ಬಸವಕಲ್ಯಾಣದ ಎಸ್ಎಸ ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ನಶಾಮುಕ್ತ ಯುವ ವಿಕಸಿತ್ ಭಾರತ ಸಂಕಲ್ಪ ಅಭಿಯಾನ ನಿಮಿತ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ವಿಠೋಬಾ ಡೋಣ್ಣೆಗೌಡರ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್, ಡಾ.ಎಂ.ಜಿ.ಪಾಟೀಲ, ಸುರೇಶ.ಎಚ್.ಆರ್, ಮಹಾದೇವ ಡಿ., ಡಾ.ವಿಜಯಕುಮಾರ, ಭೀಮಾಶಂಕರ ಇತರರಿದ್ದರು.
ಬಸವಕಲ್ಯಾಣ: ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನದಿಂದ ದೂರವಿರಬೇಕು ಎಂದು ಎಸ್ಎಸ್ಕೆಬಿ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್ ಸಲಹೆ ನೀಡಿದರು.
ನಗರದ ಎಸ್ಎಸ್ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ನಶಾ ಮುಕ್ತ ಯುವ ವಿಕಸಿತ್ ಭಾರತ ಸಂಕಲ್ಪ ಅಭಿಯಾನ ನಿಮಿತ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದಕ ದ್ರವ್ಯ ವ್ಯಸನವು ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದರ ಜತೆಗೆ ಕುಟುಂಬದ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದರು.
ದೊಡ್ಡಪ್ಪ ಅಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಾಚಯ್ಯ ಮಠಪತಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು
ಡಾ.ಎಂ.ಜಿ.ಪಾಟೀಲ್ ಸ್ವಾಗತಿಸಿದರು, ಎನ್ಸಿಸಿ ಅಧಿಕಾರಿ ಭೀಮಾಶಂಕರ ನಿರೂಪಣೆ ಮಾಡಿದರು. ಪ್ರೊ.ವಿಠೋಬಾ ಡೋಣ್ಣೆಗೌಡರ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕೆಡೆಟ್ ರೇಣುಕಾ ಪ್ರಾರ್ಥನಾ ಗೀತೆ ಹಾಡಿದರು.
ಎನ್ಎಸ್ಎಸ್ ಅಧಿಕಾರಿಗಳಾದ ಸುರೇಶ.ಎಚ್.ಆರ್., ಮಹಾದೇವ ಡಿ, ಐಕ್ಯೂಎಸಿ ಸಂಯೋಜಕ ಡಾ.ವಿಜಯಕುಮಾರ ಇತರರಿದ್ದರು.