ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ

ಯಾದಗಿರಿಯಲ್ಲಿ ಶನಿವಾರ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ಅವರು ಕಾರ್ಮಿಕರಿಗೆ ವಿವಿಧ ಕಿಟ್​ಗಳನ್ನು ವಿತರಿಸಿದರು. ಕಾರ್ಮಿಕ ಇಲಾಖೆ ನಿರೀಕಿ ಸಂಗೀತಾ ಹೊನ್ನೂರ, ಶಿವರಾಜ, ಸುನೀಲಕುಮಾರ ಇತರರಿದ್ದರು.
ಯಾದಗಿರಿಯಲ್ಲಿ ಶನಿವಾರ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ಅವರು ಕಾರ್ಮಿಕರಿಗೆ ವಿವಿಧ ಕಿಟ್​ಗಳನ್ನು ವಿತರಿಸಿದರು. ಕಾರ್ಮಿಕ ಇಲಾಖೆ ನಿರೀಕಿ ಸಂಗೀತಾ ಹೊನ್ನೂರ, ಶಿವರಾಜ, ಸುನೀಲಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸಲಹೆ
  • ಕಾರ್ಮಿಕರಿಗೆ ವಿವಿಧ ಕಿಟ್​ಗಳ ವಿತರಣೆ
ಯಾದಗಿರಿ: ದೇಶದ ಪ್ರಗತಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರವಿದೆ. ಸರ್ಕಾರ ಅವರ ಕರ್ತವ್ಯಕ್ಕೆ ಹಾಗೂ ಸುರತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಅಲ್ಲದೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಈ ಯೋಜನೆಗಳ ಲಾಭ ಪಡೆದು, ಆರ್ಥಿಕವಾಗಿ ಬದಲಾವಣೆ ಸಾಧಿಸಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡ ಯಾದಗಿರಿ ಮತೇತ್ರದ ನೊಂದಾಯಿತ 346 ಕಾರ್ಮಿಕರಲ್ಲಿ 290 ಕಾರ್ಮಿಕರಿಗೆ  ಮೇಸನ್​ ವೃತ್ತಿ ಸುರತಾ ಕಿಟ್​ಗಳು, 39 ಎಲೆಕ್ಟಿಷಿಯನ್​ ವೃತ್ತಿಯ ಸುರತಾ ಕಿಟ್​ಗಳು ಹಾಗೂ 21 ಕಾರ್ಮಿಕರಿಗೆ ವೆಲ್ಡರ್​ ವೃತ್ತಿಯ ಕಿಟ್​ಗಳನ್ನು ವಿತರಿಸಿ ಮಾತನಾಡಿದರು.
ಕಾರ್ಮಿಕ ಸಚಿವ ಸಂತೋಷ ಲಾಡ್​ ಅವರು, ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರುವ ಮೂಲಕ ಪ್ರಾಮಾಣಿಕವಾಗಿ ದುಡಿಯುವ ಕಾರ್ಮಿಕರಿಗೆ ಅನುಕೂಲಕರವಾಗುವ ಯೋಜನೆಗಳನ್ನು ರೂಪಿಸಿ, ಇಲಾಖೆಗೆ ಹೊಸ ಕಾಯಕಲ್ಪ ನೀಡಿದ್ದಾರೆ ಎಂದು ಹೇಳಿದರು.
ಬಿಸಿಲು ನಾಡು ಎಂದು ಕರೆಯುವ ಗಿರಿ ಜಿಲ್ಲೆಯ ಯುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅರಸಿ ಬೃಹತ್​ ನಗರಗಳಿಗೆ ಗುಳೆ ಹೋಗುತ್ತಾರೆ. ದಯವಿಟ್ಟು ಇಲ್ಲಿಯೂ ಕೆಲಸಗಳಲ್ಲಿ ಕಾರ್ಮಿಕರ ಅಗತ್ಯವಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಸೂಕ್ತ ಕೂಲಿ ಹಣ ಕೂಡ ಸಿಗುತ್ತದೆ. ಕಾರ್ಮಿಕ ಇಲಾಖೆ ಸಹಕಾರದೊಂದಿಗೆ ಕೆಲಸ ಮಾಡಿ ಎಂದು ಶಾಸಕರು ಸಲಹೆ ನೀಡಿದರು. ಕಾರ್ಮಿಕ ಇಲಾಖೆ ನಿರೀಕಿ ಸಂಗೀತಾ ಹೊನ್ನೂರ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಸರ್ಕಾರ ಕಾರ್ಮಿಕರ ಸುರತೆಯ ದೃಷ್ಟಿಯಿಂದ ಕಿಟ್​ಗಳನ್ನು ನೀಡುತ್ತಿದೆ, ಅದನ್ನು ಸರಿಯಾಗಿ ಬಳಸಿಕೊಂಡು ಕೆಲಸ ಮಾಡುವಲ್ಲಿ ಎಚ್ಚರಿಕೆ ವಹಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ಶಿವರಾಜ, ಸುನೀಲಕುಮಾರ ಹಾಗೂ ಕಾರ್ಮಿಕ ಸೇವಾ ಕೇಂದ್ರಗಳ ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net