ಕಾರ್ಮಿಕ ಇಲಾಖೆ ಯೋಜನೆಗಳ ಲಾಭ ಪಡೆಯಿರಿ

 ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಮಾತನಾಡಿದರು. ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ, ಯಲ್ಲಪ್ಪ ಕಟ್ಟಿಮನಿ, ಜಗನ್ನಾಥ ಗುಂಡಗುರ್ತಿ ಇದ್ದರು.
ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಮಾತನಾಡಿದರು. ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ, ಯಲ್ಲಪ್ಪ ಕಟ್ಟಿಮನಿ, ಜಗನ್ನಾಥ ಗುಂಡಗುರ್ತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣಪ್ಪ ಜಳಿಮನಿ ಕರೆ
  • ನಿಂಬರ್ಗಾದಲ್ಲಿ ಸೇವಾ ಕೇಂದ್ರ ಉದ್ಘಾಟನೆ
ಆಳಂದ: ಕರ್ಮಿಕರು ಸಂಘಟಿತರಾಗುವುದರ ಜತೆಗೆ ಬಲಿಷ್ಠರಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಆರ್​.ಹಳಿಮನಿ ಅಭಿಪ್ರಾಯಪಟ್ಟರು.
ನಿಂಬರ್ಗಾದಲ್ಲಿ ವಲಯ ಮಟ್ಟದ ಕಟ್ಟಡ ಮತ್ತು ಕಲ್ಲು ಕ್ವಾರಿ ಕಾರ್ಮಿಕ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನ ಹಾಗೂ ಕಾರ್ಮಿಕ ಸಂಟನೆ ಸೇವಾ ಕೇಂದ್ರ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರ ಮಕ್ಕಳು ಕಾರ್ಮಿಕರಾಗುವುದು ಬೇಡ. ಜಿಲ್ಲೆಯಲ್ಲಿ ಅಳಂದ, ಚಿತ್ತಾಪುರ, ಅಫಜಲಪುರ, ಜೇವರ್ಗಿಯಲ್ಲಿ ಕಾರ್ಮರಿಕರ ಮಕ್ಕಳಿಗಾಗಿ ಶ್ರಮಿಕ ವಸತಿಶಾಲೆ ಪ್ರಾರಂಭಿಸಲಾಗಿದೆ. 6ನೇ ತರಗತಿಯಿಂದ ಪ್ರವೇಶ ನೀಡಲಾಗುವುದು, ಗುಣಮಟ್ಟದ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ನಿರ್ಮಿಸುವ ಕೆಲಸವಾಗಲಿದೆ ಎಂದರು.
18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಹಚ್ಚಬೇಡಿ. 18 ವರ್ಷದೊಳಗಿನ ಯುವತಿಯರನ್ನು ಮದುವೆ ಮಾಡಬೇಡಿ. ಇದು ಉಲ್ಲಂಘಿಸಿದರೆ 10 ಸಾವಿರ ರೂ. ದಂಡ, 6 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕಾರ್ಮಿಕ ಇಲಾಖೆಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ, ಎಐಕೆಎಂಎಸ್​ ಜಿಲ್ಲಾಧ್ಯ ಭೀಮಾಶಂಕರ ಮಾಡಿಯಾಳ, ಹಿರಿಯ ಕಾರ್ಮಿಕ ನಿರೀಕ ರವೀಂದ್ರ ಕುಮಾರ ಬೆಳ್ಳೂರು, ಪ್ರಮುಖರಾದ ಮೌಲಾಮುಲ್ಲಾ, ಯಲ್ಲಪ್ಪ ಕಟ್ಟಿಮನಿ, ಲ್ಮಕಾಂತ ರಂಜೇರಿ, ದಸ್ತಗಿರ ಲದಾಫ್​, ಯಂಕಪ್ಪ ಬನಪಟ್ಟಿ, ಶರಣಬಸಪ್ಪ ಪೂಜಾರಿ, ರೇಖಾ ರಂಗನ್​ ಇತರರಿದ್ದರು.
ಹಿರಿಯ ಕಾರ್ಮಿಕರು ಹಾಗೂ ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಜಗನ್ನಾಥ ಗುಂಡಗುರ್ತಿ ನಿರೂಪಣೆ ಮಾಡಿದರು. ಸೌಂದರ್ಯ ಜವಳಿ ಸ್ವಾಗತಿಸಿದರು. ಸಚಿನ್​ ಕಟ್ಟಿಮನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net