ಸರ್ಕಾರಿ ಶಾಲೆಯ ಸದುಪಯೋಗ ಪಡೆದುಕೊಳ್ಳಿ

ಹುಲಸೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಉಚಿತ ಸಮವಸ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ಎಸ್​ಡಿಎಂಸಿ ಅಧ್ಯ ರಾಜಕುಮಾರ ಚಾಂಗಲೂರೆ,  ಸೂರ್ಯಕಾಂತ ಅಡಕ್ಕೆ, ದೇವಿಂದ್ರ ನಂಜವಾಡೆ, ಅಬ್ದುಲ್​ ಹಕ್​, ಪುಷ್ಪ ಕಾರಬರಿ ಇತರರಿದ್ದರು.
ಹುಲಸೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಉಚಿತ ಸಮವಸ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ಎಸ್​ಡಿಎಂಸಿ ಅಧ್ಯ ರಾಜಕುಮಾರ ಚಾಂಗಲೂರೆ, ಸೂರ್ಯಕಾಂತ ಅಡಕ್ಕೆ, ದೇವಿಂದ್ರ ನಂಜವಾಡೆ, ಅಬ್ದುಲ್​ ಹಕ್​, ಪುಷ್ಪ ಕಾರಬರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಲಸೂರಿನಲ್ಲಿ ಮಕ್ಕಳಿಗೆ ಪುಸ್ತಕ ಸಮವಸ್ತ್ರ ವಿತರಣೆ
ಹುಲಸೂರು: ಸರ್ಕಾರ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಶಿಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರೌಢ ಶಾಲೆ ಶಿಕರ ಸಂದ ತಾಲೂಕು ಅಧ್ಯ ಸೂರ್ಯಕಾಂತ ಅಡಕ್ಕೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ ಹಾಗೂ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ಮಕ್ಕಳ ಶಿಣದ ಬಗ್ಗೆ ಪಾಲಕರು ನಿಗಾ ವಹಿಸಬೇಕು. ವಿದ್ಯಾರ್ಥಿಗಳು ನಿಮ್ಮ ಸಹಪಾಠಿಗಳನ್ನು ಆದಷ್ಟು ಬೇಗನೆ ಶಾಲೆಗೆ ಕರೆ ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕು. ಸೇತು ಬಂದ ತರಗತಿ ಈಗಾಗಲೇ ಪ್ರಾರಂಭವಾಗಿದ್ದು, ಇದಾದ ಕೆಲವೇ ದಿನದಲ್ಲಿ ತರಗತಿ ಪ್ರಾರಂಭ ಮಾಡಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದರೆ ಶಿಕರಿಗೂ ಕಲಿಸಲು ಹುಮ್ಮಸ್ಸು ಬರುತ್ತದೆ ಎಂದರು.
ಪತ್ರಕರ್ತ ರಾಜಕುಮಾರ ಹೊನ್ನಾಡೆ ಮಾತನಾಡಿ, ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಶಿಕರ ಕೊರತೆ ಇದ್ದರೆ ಮೊದಲೇ ನೀಗಿಸಬೇಕು. ಸರ್ಕಾರಿ ಪ್ರೌಢಶಾಲೆಗಳಲ್ಲಿ ನುರಿತ ಶಿಕರಿಂದ ಗುಣಮಟ್ಟದ ಶಿಣದ ಜತೆಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಎಸ್​ಡಿಎಂಸಿ ಅಧ್ಯ ರಾಜಕುಮಾರ ಚಾಂಗಲೂರೆ, ದೇವಿಂದ್ರ ನಂಜವಾಡೆ, ಅಬ್ದುಲ್​ ಹಕ್​, ರೊಹುಲ್​ ಅಮೀನ್​, ಎಂಡಿ ಆಯಾಜ್​, ಪುಷ್ಪಾ ಕಾರಬರಿ, ಹೀರಾಬಾಯಿ, ಆರತಿ ಫುಲೇಕರ, ರೇಷ್ಮಾ ಸಜ್ಜನ ಇತರರಿದ್ದರು. ಗಾಯತ್ರಿ ಬೀರಗೆ ಸ್ವಾಗತಿಸಿ, ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net