ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ

ಯಾದಗಿರಿ ಜಿಲ್ಲಾ ಪೊಲೀಸ್​ ಭವನದಲ್ಲಿ ಸೋಮವಾರ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿ ಮಕ್ಕಳಿಗಾಗಿ ಆಯೋಸಲಾಗಿದ್ದ ಬೇಸಿಗೆ ಶಿಬಿರವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಉದ್ಘಾಟಿಸಿದರು. ಡಿವೈಎಸ್​ಪಿ ಭರತಕುಮಾರ ತಳವಾರ, ಶ್ರೀದೇವಿ ಬಿರಾದಾರ, ಭೀಮಾಶಂಕರ, ರಮೇಶ ಕಾಂಬಳೆ ಇತರರಿದ್ದರು.
ಯಾದಗಿರಿ ಜಿಲ್ಲಾ ಪೊಲೀಸ್​ ಭವನದಲ್ಲಿ ಸೋಮವಾರ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿ ಮಕ್ಕಳಿಗಾಗಿ ಆಯೋಸಲಾಗಿದ್ದ ಬೇಸಿಗೆ ಶಿಬಿರವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಉದ್ಘಾಟಿಸಿದರು. ಡಿವೈಎಸ್​ಪಿ ಭರತಕುಮಾರ ತಳವಾರ, ಶ್ರೀದೇವಿ ಬಿರಾದಾರ, ಭೀಮಾಶಂಕರ, ರಮೇಶ ಕಾಂಬಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಪಿ ಪೃಥ್ವಿಕ್​ ಶಂಕರ್​ ಹೇಳಿಕೆ
  • ಜಿಲ್ಲಾ ಪೊಲೀಸ್​ ಇಲಾಖೆಯಿಂದ ವಿನೂತನ ಕಾರ್ಯಕ್ರಮ
ಯಾದಗಿರಿ: ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಈ ಬೇಸಿಗೆ ಶಿಬಿರ ಪೂರಕವಾಗಲಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್​ ಭವನದಲ್ಲಿ ಸೋಮವಾರ ಬೆಳಗ್ಗೆ ಹಮ್ಮಿಕೊಂಡ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳ ಬೇಸಿಗೆ ರಜೆ ವಿನಾ@ಕಾರಣ ಹಾಳಾಗಬಾರದೆಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್​ ಇಲಾಖೆಯಿಂದ ಒಂದು ತಿಂಗಳ ಬೇಸಿಗೆ ಶಿಬಿರ ಆಯೋಜಿಸಿದ್ದು, ಇದರಿಂದ ಶಾಲಾ ಮಕ್ಕಳಿಗೆ ಹತ್ತು&ಹಲವು ವೈವಿದ್ಯಮಯವಾದ ಜ್ಞಾನದ ಬುತ್ತಿ ಉಣಬಡಿಸಿದಂತಾಗುತ್ತದೆ ಎಂದರು.
ಹತ್ತು ತಿಂಗಳು ನಿರಂತರವಾಗಿ ಶಾಲೆಗೆ ಹೋಗಿ ಅಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠ ಕಲಿತು ಪರೀಕ್ಷೆ ಬರೆಯುವ ಮೂಲಕ ತಮ್ಮ ಪ್ರತಿಭೆ ಹೊರಹಾಕುವ ಮಕ್ಕಳಲ್ಲಿ ಇನ್ನೂ ಅನೇಕ ತರಹದ ಸೂಪ್ತ ಪ್ರತಿಭೆಗಳಿರುತ್ತದೆ. ಅದನ್ನು ನಾವು ಈ ಶಿಬಿರದ ಮೂಲಕ ಅನಾವರಣಗೊಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಮಕ್ಕಳ ಮೆದಳು ಬಹಳ ಸೂಕ್ಷ$್ಮ ಮತ್ತು ಅತಿಹೆಚ್ಚು ಗ್ರಹಿಕೆಯುಳ್ಳದಾಗಿರುತ್ತದೆ. ಕಾರಣ ಅವರಿಗೆ ಈ ವಯಸ್ಸಿನಲ್ಲಿ ನಾವು ಏನು ಹೇಳಿಕೊಡುತ್ತೆವೇಯೋ ಮತ್ತು ಕಲಿಸುತ್ತೆವೆಯೋ ಅದನ್ನು ಬೇಗನೆ ಗ್ರಹಿಸಿಕೊಂಡು ಪ್ರತಿಭಾವಂತರಾಗುತ್ತಾರೆ. ಈ ನಿಟ್ಟಿನಲ್ಲಿ ಬೇಸಿಗೆ ಶಾಲಾ ರಜೆಗಳಲ್ಲಿ ಕೂಡ ಮಕ್ಕಳು ಸಾಮಾನ್ಯ ಜ್ಞಾನದ ಜತೆಗೆ ಕಲೆ, ಸಂಗೀತ, ಜಾನಪದ, ನೃತ್ಯ, ಪೇಟಿಂಗ್​, ನಾಟಕ, ಹಾವು ಹಿಡಿಯುವುದು, ಪರಿಸರ ರಕ್ಷಣೆ, ಈಜು, ಭಾಷಣ ಮತ್ತು ಐತಿಹಾಸಿಕ ಪ್ರೇಕ್ಷಣೆ ಸ್ಥಳಗಳ ವೀಕ್ಷಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿವೈಎಸ್​ಪಿ ಭರತಕುಮಾರ ತಳವಾರ, ಬೇಸಿಗೆ ರಜಾ ದಿನಗಳು ಹಾಳಾಗಬಾರದೆಂಬ ಉದ್ದೇಶದಿಂದ ಎಸ್​ಪಿ ಸಾಹೇಬರು ವಿನೂತನವಾದ ಶಿಬಿರ ಇಲಾಖೆ ಸಿಬ್ಬಂದಿ ಮಕ್ಕಳಿಗೆ ಏರ್ಪಡಿಸಿದ್ದು, ಇದರಿಂದ ಮಕ್ಕಳಲ್ಲಿ ಜ್ಞಾನವೃದ್ಧಿಯಾಗಿ ಮುಂದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಲಿದೆ ಎಂದರು.
ಏ.6ರಿಂದ ಆರಂಭವಾದ ಈ ಶಿಬಿರ ಮೇ 2ರವರೆಗೆ ನಡೆಯಲಿದೆ. ಮೇ 3 ಮತ್ತು 4ರಂದು ವಿವಿಧ ಸ್ಪರ್ಧೆಗಳು, ಮೇ 5ರಂದು ಶಿಬಿರದ ಸಮಾರೋಪ ನಡೆಯಲಿದೆ. ಪೊಲೀಸ್​ ಅಧಿಕಾರಿಗಳಾದ ಭೀಮಾಶಂಕರ, ರಮೇಶ ಕಾಂಬಳೆ, ಶ್ರೀದೇವಿ ಬಿರಾದಾರ, ಲಕ್ಷ$್ಮಪ್ಪ ಚವ್ಹಾಣ್​ ಇತರರಿದ್ದರು.
ಈ ಶಿಬಿರದಲ್ಲಿ ಜಾನಪದ ಹಾಡುಗಳ ಪರಿಚಯ, ಆಹಾರ, ಮಕ್ಕಳ ಆಹಾರ ದಿನಚರಿ, ಪೇಟಿಂಗ್​, ವೇದಿಕೆಯಲ್ಲಿ ಮಾತನಾಡುವುದು, ಹತ್ತಿಕುಣಿ ಜಲಾಶಯಕ್ಕೆ ಭೇಟಿ, ದೈಹಿಕ, ಮಾನಸಿಕ ಆರೋಗ್ಯ, ಕಲಿಕೆ, ಆಸಕ್ತಿ, ಏಕಾಗ್ರತೆ, ಟಿವಿ ಮೊಬೈಲ್​ನಿಂದ ಅನುಕೂಲ ಮತ್ತು ಅನಾನುಕೂಲ, ನೃತ್ಯ, ಸಂಗೀತ, ಸಮಯ ನಿರ್ವಹಣೆ, ಎಡಿಪಿ ಸಂಸ್ಥೆಯಿಂದ ಆರೋಗ್ಯ ಚಟುವಟಿಕೆ ಆಧಾರಿತ ಕಾರ್ಯಕ್ರಮ ಸೇರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಕ್ಕಳು ಹೆಚ್ಚಿನ ಜ್ಞಾನ ಹೊಂದಲು ತಮ್ಮ ಬಳಿ ಸಾಧಕರ, ಆದರ್ಶ ಮತ್ತು ಮಹಾತ್ಮರ ಪುಸ್ತಕ ಇಟ್ಟುಕೊಂಡು ಓದಬೇಕು. ಪದಗಳ ಅರ್ಥ ಅರಿಯಲು ಕಡ್ಡಾಯವಾಗಿ ಡಿಕ್ಸನೇರಿ ಮತ್ತು ರಾಜ್ಯ, ದೇಶಗಳ ನಕಾಶೆ ಹೊಂದಿರಬೇಕು. ತಮ್ಮ ಸುತ್ತಲಿನ ಪರಿಸರ, ನೀರಾವರಿ, ಅರಣ್ಯ, ಕೃಷಿ ಹೀಗೆ ಎಲ್ಲದರ ಬಗ್ಗೆ ಅರಿವು ಇರಬೇಕು.

> ಪೃಥ್ವಿಕ್​ ಶಂಕರ್​

ಎಸ್​ಪಿ ಯಾದಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net