ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ವೇದಿಕೆ

ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಶಾಲಾ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಹಾಸ್ಯ ಕಲಾವಿದ ಬಸವರಾಜ ಮಹಾಮನಿ,ಅಧಿಕಾರಿಗಳಾದ ತಿಪ್ಪಣ್ಣ ಸಿರಸಗಿ, ದಿನೇಶಕುಮಾರ, ದೀಪಿಕಾ, ಮಹೇಶ್ವರಿ ಇತರರಿದ್ದರು
ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಶಾಲಾ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಹಾಸ್ಯ ಕಲಾವಿದ ಬಸವರಾಜ ಮಹಾಮನಿ,ಅಧಿಕಾರಿಗಳಾದ ತಿಪ್ಪಣ್ಣ ಸಿರಸಗಿ, ದಿನೇಶಕುಮಾರ, ದೀಪಿಕಾ, ಮಹೇಶ್ವರಿ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಹಾಸ್ಯ ಕಲಾವಿದ ಮಹಾಮನಿ ಅಭಿಮತ
  • ಅಭಿನಂದನಾ ಪತ್ರದೊಂದಿಗೆ ಮಕ್ಕಳಿಗೆ ಗೌರವ
ಯಾದಗಿರಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಇಂತಹ ಬೇಸಿಗೆ ಶಿಬಿರಗಳು ಸೂಕ್ತ ವೇದಿಕೆಯಾಗಿವೆ ಎಂದು ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಹೇಳಿದರು.
ರಾಜ್ಯ ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನದಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡ 15 ದಿನಗಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಒಂಬತ್ತು ತಿಂಗಳು ಮಕ್ಕಳು ಕೇವಲ ಓದಿಗಾಗಿ ಸಮಯ ಮೀಸಲಿಟ್ಟಿರುತ್ತಾರೆ. ಇಂತಹ ಮಕ್ಕಳಿಗೆ ಬೇಸಿಗೆಯಲ್ಲಿ ಬಾಲ ಭವನವು ಏರ್ಪಡಿಸುತ್ತಿರುವ ಉಚಿತ ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದರು.
ನನ್ನ ಮಗನು ಕೂಡ ಈ ಒಂದು 15 ದಿನದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ, "ಮಲ್ಲಕಂಭ' ಸಾಹಸದ ಕಲೆ ತುಂಬಾ ಆಸಕ್ತಿಯಿಂದ ಕಲಿತಿದ್ದಾನೆ. ಹಾಗೆ ಪ್ರತಿಯೊಂದು ಮಗುವಿನಲ್ಲಿ ಕೂಡ ತಮ್ಮದೆ ಆದ ಕಲೆ ಇರುತ್ತದೆ. ಇಂತಹ ವೇದಿಕೆ ಮೂಲಕ ಅವರ ಪ್ರತಿಭೆ ಹೊರಹಾಕಬೇಕು. ಎಳೆಯ ಮಕ್ಕಳಲ್ಲಿ ಗ್ರಹಿಕೆ ಅಗಾಧವಾಗಿರುತ್ತದೆ. ಈ ವಯಸ್ಸಿನಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ, ತರಬೇತಿ ನೀಡಿದರೆ ವಿವಿಧ ೇತ್ರಗಳಲ್ಲಿ ಸಾಧನೆ ಮಾಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ಸಮಾಜದಲ್ಲಿ ಉನ್ನತ ಶ್ರೇಣಿಗೆ ತಲುಪಬೇಕಾದರೆ ವಿದ್ಯಾಭ್ಯಾಸದ ಜತೆಗೆ ಸಣ್ಣ, ಪುಟ್ಟ ಕಲೆಗಳನ್ನು ಬೆಳಸಿಕೊಳ್ಳಬೇಕು. 15 ದಿನದ ಬೇಸಿಗೆ ಶಿಬಿರದಲ್ಲಿ ತಾವು ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳಾದ ಕರಕುಶಲ, ಚಿತ್ರಕಲೆ, ಜೇಡಿಮಣ್ಣಿನ ಕಲೆ, ಇತರೆ ಚಟುವಟಿಕೆಗಳಲ್ಲಿ ತುಂಬಾ ಅದ್ಭುತವಾಗಿ ಪ್ರದರ್ಶನ ಮಾಡಿದ್ದಾರೆ. ಕ್ರೀಯಾಶೀಲ ಚಟುವಟಿಕೆ ಮೂಲಕ ಕ್ರೀಡೆ ಮತ್ತು ಕಲೆಗಳಲ್ಲಿ ಹೆಚ್ಚಿನ ಅಭ್ಯಾಸ ಬೆಳೆಸಿಕೊಂಡು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ಸ್ವರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ಅಗ್ನಿ ಶಾಮಕದಳ ಇಲಾಖೆ ಸ್ಟೇಷನ್​ ಪೈಯರ್​ ಅಧಿಕಾರಿ ವಿರೇಶ್​ ಮಾತನಾಡಿ, ಅಗ್ನಿ ಶಾಮಕದಳ ಇಲಾಖೆ ಕುರಿತು ಮಕ್ಕಳಿಗೆ ಅಗ್ನಿ ಅವಗಡದ ವೇಳೆ ನಾವು ಜಾಗೃತಿಯಿಂದ ಮತ್ತು ರಣೆಯನ್ನು ಮಾಡಿಕೊಳ್ಳಬೇಕುಂಬುದರ ಬಗ್ಗೆ ಅರಿವು ಮೂಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಭೀಮರಾಯ ಮಾತನಾಡಿ, ಜಿಲ್ಲೆಯಲ್ಲಿ ಬಾಲಭವನದಿಂದ ಪ್ರತಿ ಗ್ರಾಮಗಳಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಮಕ್ಕಳ ಕಲೆಗಳನ್ನು ಪ್ರದರ್ಶಿಸಲು ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಾಲಾ ರಜಾ ದಿನಗಳಲ್ಲಿ 15 ದಿನದ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಅವರಿಗೆಲ್ಲ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಗಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯ ದಿನೇಶ್​ಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಿಕಾ ಬಿ.ವಿ., ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ರುದ್ರಸ್ಡಾಮಿ ಚಿಕ್ಕಮಠ, ಚಂದಪ್ಪ, ಸರ್ಕಾರಿ ಬಾಲಕಿಯರ ಬಾಲ ಮಂದಿರದ ಅಧೀಕಿ ಮಹೇಶ್ವರಿ, ಜಿಲ್ಲಾ ಬಾಲ ಭವನ ಸಂಯೋಜಕ ಅನಿಲಕುಮಾರ ಮತ್ತು ದೇವಿಂದ್ರಪ್ಪ, ಅಶ್ವೀನಿ, ಆಕಾಶ, ರವಿಕುಮಾರ, ಪ್ರಶಾಂತಕುಮಾರ ಇತರರಿದ್ದರು.
ಕ್ರಿಯಾತ್ಮಕ ಚಟುವಟಿಕೆಗಳು
ಜಿಲ್ಲಾಡಳಿತದಿಂದ 5&16 ವರ್ಷದ ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ, ನಾಟಕ, ನೃತ್ಯ, ಯೋಗ, ಕರಾಟೆ, ಮಲ್ಲಕಂಭ, ಪ್ರಕೃತಿ ಪರಿಸರ, ಓದುವ ಕೌಶಲ್ಯ ಕುರಿತು 15ದಿನದ ಶಿಬಿರದ ಹಮ್ಮಿಕೊಳ್ಳಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net