ಮಹಿಳೆಯರಿಗೆ ಹೊಲಿಗೆ ತರಬೇತಿ ಅಗತ್ಯ

ಔರಾದ್​ ತಾಲೂಕಿನ ಸಂತಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ  ಪ್ರಮಾಣ ಪತ್ರ ವಿತರಿಸಲಾಯಿತು.  ಶ್ರೀದೇವಿ ಹೂಗಾರ, ಸಿಸ್ಟರ್​ ಲಿನೆಟ್​, ಕಲ್ಪಿನಾ, ಸಿಸ್ಟರ್​ ರೇಷ್ಮ, ಸಿಸ್ಟರ್​ ಇಗ್ನೇಷಿಯ ಇತರರಿದ್ದರು.
ಔರಾದ್​ ತಾಲೂಕಿನ ಸಂತಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶ್ರೀದೇವಿ ಹೂಗಾರ, ಸಿಸ್ಟರ್​ ಲಿನೆಟ್​, ಕಲ್ಪಿನಾ, ಸಿಸ್ಟರ್​ ರೇಷ್ಮ, ಸಿಸ್ಟರ್​ ಇಗ್ನೇಷಿಯ ಇತರರಿದ್ದರು.
Published on
ಔರಾದ್​: ಮಹಿಳೆಯರ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕ ಸ್ಥಿತಿ ದೂರ ಮಾಡಲು ಹೊಲಿಗೆ ತರಬೇತಿ ಅಗತ್ಯವಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಉತ್ತಮ ಕೌಶಲಗಳನ್ನು ಕಲಿತುಕೊಂಡು ಉತ್ತಮ ಬದುಕು ಸಾಗಿಸಬೇಕು ಎಂದು ರಾಜ್ಯ ಮಟ್ಟದ ಮಾಸ್ಟರ್​ ಟ್ರೈನರ್​ ಶ್ರೀದೇವಿ ಹೂಗಾರ ಹೇಳಿದರು. ಸಂತಪುರದಲ್ಲಿ ದೀಪಾಲಯ ಸಮಾಜ ಸೇವಾ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಅನೇಕ ಸಮಾಜ ಸೇವಾ ಸಂಸ್ಥೆಗಳು ಮಹಿಳೆಯರ ಸಬಲೀಕರಣ, ಅವರ ಸ್ವಾವಲಂಭಿ ಜೀವನದ ಏಳಿಗೆಗೆ ಶ್ರಮಿಸುತ್ತಿವೆ. ಅದೇ ರೀತಿ ಸಂತಪುರದಲ್ಲಿ ದೀಪಾಲಯ ಸಮಾಜ ಸೇವಾ ಸಂಸ್ಥೆ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ಸಂತಸ ತಂದಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದರು. ದೀಪಾಲಯ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಸಿಸ್ಟರ್​ ಲಿನೆಟ್​ ಮಾತನಾಡಿ, ಮಹಿಳೆಯರಿಗೆ ವಿವಿಧ ತರಬೇತಿ ನೀಡಿ ಸ್ವ ಉದ್ಯೋಗದ ಬದುಕು ರೂಪಿಸಿ ಕೊಡುತ್ತಿರುವುದು ನಮ್ಮ ಸಂಸ್ಥೆ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಸುಂದರ, ಸರೋಜಿನಿ, ನಿಕಿತಾ, ಕಲ್ಪನಾ, ಪೂಜಾ, ಚಂದ್ರಕಲಾ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net