ಗುರಿ ಸಾಧನೆಗೆ ವಿದ್ಯಾರ್ಥಿ ಮಿತ್ರ ಪೂರಕ

ಔರಾದ್​ ತಾಲೂಕಿನ ಕೌಡಗಾಂವ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಮತ್ತು ಮೊಬೈಲ್​ ಬಿಡಿ ಪುಸ್ತಕ ಹಿಡಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಗುರು ಮೇಹಕರೆ ಬಾಲಿಕಾ, ಸತೀಶ ಮಾಚನಾಳ, ಶಿವಕುಮಾರ, ಛಾಯಾ, ವಿಜಯಕುಮಾರ, ಸತೀಶ ಬಿರಾದಾರ, ಕೃತಿಕಾ, ಶ್ರೀದೇವಿ, ಪ್ರಭಾವತಿ, ಸಾ ಮತ್ತು ಮಕ್ಕಳಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ಮೇಹಕರೆ ಬಾಲಿಕಾ ಅಭಿಮತ
  • ಕೌಡಗಾಂವ ಅಭಿಯಾನ ಕಾರ್ಯಕ್ರಮ
ಔರಾದ್​: ವಿದ್ಯಾರ್ಥಿ ಜೀವನದಲ್ಲಿ ಬರೀ ಓದು ಮುಖ್ಯವಲ್ಲ. ಓದುವುದರ ಜತೆಗೆ ಗುರಿ ಮತ್ತು ಸ್ಪಷ್ಟತೆ ಇರಬೇಕು. ಆ ನಿಟ್ಟಿನಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಮುಖ್ಯಗುರು ಮೇಹಕರೆ ಬಾಲಿಕಾ ಎಂದು ಹೇಳಿದರು.
ತಾಲೂಕಿನ ಕೌಡಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಮತ್ತು ಮೊಬೈಲ್​ ಬಿಡಿ ಪುಸ್ತಕ ಹಿಡಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಆರ್​ಎಲ್​ ಸಮೂಹ ಸಂಸ್ಥೆಯು ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಕಲ್ಪಿಸುತ್ತಿರುವುದು ಶ್ಲಾನೀಯ. ಈ ಸಂಚಿಕೆಗಳು ವಿದ್ಯಾರ್ಥಿಗಳಿಗೆ ಸಂಗ್ರಹ ಯೋಗ್ಯವಾಗಿವೆ. ಮಕ್ಕಳಿಗೆ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಮಲ್ಲಪ್ಪ ಗೌಡ, ಶಿಕ್ಷಕ ವಿಜಯಕುಮಾರ ಮಾತನಾಡಿದರು. ಇದಕ್ಕೂ ಮುನ್ನ ಮೊಬೈಲ್​ ಬಿಡಿ ಪುಸ್ತಕ ಹಿಡಿ ಅಭಿಯಾನ ಕಾರ್ಯಕ್ರಮ ನಿಮಿತ್ತ ಗ್ರಾಮದಲ್ಲಿ ಜಾಥಾ ಮಾಡುವ ಮೂಲಕ ಮಕ್ಕಳಿಗೆ ಮೊಬೈಲ್​ದಿಂದ ದೂರ ಇರುವಂತೆ ಮಾಹಿತಿ ನೀಡಲಾಯಿತು.ಎಸ್ಸೆಸ್ಸೆಲ್ಸಿ 602 ಅಂಕ ಪಡೆದ ಸಾ ರಾಜಕುಮಾರ ಮತ್ತು ಮುಖ್ಯಗುರು ಮೇಹಕರೆ ಬಾಲಿಕಾ ಅವರನ್ನು ಸನ್ಮಾನಿಸಲಾಯಿತು. ಸತೀಶ ಮಾಚನಾಳ, ಶಿವಕುಮಾರ, ಛಾಯಾ, ವಿಜಯವಾಣಿ ಜಿಲ್ಲಾ ಪ್ರಸಾರಾಂಗ ಪ್ರತಿನಿಧಿ ಸಚ್ಚಿದಾನಂದ ಸ್ವಾಮಿ, ಸತೀಶ ಬಿರಾದಾರ, ಕೃತಿಕಾ, ಶ್ರೀದೇವಿ, ಪ್ರಭಾವತಿ, ಸಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net