ಸುರಪುರ : ಬಸವ ಜಯಂತಿ ಭವ್ಯ ಮೆರವಣಿಗೆ

ನಗರದ ಪಂಚಾಂಗ ಮಠದಲ್ಲಿ ಭಾನುವಾರ ಬಸವ ಜಯಂತಿಯ ಮೆರವಣಿಗೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು. ನಿಷ್ಠಿ ಕಡ್ಲಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ, ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್​ ಸೇರಿದಂತೆ ಇತರರಿದ್ದರು.
ನಗರದ ಪಂಚಾಂಗ ಮಠದಲ್ಲಿ ಭಾನುವಾರ ಬಸವ ಜಯಂತಿಯ ಮೆರವಣಿಗೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿದರು. ನಿಷ್ಠಿ ಕಡ್ಲಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ, ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್​ ಸೇರಿದಂತೆ ಇತರರಿದ್ದರು.
Published on
ಸುರಪುರ : ಇಲ್ಲಿಯ ಸುಪ್ರಸಿದ್ಧ ಪಂಚಾಂಗ ಮಠದಲ್ಲಿ ಹಮ್ಮಿಕೊಂಡಿದ್ದ 103ನೇ ಬಸವ ಜಯಂತ್ಯುತ್ಸವದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಸಂಜೆ ಶ್ರದ್ಧಾ&ಭಕ್ತಿಯೊಂದಿಗೆ ಅದ್ಧೂರಿಯಾಗಿ ಜರುಗಿತು.
ನಗರದ ಪಂಚಾಂಗ ಮಠದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಬಸವ ಜಯಂತಿಯ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕಳೆದ 103 ವರ್ಷಗಳಿಂದ ಸತತವಾಗಿ ಈ ಮಠದಲ್ಲಿ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ಸಂಗತಿ ಎಂದು ಹೇಳಿದರು.
ನಂತರ ಬಸವಣ್ಣನವರ ಭಾವಚಿತ್ರವನ್ನು ಅಲಂಕರಿಸಿದ ಟ್ರಾ$್ಯಕ್ಟರ್​ ವಾಹನದಲ್ಲಿ ಪ್ರತಿಷ್ಠಾಪಿಸಲಾಯಿತು. ಶಾಸಕ ಆರ್​ವಿಎನ್​ ಅವರು ಟ್ರಾ$್ಯಕ್ಟರ್​ ವಾಹನ ನಡೆಸುವುದರ ಮೂಲಕ ಬಸವ ಜಯಂತಿಯ ಮೆರವಣಿಗೆಗೆ ಚಾಲನೆ ನೀಡಿದರು. ಭವ್ಯ ಮೆರವಣಿಗೆಯಲ್ಲಿ ಭಕ್ತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯೂಷ ಮೊಳಗಿಸಿದರು. ಮಂಗಳ ವಾದ್ಯಗಳು ಮೆರವಣಿಗೆಗೆ ವಿಶೇಷ ಕಳೆ ನೀಡಿದವು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಈ ಮೆರವಣಿಗೆ ಭಕ್ತರ ಮನದಲ್ಲಿ ಉತ್ಸಾಹ, ಸಡಗರ ತುಂಬಿತು. ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಸಾರುವ ೂಷಣೆಗಳು ಎಲ್ಲರ ಗಮನ ಸೆಳೆದವು. ನಿಷ್ಠಿ ಕಡ್ಲಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ, ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್​, ಪ್ರಮುಖರಾದ ಸುನೀಲ್​ ಸರಪಟ್ಟಣ ಶಟ್ಟರು, ಚಂದ್ರಕಾಂತ ಕಳ್ಳಿಮನಿ, ವಿರೇಶ ಪಂಚಾಂಗ ಮಠ, ಬಸವರಾಜ ಜಮದ್ರಖಾನಿ, ಮಹೇಶ ಯಾದವ, ಬಸವರಾಜ ಜಾಲಹಳ್ಳಿ, ವಿರೇಶ ನಿಷ್ಠಿ ದೇಶಮುಖ, ಸುಗೂರೇಶ ವಾರದ, ಶರಣಪ್ಪ ಕಲಕೇರಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪ ಮಠ, ಶರಣಬಸವ ಮುಧೋಳ, ಪ್ರಕಾಶ ಅಂಗಡಿ ಕನ್ನೆಳ್ಳಿ, ಮಲ್ಲಿಕಾರ್ಜುನರೆಡ್ಡಿ ಅಮ್ಮಾಪೂರ, ರಮೇಶ ದೊರೆ ಆಲ್ದಾಳ, ಸಜ್ಜನಕುಮಾರ ಕಲ್ಯಾಣಶೆಟ್ಟಿ, ಪ್ರಕಾಶ ಬಣಗಾರ ಸೇರಿ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net