ಗುಣಮಟ್ಟದ ದಿನಸಿ ಸರಬರಾಜು ಮಾಡಿ

ಭೀಮಶೆಟ್ಟಿ ಯಂಪಳ್ಳಿ
ಭೀಮಶೆಟ್ಟಿ ಯಂಪಳ್ಳಿ
Published on
ಸೇಡಂ: ತಿಂಗಳಲ್ಲಿಯೇ ಜಿಲ್ಲೆಯ ಮೂರು ವಸತಿಯುಕ್ತ ಶಾಲೆಗಳಲ್ಲಿ ಆಹಾರದ ಸಮಸ್ಯೆ ಕಂಡು ಬಂದಿದ್ದು, ಇದಕ್ಕೆ ಗುಣಮಟ್ಟದ ದಿನಸಿ ಒದಗಿಸದಿರುವುದು ಮೂಲ ಕಾರಣ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್​ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ದೂರಿದರು.
ಮುಧೋಳದ ಶ್ರೀಮತಿ ಇಂದಿರಾಗಾಂಧಿ ವಸತಿಯುಕ್ತ ಶಾಲೆಗೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಆದಿಯಾಗಿ ಶಾಲೆಗಳ ಪ್ರಾಚಾರ್ಯ, ನಿಲಯ ಮೇಲ್ವಿಚಾರಕರವರೆಗೆ ಎಲ್ಲರೂ ದಿನಸಿ ಸರಬರಾಜು ಮಾಡುವ ಗುತ್ತಿಗೆದಾರರ ಜತೆ ಕೈಜೋಡಿಸಿದ್ದಾರೆ. ಇದರಿಂದಾಗಿ ಕಳಪೆ ದಿನಸಿ ಬಂದು ಹಾಸ್ಟೆಲ್​ ಸೇರುತ್ತಿದೆ. ಗುಣಮಟ್ಟದ ದಿನಸಿ ನೀಡಿದರೆ ಉತ್ತಮ ಅಡುಗೆ ಮಾಡಿಕೊಡಲು ಹೊರಗುತ್ತಿಗೆ ನೌಕರರಿಗೆ ಏನು ಕಷ್ಟವಾಗುತ್ತದೆ ? ಗಂಟು ಕಟ್ಟಿದ ಶೇಂಗಾ, ಅಕ್ಕಿ, ಕೊಳೆತ ಬೆಲ್ಲ, ನೀರಿನಿಂದ ಹಾಳಾದ ತೊಗರಿ ಬೇಳೆ ನೀಡಿದರೆ ಹೇಗೆ ಅಡುಗೆ ಮಾಡಲು ಸಾಧ್ಯ? ಇದು ಸಾಲದೆಂಬತೆ ವಸತಿಯುಕ್ತ ಶಾಲೆಗಳಿಗೆ ಅಗತ್ಯ ಸಿಬ್ಬಂದಿ ಒದಗಿಸುತ್ತಿಲ್ಲ ಎಂದು ಕಿಡಿಕಾರಿದರು.
2017ಕ್ಕಿಂತಲೂ ಮೊದಲು ಹಾಸ್ಟೆಲ್​ಗಳಿಗೆ 11ಜನ ಅಡುಗೆ, ಸ್ವಚ್ಛತೆ ಸಿಬ್ಬಂದಿ ಒದಗಿಸಲಾಗುತಿತ್ತು. ಆದರೆ ಇದೀಗ ಅದನ್ನು 7ಜನಕ್ಕೆ ಸಿಮೀತಗೊಳಿಸಿದ್ದಾರೆ. ಎಲ್ಲ ಕೆಲಸ ಇಷ್ಟೆ ಜನರಿಂದ ಸಾಧ್ಯವಾಗುತ್ತದೆಯೇ? ಕೂಡಲೇ ಸರ್ಕಾರ ವಸತಿನಿಲಯ ಮತ್ತು ಶಾಲೆಗಳಿಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು. ಜತೆಗೆ ಗುಣಮಟ್ಟದ ದಿನಸಿ ಒದಗಿಸುವಲ್ಲಿ ಕಾಳಜಿವಹಿಸಬೇಕು ಎಂದು ಒತ್ತಾಯಿಸಿದರು.
ರಾಮಚಂದ್ರ ಪವಾರ್​, ನರಸಮ್ಮ ಕೊಂಡಂಪಳ್ಳಿ, ಶಿವಕುಮಾರ ತೊಟ್ನಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net