ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ

ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಜಲಧಾರೆ ಯೋಜನೆ ಕುರಿತ ಕಾಮಗಾರಿಯನ್ನು ಜಿಪಂ ಸಿಇಒ ಲವೀಶ್​ ಒರ್ಡಿಯಾ ಪರಿಶೀಲಿಸಿದರು.
ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಜಲಧಾರೆ ಯೋಜನೆ ಕುರಿತ ಕಾಮಗಾರಿಯನ್ನು ಜಿಪಂ ಸಿಇಒ ಲವೀಶ್​ ಒರ್ಡಿಯಾ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಲವೀಶ್​ ಒರ್ಡಿಯಾ ಸೂಚನೆ
  • ಜಲಧಾರೆ ಯೋಜನೆ ಪ್ರಗತಿ ಪರಿಶೀಲನಾ ಸಭೆ
ಯಾದಗಿರಿ: ಜಲಧಾರೆ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಾಮಗಾರಿಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಲವೀಶ್​ ಒಡಿಯಾ ಸೂಚನೆ ನೀಡಿದರು.
ಹುಣಸಗಿ ತಾಲೂಕಿನ ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಡಿಯಲ್ಲಿ ಸ್ಕಾಡಾ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಕರೆದಿದ್ದ ಜಲಧಾರೆ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಆಡಳಿತವು ಎಲ್ಲ ಮಧ್ಯಸ್ಥಗಾರರಿಗೆ ಭರವಸೆ ನೀಡಿದ್ದು, ಪ್ರತಿ ನ್ಯಾಯಯುತ ದೂರನ್ನು ಪರಿಗಣಿಸಲಾಗುತ್ತದೆ. ಪ್ರತಿ ರೈತನ ಹಿತಾಸಕ್ತಿ ರಸಲಾಗುವುದು. ಪ್ರತಿ ಕಾನೂನು ಪರಿಹಾರ ಬೇಡಿಕೆ ನ್ಯಾಯಯುತ ಮತ್ತು ತ್ವರಿತವಾಗಿ ಇತ್ಯರ್ಥಪಡಿಸುವ ಜತೆಗೆ ಯಾವುದೇ ಕಾನೂನು ಬಾಹಿರ ಅಡ್ಡಿಯನ್ನು ರಾಜಿ ಮತ್ತು ವಿನಾಯಿತಿ ಇಲ್ಲದೆ ಕಾನೂನಿನ ಪ್ರಕಾರ ಎದುರಿಸಲಾಗುತ್ತದೆ ಎಂದು ಜಿಪಂ ಸಿಇಒ ಲವೀಶ್​ ಒರ್ಡಿಯಾ ತಿಳಿಸಿದ್ದಾರೆ.
ಜಲಧಾರೆ ಯೋಜನೆಯಡಿ ಈವರೆಗೆ ಶೇ.60 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಇರುವ ಪೈಪ್​ ಲೈನ್​ ಅಳವಡಿಕೆ, ಜಾಕ್ವೆಲ್​ ಮತ್ತು ನೀರು ಶುದ್ಧೀಕರಣ ಟಕದ ಭೂ ನೊಂದಣಿ ತ್ವರಿತ ಪೂರ್ಣ, ಪೈಪ್​ಲೈನ್​ ಅಳವಡಿಸಲು ರೈತರೊಂದಿಗೆ ಲಿಖಿತ ಒಪ್ಪಂದ, ಕಾನೂನಿನ ಮಿತಿಯಲ್ಲಿ ಪರಿಹಾರ, ಗುತ್ತಿಗೆದಾರರೊಂದಿಗೆ ಸಹಕಾರ ಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಲಧಾರೆ ಯೋಜನೆಯನ್ನು ಮೆ. ಮೇಘಾ ಇಂಜಿನಿಯರಿಂಗ್​ ಮತ್ತು ಇನ್​ಫ್ರಾಸ್ಟಕ್ಚರ್ಸ್​ ಲಿ.ರವರು ಜಲ ಜೀವನ ಮಿಷನ್​ (ಜೆಜೆಎಂ) ಅಡಿಯಲ್ಲಿ ಡಿಬಿಒಟಿ ಮಾದರಿಯಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಜಿಲ್ಲೆಯ 6 ತಾಲೂಕುಗಳ 696 ಹಳ್ಳಿಗಳು ಮತ್ತು 3 ನಗರ ಸ್ಥಳಿಯ ಸಂಸ್ಥೆಗಳನ್ನು (ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ) ಒಳಗೊಂಡು 2053ರ ವೇಳೆಗೆ 12,90,852 ಜನರಿಗೆ ಕುಡಿಯುವ ನೀರು ಒದಗಿಸಲಿದೆ. ಒಟ್ಟು ಯೋಜನಾ ವೆಚ್ಚ ಅಂದಾಜು ರೂ. 2004 ಕೋಟಿ ರೂ. ಹೊಂದಿದೆ ಎಂದರು.
ಶೇ.60 ಕಾಮಗಾರಿ ಪೂರ್ಣ
ಹುಣಸಗಿ, ಶೋರಾಪುರ, ಶಹಾಪುರ, ವಡಗೇರಾ, ಯಾದಗಿರಿ ಮತ್ತು ಗುರುಮಠಕಲ್​ ತಾಲೂಕುಗಳ ಒಟ್ಟು 696 ವಸತಿಗಳ, 2053ರ ಅಂದಾಜಿನಂತೆ 12,90,852 ಜನಸಂಖ್ಯೆಗೆ ನೀರು ಒದಗಿಸುವ ಈ ಯೋಜನೆಯಡಿ ಈಗಾಗಲೇ ಸುಮಾರು ಶೇ.60 ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯ ನೀರಿನ ಮೂಲ ನಾರಾಯಣಪುರ ಜಲಾಶಯ ಆಗಿದ್ದು, ಸುಮಾರು ವಾರ್ಷಿಕ ಸುಮಾರು 117 ಎಂಎಲ್​ಡಿ ನೀರು ಸರಬರಾಜು ಮಾಡಲಾಗುವುದು. 1.50 ಟಿಎಂಸಿ ನೀರು ಬಳಸಿಕೊಳ್ಳಲಾಗುವುದು ಜ್ಯಾಕ್​ವೆಲ್​ ಮತ್ತು ಇಂಟೇಕ್​ವೆಲ್​ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಕೊಡೇಕಲ್​ ಸಮೀಪ ನೀರು ಶುದ್ದೀಕರಣ ಟಕ ಸ್ಥಾಪನೆಯಾಗುತ್ತಿದ್ದು ಶೇ. 85 ಕಾಮಗಾರಿ ಪೂರ್ಣಗೊಂಡಿದೆ. ಜ್ಯಾಕ್​ವೆಲ್​ನಿಂದ ಶುದ್ಧ ನೀರಿನ ಟಕದವರೆಗೆ 23.00 ಕಿಮೀ ಉದ್ದದ ಎಂಎಸ್​ ಪೈಪ್​ ರೈಸಿಂರ್​ ಮೇನ್​ ಅಳವಡಿಸಬೇಕಿದ್ದು, ಈಗಾಗಲೇ 11.00 ಕಿಮೀ ಅಳವಡಿಸಲಾಗಿದೆ ಎಂದು ಸಿಇಒ ಲವೀಶ್​ ಹೇಳಿದರು.
12 ಲಕ್ಷಕ್ಕೂ ಜೀವನ ಮಟ್ಟ ಸುಧಾರಣೆ
ಯಾದಗಿರಿ ಜಿಲ್ಲೆ ಪ್ರಮುಖವಾಗಿ ನೀರಾವರಿ ಪ್ರದೇಶವಾಗಿದ್ದು, ರೈತರು ಬೆಳೆಗಳಿಗೆ ವ್ಯಾಪಕವಾಗಿ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರ ಬಳಸುತ್ತಿರುವ ಕಾರಣ ನೀರು ಲಭ್ಯವಿದ್ದರೂ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಅಂತರ್ಜಲ ಮತ್ತು ಮೇಲ್ಲೀರು ಕಲುಷಿತ ಮತ್ತು ಅಸುರತವಾಗಿದೆ. ನೀರಿನಿಂದ ಹರಡುವ ರೋಗಗಳು ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರನ್ನು ಬಾಧಿಸುತ್ತಲಿವೆ. ಜಲಧಾರೆ ಯೋಜನೆ ನಾರಾಯಣಪುರ ಜಲಾಶಯದಿಂದ ವೈಾನಿಕವಾಗಿ ಶುದ್ದೀಕರಿಸಿದ ಶುದ್ಧ ಮತ್ತು ಸುರತ ಕುಡಿಯುವ ನೀರನ್ನು 696 ಹಳ್ಳಿಗಳು ಮತ್ತು 3 ನಗರ ಸ್ಥಳಿಯ ಸಂಸ್ಥೆಗಳ ಪ್ರತಿ ಮನೆಗೂ ತಲುಪಿಸಲಿದೆ. ಯಾದಗಿರಿ ಜಿಲ್ಲೆಯ 12 ಲಕ್ಕೂ ಹೆಚ್ಚು ನಾಗರಿಕರ ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಣೆಗೆ ಐತಿಹಾಸಿಕ ಕ್ರಮ ಇದಾಗಿದೆ ಎಂದು ಸಿಇಒ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net