ದಿಢೀರನೆ ಹೆಚ್ಚಳವಾದ ತರಕಾರಿ ಬೆಲೆ

ಕೆಂಭಾವಿಯಲ್ಲಿ ಸೋಮವಾರ ನಡೆದ ವಾರದ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾದ ವಿವಿಧ ತರಕಾರಿ.
ಕೆಂಭಾವಿಯಲ್ಲಿ ಸೋಮವಾರ ನಡೆದ ವಾರದ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾದ ವಿವಿಧ ತರಕಾರಿ.
Published on
ಕೆಂಭಾವಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘನಘೋರ ಯುದ್ಧದಿಂದಾಗಿ ಈವರೆಗೆ ಸಿಲಿಂಡರ್​ ಗ್ಯಾಸ್​, ಡೀಸೆಲ್​, ಪೆಟ್ರೋಲ್​ ದರ ದಿನದಿಂದ ದಿನಕ್ಕೆ ಏರುತ್ತಿತ್ತು. ಆದರೆ ಇದೀಗ ಈ ಯುದ್ಧದ ಭೀತಿ ಜನಸಾಮಾನ್ಯರ ದಿನಿತ್ಯದ ತರಕಾರಿಗೂ ಬಿಸಿ ತಟ್ಟಿದ್ದರಿಂದ ಸೋಮವಾರ ಪಟ್ಟಣದಲ್ಲಿ ನಡೆದ ವಾರದ ಸಂತೆಯಲ್ಲಿ ತರಕಾರಿ ಬೆಲೆ ಆಕಾಶದೆತ್ತರಕ್ಕೆ ಜಿಗಿದಿದೆ.
ಈರುಳ್ಳಿ ಮತ್ತು ಟೊಮೆಟೊ ಹೊರತುಪಡಿಸಿ ಮೆಣಸಿನಕಾಯಿ, ಸೌತೆಕಾಯಿ, ಬೆಂಡಿಕಾಯಿ, ಚವಳಿಕಾಯಿ ಸೇರಿ ಇನ್ನಿತರೆ ಎಲ್ಲ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ಒಂದು ಕೆಜಿಗೆ 100ರಿಂದ 120 ರೂ.ಗೆ ಸಂತೆಯಲ್ಲಿ ಮಾರಾಟವಾಗಿದೆ. 50ರಿಂದ 60ರೂಗಳವರೆಗೆ ಇದ್ದ ತರಕಾರಿ ಬೆಲೆ ದಿಢೀರ್​ ಏರಿಕೆ ಕಂಡಿದ್ದು ಇದೂ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಎಂದು ಸಮಜಾಯಿಸಿ ನೀಡುತ್ತಿದ್ದಾರೆ.
ಪ್ರತಿ ಸೋಮವಾರ ಇಲ್ಲಿನ ಪುರಸಭೆ ಆವರಣದಲ್ಲಿ ವಾರದ ಸಂತೆ ನಡೆಯುತ್ತಿದ್ದು ಪಟ್ಟಣ ಸೇರಿ ವಲಯದ ಹಲವು ಗ್ರಾಮದ ಜನರು ಮತ್ತು ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಾರೆ. ಈ ವಾರ ಭಾರಿ ದುಬಾರಿ ಬೆಲೆ ನೀಡಿ ತರಕಾರಿ ಕೊಂಡುಕೊಳ್ಳುವ ಸ್ಥಿತಿ ಒದಗಿ ಬಂದಿದ್ದು ಇದು ಹೀಗೆ ಮುಂದುವರೆದರೆ ಮಧ್ಯಮ ಮತ್ತು ಬಡ ವರ್ಗದ ಜನರ ಮೇಲೆ ಆರ್ಥಿಕ ಸ್ಥಿಯ ಘೋರ ಪರಿಣಾಮ ಬೀರುವುದಂತೂ ಗ್ಯಾರಂಟಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net