ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಲಿ

ಮುಗಳಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಿಇಒ ಎ.ಎ.ಖಾಜಿ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸತೀಶ ಹುಲಕುಂದ, ಈರಣ್ಣ ಮುನವಳ್ಳಿ, ಯಲ್ಲಪ್ಪ ಕೊದನ್ನವರ, ವಿಶಾಲ ಕರೆನ್ನವರ, ಗೂಳಪ್ಪ ಬಡಿಗೇರ ಇದ್ದರು.
ಮುಗಳಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಿಇಒ ಎ.ಎ.ಖಾಜಿ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸತೀಶ ಹುಲಕುಂದ, ಈರಣ್ಣ ಮುನವಳ್ಳಿ, ಯಲ್ಲಪ್ಪ ಕೊದನ್ನವರ, ವಿಶಾಲ ಕರೆನ್ನವರ, ಗೂಳಪ್ಪ ಬಡಿಗೇರ ಇದ್ದರು.
Published on
ಮುಗಳಿಹಾಳ: ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಶನಿವಾರ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಎಸ್ಸೆಸ್ಸೆಲ್ಸಿ ಭವಿಷ್ಯದ ಅಡಿಗಲ್ಲು. ಹೀಗಾಗಿ, ವಿದ್ಯಾರ್ಥಿಗಳು ನಿಯಮಿತ ಅಭ್ಯಾಸ, ಸಮಯ ಪಾಲನೆ ಮತ್ತು ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು. ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಬಿಇಒ ಖಾಜಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಬಿಡಿಸುವ ವಿಧಾನ, ಸಮಯ ನಿರ್ವಹಣೆ ಹಾಗೂ ಮಾನಸಿಕ ಒತ್ತಡ ನಿಯಂತ್ರಣ ಕುರಿತು ಸಲಹೆ ನೀಡಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶ ಉತ್ತಮಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳಿಗೆ ನಿಯಮಿತ ವಿಶೇಷ ತರಗತಿ ನಡೆಸಬೇಕು. ಜತೆಗೆ ಅಗತ್ಯವಿರುವ ಮಕ್ಕಳಿಗೆ ವಿಶೇಷ ಮಾರ್ಗದರ್ಶನ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮಾಡಿಸಬೇಕು ಎಂದು ಸೂಚಿಸಿದರು.
ಮುಖ್ಯಶಿಕ್ಷಕ ಐ.ಜಿ.ಸುಬ್ಬಾಪುರಮಠ ಮಾತನಾಡಿದರು. ಶಿಕ್ಷಕರಾದ ಸತೀಶ ಹುಲಕುಂದ, ಈರಣ್ಣ ಮುನವಳ್ಳಿ, ಯಲ್ಲಪ್ಪ ಕೊದನ್ನವರ, ವಿಶಾಲ ಕರೆನ್ನವರ, ಗೂಳಪ್ಪ ಬಡಿಗೇರ, ಮಹೇಶ ಅಡ್ಡಣಗಿ, ಸುನೀತಾ ಪಾಟೀಲ, ವಿಜಯಲಕ್ಷಿ$್ಮ ನಿಶಾನಿಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net