ಸಂಘಟಿತ ಹೋರಾಟದಿಂದ ಯಶಸ್ಸು ಸಾಧ್ಯ

ಸೇಡಂನ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಮಜ್ದೂರ್​ (ಅಲ್ಟ್ರಾಟೆಕ್​ ಸಿಮೆಂಟ್​ ದಿನಗೂಲಿ ಕಾರ್ಮಿಕರ) ಸಂ ಉದ್ಘಾಟನೆ ಸಮಾರಂಭದಲ್ಲಿ ದೊರೆರಾಜ್​, ರಾಧಾಕೃಷ್ಣವೇಲು, ವಿಶ್ವನಾಥ, ವಿಶ್ವರಾಧ್ಯ, ಸುಗಣ್ಣ ಅವಂಟಿ, ಶಂಕರ ಸುಲೇಗಾಂವ್​ ಇದ್ದರು.
ಸೇಡಂನ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಮಜ್ದೂರ್​ (ಅಲ್ಟ್ರಾಟೆಕ್​ ಸಿಮೆಂಟ್​ ದಿನಗೂಲಿ ಕಾರ್ಮಿಕರ) ಸಂ ಉದ್ಘಾಟನೆ ಸಮಾರಂಭದಲ್ಲಿ ದೊರೆರಾಜ್​, ರಾಧಾಕೃಷ್ಣವೇಲು, ವಿಶ್ವನಾಥ, ವಿಶ್ವರಾಧ್ಯ, ಸುಗಣ್ಣ ಅವಂಟಿ, ಶಂಕರ ಸುಲೇಗಾಂವ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಅಭಿಮತ
  • ಕಾರ್ಮಿಕರ ಸಂದ ಪದಾಧಿಕಾರಿಗಳ ಪದಗ್ರಹಣ
ಸೇಡಂ: ದಿನಗೂಲಿ ನೌಕರರೂ ಕಾಯಂ ನೌಕರರಂತೆ ಕೆಲಸ ಮಾಡುತ್ತಾರೆ. ಆದರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಅವರ ಬೇಕು ಬೇಡಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಟಿತ ಹೋರಾಟ ಅವಶ್ಯವಾಗಿದೆ ಎಂದು ಭಾರತೀಯ ಮಜ್ದೂರ್​ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಹೇಳಿದರು.
ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಮಜ್ದೂರ್​ (ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿಯ ದಿನಗೂಲಿ ಕಾರ್ಮಿಕರ) ಸಂದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಲ್ಲಿ ಮಾತನಾಡಿ, ಸಿಮೆಂಟ್​ ಕಾರ್ಖಾನೆಗಳಲ್ಲಿ ದಿನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಆದರೆ ಅವರ ಜೀವನಕ್ಕೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ನಾವೆಲ್ಲರೂ ಸೇರಿ ಸಂಟನೆ ಮೂಲಕ ನ್ಯಾಯಕ್ಕಾಗಿ ಹೋರಾಡಬೇಕಾಗಿದೆ. ಇದೀಗ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಜವಬ್ದಾರಿ ನೀಡಲಾಗಿದ್ದು, ಸಂಟಿತರಾಗಿ ಮುನ್ನುಗಬೇಕು ಎಂದು ಸಲಹೆ ನೀಡಿದರು.
ದೆಹಲಿ ಇಎಸ್​ಐ ಟ್ರಸ್ಟ್​ನ ದೊರೆರಾಜ್​, ಮಜ್ದೂರ್​ ಸಂದ ದಣ ಭಾರತದ ಸಂಟನಾ ಮಂತ್ರಿ ರಾಧಾಕೃಷ್ಣವೇಲು, ಜಿಲ್ಲಾಧ್ಯಕ್ಷ ವಿಶ್ವರಾಧ್ಯ, ಕಾನೂನು ಸಲಹೆಗಾರ ಸುಗಣ್ಣ ಅವಂಟಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶಂಕರ ಸುಲೇಗಾಂವ್​ ಇತರರಿದ್ದರು.
ಪದಾಧಿಕಾರಿಗಳು
ಮರೆಪ್ಪ ಪೂಜಾರಿ (ಗೌರವಧ್ಯಕ್ಷ), ರಾಹುಲ್​ ನಡುವಿನಕೇರಿ (ಅಧ್ಯಕ್ಷ), ಮಲ್ಲಿಕಾರ್ಜುನ, ಈರಪ್ಪ (ಉಪಾಧ್ಯಕ್ಷರು), ಮಾರುತಿ ಭರತನೂರ, ಪ್ರದಿಪ ತೆಲ್ಕೂರ (ಪ್ರಧಾನ ಕಾರ್ಯದರ್ಶಿ), ಜಗನ್ನಾಥ ಬಿಲಾಕಲ್​, ವಿಜಯಕುಮಾರ ಜಾಧವ್​ (ಸಹ ಕಾರ್ಯದರ್ಶಿ), ಮಾಣಿಕರಾವ ಮುದ್ದನಕರ್​ (ಸಂಟನಾ ಕಾರ್ಯದರ್ಶಿ), ವೀರೇಶ ಕೊಳ್ಳಿ (ಕೋಶಾಧ್ಯಕ್ಷ), ಶರಣಪ್ಪ ಸಜ್ಜನಶೆಟ್ಟಿ (ಗೌರವ ಸಲಹೆಗಾರ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net