ನೀಡುತ್ತಿರುವುದರ ಜತೆಗೆ ಾನದಾಸೋಹ ನೀಡುತ್ತಿರುವುದು ಮಹತ್ವದಾಗಿದೆ. ವಿದ್ಯಾರ್ಥಿಗಳು ತಪ್ಪದೇ ತರಬೇತಿಗೆ ಹಾಜರಾಗಬೇಕು ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಶಿಕರು ಹಾಗೂ ಅಧಿಕಾರಿಗಳು ರ್ನಿಲಕ್ಷಮಾಡದೆ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಕರೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪಿಡಿಒ ಜ್ಯೋತಿ ಕಾವಡೆ, ಮುಖ್ಯಗುರು ಶಿವುಕುಮಾರ ಮಾತಾಡಿದರು. ಗ್ರಾಪಂ ಅಧ್ಯೆ ಲಕ್ಷಿ$್ಮಬಾಯಿ ಧಬಾಲೆ, ಉಪಾಧ್ಯ ಶೇಷಾರಾವ ರಾಜೋಳೆ, ಸದಸ್ಯರಾದ ಮನೋಜ ಗರಂಡೆ, ಅನಿಲ ಹಸಗೊಂಡ, ಪ್ರಮುಖರಾದ ಬಲಭೀಮ ವಾನಖೇಡೆ, ರವೀಂದ್ರ ಕಾಮಣ್ಣ, ಝರೆಪ್ಪ, ವಿಜಯಲಕ್ಷಿ$್ಮ, ಅಂಬಿಕಾ ಇತರರಿದ್ದರು. ನವೀನ ನಾಯಕ ಸ್ವಾಗತಿಸಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net