ಸುರಪುರ: ಇಲ್ಲಿಯ ವಕೀಲರ ಸಂಘ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವರ್ಗಾವಣೆಗೊಂಡ ಜೆಎಂಎಫ್ಸಿ ನ್ಯಾಯಾಲಯದ ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶ ಬಸವರಾಜ ಹೇಳಿದರು.
ನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ತಾಲೂಕು ವಕೀಲರ ಸಂ ಬುಧವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿರಿಯ ವಕೀಲರು ಹಾಗೂ ಇಲ್ಲಿಯ ಸೇವೆಯಿಂದ ನಾನು ಸಹ ಸಾಕಷ್ಟು ಕಲಿತುಕೊಂಡಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ವಕೀಲರ ವೃತ್ತಿ ನತೆ, ಗೌರವ ಕಾಪಾಡಿಕೊಂಡು ಹೋಗುವಲ್ಲಿ ಎತ್ತಿದ ಕೈ. ಪ್ರಕರಣಗಳ ವಿಚಾರಣೆ ವೇಳೆ ವಕೀಲರು ಮಂಡಿಸುವ ವಾದ, ದಾಖಲೆಗಳ ಸಲ್ಲಿಕೆ ಸಹ ಉತ್ತಮವಾಗಿದೆ ಎಂದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಮನಪ್ಪ ಬೊಮ್ಮಣಗಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ನ್ಯಾಯಾಧೀಶ ಬಸವರಾಜ ಅವರು ಇಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮುಂದಿನ ಜೀವನ ಸಂತೋಷದಾಯಕವಾಗಿರಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂದ ಅಧ್ಯಕ್ಷ ಬಸವರಾಜ ಅನ್ಸೂರ ಮಾತನಾಡಿ, ನ್ಯಾಯಾಧೀಶರಾದ ಬಸವರಾಜ ಅವರು ಮಿತ ಭಾಷಿಕರು, ಸರಳ ಜೀವನ. ವಾದ, ವಿವಾದ ಆಲಿಕೆಯಲ್ಲಿ ಅವರು ತೋರಿದ ತಾಳ್ಮೆ, ತೀರ್ಪು, ಅವರ ನಡೆ, ನುಡಿ, ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.
ಹಿರಿಯ ವಕೀಲ ಯಂಕಾರೆಡ್ಡಿ ಬೋನ್ಹಾಳ, ಚನ್ನಪ್ಪ ಹೂಗಾರ, ಸಂಗಣ್ಣ ಬಾಕ್ಲಿ ಮಾತನಾಡಿದರು. ಹಿರಿಯ ಮತ್ತು ಕಿರಿಯ ವಕೀಲರು ವರ್ಗಾವಣೆಗೊಂಡ ನ್ಯಾಯಾಧೀಶರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಿದರು. ವಕೀಲ ಮಲ್ಲಿಕಾರ್ಜುನಯ್ಯ ಹಿರೇಮಠ ಸ್ವಾಗತಿಸಿದರು. ಬಲಭೀಮ ನಾಯಕ ನಿರೂಪಿಸಿದರು. ಮಲ್ಲಣ್ಣ ಭೋಯಿ ವಂದಿಸಿದರು.
"
ಸುರಪುರದಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾಗಿ ನಿಮ್ಮೆಲ್ಲರೊಂದಿಗೆ ಸೇವೆ ಮಾಡುವ ಅವಕಾಶ ಸಿಕ್ಕದ್ದು ನನ್ನ ಸೌಭಾಗ್ಯ. ಇಲ್ಲಿನ ಸೇವೆಯಿಂದ ಸಾಕಷ್ಟು ಕಲಿತ್ತಿದ್ದೇನೆ. ರಾಜ್ಯದ ಯಾವುದೇ ಭಾಗದಲ್ಲಾದರು ಕೆಲಸ ಮಾಡುವ ಧೈರ್ಯ ಬಂದಿದೆ. ನಾನೂ ಎಲ್ಲಿಯೇ ಇರಲಿ ಇಲ್ಲಿಯ ವಕೀಲರ ಸಂಘ, ವಕೀಲರನ್ನು ಸದಾ ನೆನಪಿಸುತ್ತೇನೆ.