ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

swabhimani karnataka vedike
swabhimani karnataka vedike
Published on

ಪ್ರಮುಖ ಮುಖ್ಯಾಂಶಗಳು

  • * 13ರಂದು ಪ್ರಶಸ್ತಿ ಪ್ರದಾನ
ಬೆಂಗಳೂರು: ಸ್ವಾಭಿಮಾನಿ ಕರ್ನಾಟಕ ವೇದಿಕೆ ವತಿಯಿಂದ ನೀಡುವ 2025ನೇ ಸಾಲಿನ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ 7 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿ.ಎಸ್. ಚೌಗಲೆ ರಚನೆಯ ‘ಥರ್ಡ್ ಬೆಲ್’ ರಂಗಭೂಮಿ ಲೇಖನ, ಡಾ. ಸುಕನ್ಯಾ ಸೊನಗಹಳ್ಳಿ ರಚನೆಯ ಕೃತಿ ‘ಕಬ್ಬಿನ ಸಿಹಿ ವರ್ಧಿಸುವ ಅಮ್ಮ ಡಾ. ಜಾನಕಿ ಅಮ್ಮಾಳ್’, ಓರ‌್ಗಲ್ಲಯ್ಯ ದ್ವಾರನಕುಂಟೆ (ವಿಶ್ವ ವಿಸ್ಮಯ), ಗುರುನಾಥ ಅಕ್ಕಣ್ಣ (ಕೊಂಡವರುಳಿದರೇ), ವಿನಯ ಗುಂಟೆ (ಬನದ ಕರಡಿ), ಡಾ. ಶೋಭಾ ನಾಯಕ (ಅರ್ಧ ಮುಖಗಳ ಶಹರು) ಕೃತಿಗಳು ಪ್ರಶಸ್ತಿಗೆ ಭಾಜನವಾಗಿದ್ದು, 2,500 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿವೆ. ಇದಲ್ಲದೆ ಡಾ. ಸಿ. ಸೋಮಶೇಖರ್ ಶ್ರೀಮತಿ ಸರ್ವಮಂಗಳ ದತ್ತಿ ಪ್ರಶಸ್ತಿಗೆ ಡಾ. ಸುಜಾತಾ ಚಲವಾದಿ ರಚನೆಯ ‘ಮನುಷ್ಯ ಮತ್ತು ಪ್ರೀತಿ’ ಪ್ರಬಂಧ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ. ಶೇಷಾದ್ರಿಪುರಂ ಕಾಲೇಜಿನಲ್ಲಿ 13ರಂದು ಸಂಜೆ 5 ಗಂಟೆಗೆ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ವೂಡೇ ಪಿ. ಕೃಷ್ಣ, ಎಂ. ತಿಮ್ಮಯ್ಯ ಇತರರು ಭಾಗವಹಿಸಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net