ವೇದಿಕೆ ಶುಚಿಗೊಳಿಸಿದವರ ವಿರುದ್ಧ ಕ್ರಮಕೈಗೊಳ್ಳಿ

 ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುಚಿಗೊಳಿಸಿದ್ದನ್ನು ಖಂಡಿಸಿ ಶಹಾಬಾದ್​ ತಾಲೂಕಿನ ಭಂಕೂರ ಕ್ರಾಸ್​ನಲ್ಲಿ ಖರ್ಗೆ ಅಭಿಮಾನಿಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಚಂದು ಜಾಧವ್​, ಸುರೇಶ ಮೆಂಗನ್​, ನಾಮದೇವ ರಾಠೋಡ್​ ಇತರರಿದ್ದರು
ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುಚಿಗೊಳಿಸಿದ್ದನ್ನು ಖಂಡಿಸಿ ಶಹಾಬಾದ್​ ತಾಲೂಕಿನ ಭಂಕೂರ ಕ್ರಾಸ್​ನಲ್ಲಿ ಖರ್ಗೆ ಅಭಿಮಾನಿಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಚಂದು ಜಾಧವ್​, ಸುರೇಶ ಮೆಂಗನ್​, ನಾಮದೇವ ರಾಠೋಡ್​ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಭಂಕೂರ ಕ್ರಾಸ್​ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
  • ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಶಹಾಬಾದ್​: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಭಂಕೂರ ಕ್ರಾಸ್​ನಲ್ಲಿ ದಲಿತ ಸಂರ್ಷ ಸಮಿತಿ, ಗ್ರಾಮೀಣ ಬಂಜಾರ ಸಮಾಜ, ಖರ್ಗೆ ಅಭಿಮಾನಿ ಬಳಗ ಸೇರಿ ವಿವಿಧ ಸಂಘಟನೆಗಳಿಂದ ಭಂಕೂರ ಕ್ರಾಸ್​ ಬಳಿ ಸಂಚಾರ ತಡೆದು ಗುರುವಾರ ಬೃಹತ್​ ಪ್ರತಿಭಟನೆ ನಡೆಸಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 8 ದಶಕ ಕಳೆದರೂ ಇನ್ನೂ ಮನುವಾದಿ ಮನಸ್ಥಿತಿಯವರು ತಮ್ಮ ಕೃತ್ಯ ಮುಂದುವರಿಸುತ್ತಿದ್ದಾರೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೂ ಸಂವಿಧಾನದ ಮೂಲ ಆಶಯ ಈಡೇರುವುದಿಲ್ಲ. ಡಾ.ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುಚಿಗೊಳಿಸಿ, ಹೋಮ-ಹವನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್​ ನೀಲಪ್ರಭ ಬಬಲಾದ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ದಸಂಸ (ಪೊ.ಕೃಷ್ಣಪ್ಪ ಬಣ) ರಾಜ್ಯ ಸಂಘಟನಾ ಸಂಚಾಲಕ ಸುರೇಶ ಮೆಂಗನ್​, ಬಂಜಾರ ಸಮಾಜದ ಮುಖಂಡರಾದ ಚಂದು ಜಾಧವ್​, ನಾಮದೇವ ರಾಠೋಡ್​, ಪ್ರಮುಖರಾದ ಜಗದೀಶ ಚವ್ಹಾಣ್​, ಸಿದ್ದಮ್ಮ ದೇವನ, ಶರಣಬಸಪ್ಪ ದನ್ನ, ರಾಜು ಚವ್ಹಾಣ್​,  ಮುಜಾಹೀದ್​ ಹುಸೇನ್​, ರಾಜು ರಾಠೋಡ್​, ಭೀಮಯ್ಯ ಗುತ್ತೇದಾರ್​, ರಾಜೇಶ ಯನಗುಂಟಿ, ಭರತ ಧನ್ನಾ, ಶಂಕರ ಚವ್ಹಾಣ್​, ದೇವರಾಜ ರಾಠೋಡ್​, ಜಾಕೀರ್​ ಹುಸೇನ್​, ಗಂಗಾರಾಮ ರಾಠೋಡ್​, ಮುನ್ನಾ ಪಟೇಲ್​, ಭರತ ಜಾಧವ್​, ರಾಜು ಪವಾರ್​, ರಮೇಶ ಕಂಠಿ, ಸುಭಾಷ ಜಾಧವ್​, ಭೀಮು ವಾಲಿಕಾರ, ಅಶೋಕ ಕಾಂಬಳೆ, ರಾಜು ಸಾಗರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net