ಕಲಬುರಗಿ: ನಗರದ ಅಪ್ಪ ಪಬ್ಲಿಕ್ ಶಾಲೆಯಲ್ಲಿ ನಿರಂತರ 25 ದಿನಗಳ ಕಾಲ ಚಿಕ್ಕ ಮಕ್ಕಳಿಗಾಗಿ ನಡೆದ ಬೇಸಿಗೆ ಶಿಬಿರ ಬುಧವಾರ ಸಂಭ್ರಮದ ತೆರೆ ಕಂಡಿತು.
ಪೂರ್ವ ಪ್ರಾಥಮಿಕದಿಂದ ಮಾಧ್ಯಮಿಕ ಹಂತದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಶಿಬಿರವು ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಸೃಜನಶೀಲ ಪರಿಶೋಧನೆಯ ಒಂದು ವೈವಿಧ್ಯಮಯ ಪಯಣವಾಗಿತ್ತು. ವಿದ್ಯಾರ್ಥಿಗಳಲ್ಲಿ ನೈಜ ವ್ಯಕ್ತಿತ್ವ ರೂಪಿಸುವ ಉದ್ದೇಶದೊಂದಿಗೆ ಅನೇಕ ಚಟುವಟಿಕೆ ಆಯೋಜಿಸಲಾಗಿತ್ತು.
ದೈನಂದಿನ ಯೋಗ ಮತ್ತು ವಿವಿಧ ಕ್ರೀಡೆಗಳ ಮೂಲಕ ಶಿಸ್ತು ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಳಕ್ಕೆ ಪ್ರಯತ್ನಿಸಲಾಯಿತು. ವಿದ್ಯಾರ್ಥಿಗಳು ಲಲಿತಕಲೆ, ಪ್ರದರ್ಶನ ಕಲೆಗಳ ಮೂಲಕ ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಈ ಶಿಬಿರದ ಪ್ರಮುಖ ಆಕರ್ಷಣೆಯೆಂದರೆ 'ಯುವ ನಾಯಕತ್ವ ಕಾರ್ಯಕ್ರಮ' (್ಗಟ್ಠಠಿಜ ಔಛಿಚಛಛ್ಟಿಠಜಜಿಟ ಕ್ಟಟಜ್ಟಚಞ). ಈ ಸಾಹಿತ್ಯಿಕ ಉಪಕ್ರಮವು ವಿಶೇಷವಾಗಿ ವಿದ್ಯಾರ್ಥಿಗಳ ಸಂವಹನ ಕಲೆ, ಭಾಷಣ ಕಲೆ ಮತ್ತು ಸಂಟಿತ ಕಾರ್ಯವೈಖರಿಯನ್ನು ಸುಧಾರಿಸುವ ಗುರಿಯನ್ನು ಹೊಂದಿತ್ತು.
ಶಿಬಿರದ ಭಾಗವಾಗಿ ಹೊರಸಂಚಾರನ್ನೂ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಚಿತ್ರಮಂದಿರದಲ್ಲಿ ಹಾಪರ್ ಚಲನಚಿತ್ರ ವೀಸಿ ಸಂಭ್ರಮಿಸಿದರು. ಫನ್ವರ್ಲ್ಡ್ನಲ್ಲಿ ಜಲಕ್ರೀಡೆಯ ಮೋಜು ಆನಂದಿಸಿದರು.
ಶಾಲೆಯ ಪ್ರಾಚಾರ್ಯ ಶಂಕರಗೌಡ ಹೊಸಮನಿ ಅವರು ಈ ಯಶಸ್ಸಿಗೆ ಶ್ರಮಿಸಿದ ಫೌಂಡೇಶನಲ್, ಪ್ರಿಪರೇಟರಿ ಮತ್ತು ಮಿಡಲ್ ಸೆನ್ನ ಸಂಯೋಜಕರನ್ನು ಶ್ಲಾಸಿದರು. ಸಂಯೋಜಕರು ಮತ್ತು ಸಿಬ್ಬಂದಿಯ ಪರಿಶ್ರಮದಿಂದಾಗಿ ನಿತ್ಯ ಮಕ್ಕಳಿಗೆ ಸಂತಸದ ಕಲಿಕೆಯ ಅನುಭವವಾಯಿತು. ಶಿಬಿರಕ್ಕೆ ಮಕ್ಕಳನ್ನು ದಾಖಲಿಸಿದ ಪೋಷಕ ಸಮುದಾಯಕ್ಕೆ ಕೃತತೆ ಸಲ್ಲಿಸಿದರು.
"
ಬೇಸಿಗೆ ಶಿಬಿರ ಮುಕ್ತಾಯ ಅಂದರೆ ಅಂತ್ಯವಲ್ಲ. ಹೊಸ ಆರಂಭ. ಈ ಶಿಬಿರದಲ್ಲಿ ಕಲಿತ ಶಿಸ್ತು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ರೀಡೆ, ವ್ಯಾಯಾಮ ಹಾಗೂ ಉತ್ತಮ ಆಹಾರ ಸೇವನೆ ಅನುಸರಿಬೇಕು. ಮುದ್ದು ಮಕ್ಕಳಿಗೆ ಶುಭವಾಗಲಿ.