ಮಕ್ಕಳಿಗೆ ಬೇಸಿಗೆ ಶಿಬಿರ ಅತ್ಯವಶ್ಯಕ

ಕಲಬುರಗಿ ವಿದ್ಯಾನಿಧಿ ಸಂಸ್ಥೆ ಗೋದುತಾಯಿ ಕಾಲನಿಯ ಮಹೇಶ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಮದ್ದು ಮಕ್ಕಳು ಹರಿದ ಹಾಸಿಗೆ ಹಂಬಲ ನಾಟಕ ಪ್ರದರ್ಶಿಸಿದರು.
ಕಲಬುರಗಿ ವಿದ್ಯಾನಿಧಿ ಸಂಸ್ಥೆ ಗೋದುತಾಯಿ ಕಾಲನಿಯ ಮಹೇಶ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಮದ್ದು ಮಕ್ಕಳು ಹರಿದ ಹಾಸಿಗೆ ಹಂಬಲ ನಾಟಕ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾನಿಧಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಡಾ.ಕುಲಕರ್ಣಿ ಹೇಳಿಕೆ
ಕಲಬುರಗಿ: ಬೇಸಿಗೆ ಶಿಬಿರ ಮಕ್ಕಳ ಅತ್ಯವಶ್ಯಕ. ಈ ಮೂಲಕ ಮಕ್ಕಳು ಉತ್ಸಾಹದ ಚಿಲುಮೆಗಳಾಗುತ್ತಾರೆ ಎಂದು ನಿವೃತ್ತ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ.ಸ್ವಾಮಿರಾವ್​ ಕುಲಕರ್ಣಿ ಹೇಳಿದರು.
ಕಲಬುರಗಿಯ ವಿದ್ಯಾನಿಧಿ ಸಂಸ್ಥೆಯು ಗೋದುತಾಯಿ ನಗರದ ಮಹೇಶ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಡಾ.ಸ್ವಾಮಿರಾವ್​ ಮಾತನಾಡಿದರು.
ಸಾಂಸತಿಕ ಕಲೆ, ಪರಿಸರದ ಒಡನಾಟವು ಮಕ್ಕಳಿಗೆ ಬದುಕುವ ರೀತಿ ಮತ್ತು ಛಲ ಕಲಿಸುತ್ತವೆ. ಶಾಲೆಯ ವಾತಾವರಣವು ಅಂಕಗಳಿಗೆ ಬೆನ್ನು ಬಿದ್ದಿರುವುದರಿಂದ ಇಂತಹ ಬೇಸಿಗೆಯ ಶಿಬಿರಗಳು ಇಂದು ಮಕ್ಕಳಿಗೆ ತುಂಬಾ ಅಗತ್ಯ. ಇದರಿಂದ ಅವರು ಮತ್ತಷ್ಟೂ ಉತ್ತೇಜಿತರಾಗಿ ಹುರುಪು ತುಂಬಿಕೊಂಡು ಉತ್ಸಾಹದ ಚಿಲುಮೆಗಳಾಗುತ್ತಾರೆ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ರಂಗಾಯಣ ನಿರ್ದೇಶಕಿ ಡ.ಸುಜಾತ ಜಂಗಮಶೆಟ್ಟಿ ಮಾತನಾಡಿ, ಸಾಂಸತಿಕ ಕಲೆಗಳು ಮಕ್ಕಳಲ್ಲಿ ಮಾನವೀಯತೆ, ನೈತಿಕತೆ ರೂಡಿಸುತ್ತವೆ. ಹೀಗಾಗಿ ಬೇಸಿಗೆಯ ಶಿಬಿರಗಳಲ್ಲಿ ಹಾಡು, ಕಥೆ, ನಾಟಕ, ಕರಕುಶಲತೆ ಕಲಿಕೆಯಿಂದ ಮಕ್ಕಳು ಮೌಲ್ಯಯುತ ಸಮಯ ಕಳೆಯುತ್ತಾರೆ ಎಂದರು.
ಸಂಸ್ಥೆಯ ಅಧ್ಯಕ್ಷೆ ಸಂಧ್ಯಾ ಹೊನಗುಂಟಿಕರ್​ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಂತರ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ನಡೆಯಿತು. ಧಾರವಾಡದ ಶ್ರೀಕಾಂತ ನವಿಲುಗರಿ ನಿರ್ದೇಶನದಲ್ಲಿ ಸಂಧ್ಯಾ ಹೊನಗುಂಟಿಕರ್​ ರಚಿಸಿದ ಹರಿದ ಹಾಸಿಗೆ ಹಂಬಲ ನಾಟಕ ಅದ್ಭುತವಾಗಿ ಪ್ರದರ್ಶಿಸಿದರು.
ಮಳೆ ಬಾರದ ಕಾರಣ ಗುಳೆ ಹೋಗುವ ಹಳ್ಳಿಯ ಕುಟುಂಬದ ಬಾಲಕ ಮಲ್ಯಾನನ್ನು ಗೌಡರ ಬಳಿ ಜೀತಕ್ಕೆ ಇಡುವ ದಾರುಣ ಸ್ಥಿತಿ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಬಾಲಕ ಮಾಡಿದ ಪ್ರಯತ್ನಗಳೇನು, ಕೊನೆಗೂ ಮಳೆ ಬಂದಿತೇ ಇಲ್ಲವೇ ಎಂಬ ಕುತೂಹಲಕಾರಿ ಸಂಗತಿ ಮತ್ತು ಮುಗ್ಧ ಮಕ್ಕಳ ಅಭಿನಯ ತುಂಬಿ ನೆರೆದ ಜನಸ್ತೋಮವನ್ನು ನಿಬ್ಬೆರಗಾಗಿಸಿತು. ಈ ಶಿಬಿರದ ಮಕ್ಕಳಲ್ಲಿದ್ದ ಪ್ರತಿಭೆಯನ್ನು ಹೊರತೆಗೆದಿದ್ದೇನೆ ಅಷ್ಟೇ ಎಂದು ನಾಟಕದ ಯಶಸ್ಸಿಗೆ ಕಾರಣರಾದ ನಿರ್ದೇಶಕ ಶ್ರೀಕಾಂತ ನವಿಲುಗರಿ ಅಭಿಪ್ರಾಯ ಪಟ್ಟರು. ಕಲಬುರಗಿ ರಂಗಾಯಣದ ಕಲಾವಿದ ಶ್ರೀನಿವಾಸ ಕಶೆಟ್ಟಿ ಡೋರನಳ್ಳಿ ಪ್ರಾರ್ಥಿಸಿ, ನಿರೂಪಿಸಿದರು. ಅಜಯ ಡೋಲೆ ವಂದಿಸಿದರು.

ಇಂದು ಮೌಲ್ಯಾಧಾರ ಶಿಣ, ಪರಿಸರದ ಒಡನಾಟ, ಬದುಕುವ ಕಲೆ, ಸ್ಪರ್ಧಾ ರಹಿತ ಬೆಳವಣಿಗೆ ಮಕ್ಕಳಿಗೆ ಅತೀ ಅವಶ್ಯಕ. ಈ ಉದ್ದೇಶದಿಂದ ಶಿಬಿರ ಆಯೋಜಿಸಿದ್ದು, ಹದಿನೆಂಟು ದಿನಗಳ ಕಡಿಮೆ ಅವಧಿಯಲ್ಲಿ ಮಕ್ಕಳು ಕಲಿಯುತ್ತ ಕುಣಿಯುತ್ತ ನಲಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net