ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಲಿ

ಆರ್​ಜಿಎಸ್​ ಸರ್ಕಾರಿ ಪದವಿಪೂರ್ವ ಕಾಲೇಜಿನ 5 ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ಎಸ್​.ಬಿ.ಪೆಂಟೇದ, ಡಾ.ವೈ.ಎಂ.ಯಾಕೊಳ್ಳಿ, ಮಂಜುನಾಥ ದೊಡ್ಡಣ್ಣವರ, ರಮೇಶ ಮೋಕಾಶಿ, ಮಹೇಶ ಶೆಟ್ಟರ ಇತರರಿದ್ದರು.
ಆರ್​ಜಿಎಸ್​ ಸರ್ಕಾರಿ ಪದವಿಪೂರ್ವ ಕಾಲೇಜಿನ 5 ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ಎಸ್​.ಬಿ.ಪೆಂಟೇದ, ಡಾ.ವೈ.ಎಂ.ಯಾಕೊಳ್ಳಿ, ಮಂಜುನಾಥ ದೊಡ್ಡಣ್ಣವರ, ರಮೇಶ ಮೋಕಾಶಿ, ಮಹೇಶ ಶೆಟ್ಟರ ಇತರರಿದ್ದರು.
Published on
ಚನ್ನಮ್ಮನ ಕಿತ್ತೂರು: ವಿದ್ಯಾರ್ಥಿಗಳಲ್ಲಿ ಸಾಧಿಸುವ ಗುರಿ ಇರಬೇಕು. ಪಿಯುಸಿ ಜೀವನದ ಮಹತ್ವದ ಟ್ಟವಾಗಿದ್ದು, ತಂದೆ&ತಾಯಿ ನಿಮ್ಮಮೇಲಿಟ್ಟಿರುವ ಭರವಸೆ ಉಳಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಆರ್​ಜಿಎಸ್​ ಸರ್ಕಾರಿ ಪದವಿಪೂರ್ವ ಕಾಲೇಜಿನ 5 ನೂತನ ಕಟ್ಟಡಗಳ ಉದ್ಘಾಟನಾ ಹಾಗೂ ಸಂಸತಿ, ಕ್ರೀಡೆ, ಎನ್​ಎಸ್​ಎಸ್​, ಇಎಲ್​ಸಿ, ಬಿಎಲ್​ಸಿ ಹಾಗೂ ಇಕೋ ಕ್ಲಬ್​ ಚಟುವಟಿಕೆ ಸೋಮವಾರ ಉದ್ಘಾಟಿಸಿ ಮಾತನಾಡಿದರು. ೇತ್ರದ ವಿದ್ಯಾರ್ಥಿಗಳು ಉತ್ತಮ ಶಿಣಕ್ಕಾಗಿ ಬೇರೆ ನಗರಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎರಡು ವರ್ಷದಲ್ಲಿ ೇತ್ರದಲ್ಲಿ ಶಿಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ನಗರಗಳಲ್ಲಿರುವ ಶಿಣಕ್ಕಿಂತ ಉತ್ತಮ ಶಿಣ, ಸೌಲಭ್ಯ ನಮ್ಮಲ್ಲಿಯೇ ಸಿಗುತ್ತಿದೆ. ಶಿಣಕ್ಕಾಗಿ ಯಾವುದೇ ಸೌಲಭ್ಯ ಬೇಕಾದರೂ ಸರ್ಕಾರದಿಂದ ಒದಗಿಸುವ ಕೆಲಸ ಮಾಡುತ್ತೇನೆ. ವಿದ್ಯಾರ್ಥಿಗಳು ಮೊಬೈಲ್​ನಿಂದ ದೂರವಿದ್ದು ಓದಿನ ಕಡೆ ಹೆಚ್ಚು ಗಮನ ಕೊಡಬೇಕೆಂದು ಹೇಳಿದರು.
ಪ್ರಭಾರಿ ಪ್ರಾಚಾರ್ಯ ಎಸ್​.ಬಿ.ಪೆಂಟೇದ, ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ, ಮಂಜುನಾಥ ದೊಡ್ಡಣ್ಣವರ, ರಮೇಶ ಮೋಕಾಶಿ, ಮಹೇಶ ಶೆಟ್ಟರ, ಅಶ್ಪಾಕ್​ ಹವಾಲ್ದಾರ್​, ಕೃಷ್ಣಾ ಬಾಳೇಕುಂದ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net