ವಿದ್ಯಾರ್ಥಿಗಳಲ್ಲಿರಲಿ ರಾಜಕೀಯ ಪ್ರೆಜ್ಞೆ

ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಡಿಸಿ ಇಕ್ರಮ್​ ಶರೀಫ್​, ಜಿಪಂ ಸಿಇಒ ರಾಹುಲ್​ ಸಂಕನೂರ, ಎಸಿ ರಿತಿಕಾ ವರ್ಮಾ, ವಕೀಲರ ಸಂದ ಅಧ್ಯ ಎಸ್​.ವಿ.ಪಸಾರ್​, ಪ್ರೊ.ಟಿ.ಎಂ.ಭಾಸ್ಕರ್​ ಇತರರಿದ್ದರು.
ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಡಿಸಿ ಇಕ್ರಮ್​ ಶರೀಫ್​, ಜಿಪಂ ಸಿಇಒ ರಾಹುಲ್​ ಸಂಕನೂರ, ಎಸಿ ರಿತಿಕಾ ವರ್ಮಾ, ವಕೀಲರ ಸಂದ ಅಧ್ಯ ಎಸ್​.ವಿ.ಪಸಾರ್​, ಪ್ರೊ.ಟಿ.ಎಂ.ಭಾಸ್ಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಸಲಹೆ
  • ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಕಲಬುರಗಿ: ವಿದ್ಯಾರ್ಥಿ ಸಮುದಾಯ ತಾವಾಯ್ತು, ತಮ್ಮ ಓದು, ಉದ್ಯೋಗಕ್ಕೆ ಸೀಮಿತವಾಗದೆ ದೇಶ ಮತ್ತು ಸಮ ಸಮಾಜ ನಿರ್ಮಾಣಕ್ಕೆ ರಾಜಕೀಯ ಪ್ರೆಜ್ಞೆ ಹೊಂದುವುದು ಅತಿ ಅವಶ್ಯಕವಾಗಿದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ಇಲಾಖೆ ಸಹಯೋಗದಡಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಅರಿವಿಲ್ಲದಿದ್ದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಅನೇಕ ಸ್ವಾತಂತ್ರ ಸೇನಾನಿಗಳ ಅಹಿಂಸಾತ್ಮಕ ಹೋರಾಟದಿಂದ ದೇಶ ಸ್ವಾತಂತ್ರ ಪಡೆದಾಗ ನಮ್ಮಲ್ಲಿ ಸಂವಿಧಾನ ಇರಲಿಲ್ಲ. ಕಟ್ಟ ಕಡೆಯ ವ್ಯಕ್ತಿಯ ನೋವು ಅರಿತು ಅಂಬೇಡ್ಕರ್​ ಅವರಿಗೆ ಸಂವಿಧಾನ ರಚನೆ ಜವಾಬ್ದಾರಿ ನೀಡಲಾಯಿತು. ವಿವಿಧ ದೇಶಗಳಲ್ಲಿ ಅಧ್ಯಯನ ನಡೆಸಿ ಧರ್ಮ, ಜಾತಿ, ಮತ ಪಂಥವನ್ನು ಹೊಂದಿರುವ ಭಾರತಕ್ಕೆ ಅನ್ವಯಿಸುವಂತೆ ಪ್ರಜಾಸ್ನೇಹಿ ಸಂವಿಧಾನವನ್ನು ಅಂಬೇಡ್ಕರ್​ ರಚಿಸಿದ್ದು, ದೇಶದ ದಿಕ್ಕು ಬದಲಿಸಿದೆ ಎಂದರು.
ವಿದ್ಯಾರ್ಥಿ ಹಂತದಲ್ಲಿ ನಾಯಕತ್ವ ಗುಣ ಬೆಳೆಸಬೇಕೆಂಬ ಉದ್ದೇಶದಿಂದ ಪಿಯುಸಿ, ಪದವಿ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿ ಆದೇಶ ಹೊರಡಿಸಿದೆ. ಇದಕ್ಕೆ ಹಲವರ ವಿರೋಧವಿತ್ತು. ಅದ್ಯಾವುದನ್ನು ಲೆಕ್ಕಿಸದೆ ರಾಜಕೀಯ ಹಿನ್ನೆಲೆ ಇದ್ದವರೇ ಎಂಎಲ್​ಎ, ಮಂತ್ರಿ ಆಗಬೇಕೆಂಬ ಅಪವಾದ ದೂರ ಮಾಡಲು ಸಾಮಾನ್ಯ ವ್ಯಕ್ತಿಯೂ ರಾಜಕೀಯಕ್ಕೆ ಬರಬೇಕು. ದೇಶ ಸೇವೆ ಮಾಡುವ ನಾಯಕನಾಗಿ ಹೊರಹೊಮ್ಮಬೇಕು ಎಂಬ ಸದುದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್​ ಮಾತನಾಡಿ, ಸಂರ್ಷ ಮತ್ತು ಸಂಕೀರ್ಣ ಪರ್ವದಲ್ಲಿ ನಾವಿದ್ದೇವೆ. ಭಾರತ ಪ್ರಜಾಶಾಹಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದರೂ ಈವರೆಗೆ ಸಂಪೂರ್ಣ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಜಾತಿ, ಮತ, ಧರ್ಮಗಳ ನಡುವೆ ಅಂತರ ಹೆಚ್ಚಿದೆ. ಕೆಲವರ ಸ್ವಾರ್ಥವೂ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ದೊರೆಯಲು ಸಂವಿಧಾನವೇ ಮೂಲ ಬುನಾದಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡ, ಹಿಂದುಳಿದವರನ್ನು ಮೇಲೆತ್ತುವ ಕೆಲಸವಾದಲ್ಲಿ ಮಾತ್ರ ಪ್ರಜಾಪ್ರಭುತ್ವ ದಿನಾಚರಣೆ ಸಫಲವಾಗಲಿದೆ ಎಂದರು.
ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಡಿಸಿ ಇಕ್ರಮ್​ ಶರೀಫ್​, ಜಿಪಂ ಸಿಇಒ ರಾಹುಲ್​ ಸಂಕನೂರ, ಸಮಾಜ ಕಲ್ಯಾಣ ಇಲಾಖೆ ಜೆಡಿ ಪ್ರೀತಿ ಡೊಡ್ಡಮನಿ, ಎಸಿ ರಿತಿಕಾ ವರ್ಮಾ, ವಕೀಲರ ಸಂದ ಅಧ್ಯ ಎಸ್​.ವಿ. ಪಸಾರ ಇತರರಿದ್ದರು. ಅಣವೀರ ಹರಸೂರ ಸ್ವಾಗತಿಸಿದರು. ಡಾ.ರಾಜಶೇಖರ ಮಾಂಗ ನಿರೂಪಣೆ ಮಾಡಿದರು. ಪ್ರಾಂಶುಪಾಲ ಶಿವರಾಮ ಚವ್ಹಾಣ್​ ವಂದಿಸಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಯುವ ಸಂಸತ್ತಿಗೆ ಚಾಲನೆ ನೀಡಿದರು. ಆರಾಧ್ಯ ಅವರು ಸಂವಿಧಾನ ಪೀಠಿಕೆ ಬೋಧಿಸಿದರು.
"

ದೇಶದ ಪ್ರತಿಯೊಬ್ಬ ಪ್ರಜೆ ಸ್ವಾಭಿಮಾನದಿಂದ ಬಾಳಲು ಮತ್ತು ಸಮಾನತೆ ಹಕ್ಕು ಪಡೆಯಲು ಸಂವಿಧಾನವೇ ಆಧಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ರಾಜರಲ್ಲ, ಜನರ ಸೇವಕರು. ಇದೇ ಪ್ರಜಾಪ್ರಭುತ್ವದ ವೈಶಿಷ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net