ನಿರಂತರ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು

ಬಸವಕಲ್ಯಾಣದ ಎಸ್​ಎಸ್​ಕೆ ಬಸವೇಶ್ವರ ಕಾಲೇಜಿನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು  ವಿಜಯಪುರದ  ಹಿರಿಯ ಸಿವಿಲ್​ ನ್ಯಾಯಾಧೀಶ ಮಹೇಶ  ನಾಗರಾಳೆ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್​, ಪ್ರೊ.ಆರ್​ಡಿ ಬಾಲಿಕಿಲೆ, ಸುರೇಶ ಎಚ್​.ಆರ್​., ಶಶಿಧರ್​ ಪಾಟೀಲ್​, ವಿಠೋಬಾ ಡೊಣ್ಣೆಗೌಡರ ಇದ್ದರು.
ಬಸವಕಲ್ಯಾಣದ ಎಸ್​ಎಸ್​ಕೆ ಬಸವೇಶ್ವರ ಕಾಲೇಜಿನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ವಿಜಯಪುರದ ಹಿರಿಯ ಸಿವಿಲ್​ ನ್ಯಾಯಾಧೀಶ ಮಹೇಶ ನಾಗರಾಳೆ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್​, ಪ್ರೊ.ಆರ್​ಡಿ ಬಾಲಿಕಿಲೆ, ಸುರೇಶ ಎಚ್​.ಆರ್​., ಶಶಿಧರ್​ ಪಾಟೀಲ್​, ವಿಠೋಬಾ ಡೊಣ್ಣೆಗೌಡರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಮಹೇಶ ನಾಗರಾಳೆ ಅಭಿಮತ
  • ಎಸ್​ಎಸ್​ಕೆಬಿ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ
ಬಸವಕಲ್ಯಾಣ: ಜೀವನದಲ್ಲಿ ಯಶಸ್ಸಿಗೆ ಕಠಿಣ ಪರಿಶ್ರಮ ಒಂದೇ ದಾರಿಯಾಗಿದೆ. ಜೀವನದಲ್ಲಿ ಒಮ್ಮೊಮ್ಮೆ ಎದುರಾಗುವ ಹಿನ್ನಡೆ, ಸೋಲು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಆಗುವವರೆಗೂ ನಿರಂತರ ಪ್ರಯತ್ನ ಮಾಡಬೇಕು ಎಂದು ವಿಜಯಪುರದ ಹಿರಿಯ ಸಿವಿಲ್​ ನ್ಯಾಯಾಧೀಶ ಮಹೇಶ ನಾಗರಾಳೆ ಹೇಳಿದರು.
ನಗರದ ಎಸ್​ಎಸ್​ಕೆ .ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಬಿಸಿಎ ನಿಕಾಯದ ಆರನೇ ಸೆಮ್​ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಯ ಮತ್ತು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಎಐ ಬಂದಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಗುರಿ ತಲುಪಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್​ಎಸ್​ಕೆಬಿ ಕಾಲೇಜು ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್​ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಬಹಳಷ್ಟು ಸ್ಪರ್ಧೆಗಳಿರುವುದರಿಂದ ವಿದ್ಯಾರ್ಥಿಗಳು ಅತ್ಯುತ್ತಮ ಕೌಶಲ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಬೇಕು. ತಮ್ಮ ತಂದೆ&ತಾಯಿ, ಸಮಾಜ ಮತ್ತು ಮಹಾವಿದ್ಯಾಲಯಕ್ಕೆ ಕೀರ್ತಿ ತರುವಲ್ಲಿ ತಮ್ಮ ಕಠಿಣ ಪರಿಶ್ರಮ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಪ್ರೊ.ಆರ್​ಡಿ ಬಾಲಿಕಿಲೆ ಮತನಾಡಿ, ಉದ್ಯೋಗ ಅವಕಾಧಕ್ಕೆ ಪದವಿಯಷ್ಟೇ ಸಾಲದು, ಕೌಶಲ ಬೇಕು. ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಂಡು ಕಠಿಣ ಪರಿಶ್ರಮದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್​ಎಸ್​ಎಸ್​ ಅಧಿಕಾರಿ ಸುರೇಶ್​ ಎಚ್​.ಆರ್​., ಬಿಸಿಎ ಮುಖ್ಯಸ್ಥ ಶಶಿಧರ್​ ಪಾಟೀಲ್​, ವಿಠೋಬಾ ಡೊಣ್ಣೆಗೌಡರ, ಮಹಾದೇವ ದೇಗಾಂವ, ಡಾ.ಮಲ್ಲಿಕಾರ್ಜುನ, ದೀಪಕ ಕಾಡಾದಿ, ಜ್ಯೋತಿ ಎಂ., ಸಾ ಬಾಲಕಿಲೆ, ವಿವೇಕ ಮಾಳಿ, ಇಂದ್ರಜಿತರಡ್ಡಿ, ಶಿವಶಂಕರ, ಪಾರ್ವತಿ ತಾಂಬೋಳೆ ಇತರರಿದ್ದರು. ಭಾಗ್ಯಶ್ರೀ ಸ್ವಾಗತಿಸಿದರು. ಋತಿಕಾ ವಂದಿಸಿದರು. ಸೋನಾಲಿ ಮತ್ತು ಪ್ರೀತಿ ನಿರೂಪಣೆ ಮಾಡಿದರು. ವಿಜಯಲಕ್ಷಿ$್ಮ ಪ್ರಾರ್ಥನ ಗೀತೆ ಹಾಡಿದರು
"

ವಿದ್ಯಾರ್ಥಿಗಳಾಗಿ ಕಾಲೇಜಿಗೆ ಸೇರಿದವರು ಪದವಿ ಪಡೆದು ಪ್ರಭುದ್ಧರಾಗಿ ಹೊರ ಹೋಗುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಭವಿಷ್ಯ ರೂಪಿಗೊಳ್ಳಬೇಕಿದೆ. ಜೀವನದಲ್ಲಿ ಯಶಸ್ವಿಯಾಗಬೇಕಿದೆ. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕಂಡ ಕನಸು ಸಾಕಾರಗೊಳಿಸಬೇಕಿದೆ. ಮನೆಗೂ, ಕಲಿಸಿದ ಗುರುಗಳಿಗೂ, ಕಲಿತ ಶಾಲಾ&ಕಾಲೇಜಿಗೂ ಮತ್ತು ಗ್ರಾಮಕ್ಕೂ ಗೌರವ ತರಬೇಕಿದೆ ಎನ್ನುವದನ್ನು ಮರೆಯಬಾರದು

— ಮಹೇಶ ನಾಗರಾಳೆ ಹಿರಿಯ ಸಿವಿಲ್​ ನ್ಯಾಯಾಧೀಶರು ವಿಜಯಪುರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net